ಕಲಾಕುಂಚದಿಂದ ರಾಜ್ಯ ಮಟ್ಟದ “ಕಾರ್ಡಿನಲ್ಲಿ ಕಥೆ” ಉಚಿತ ಸ್ಪರ್ಧೆಯ ಫಲಿತಾಂಶ

Upayuktha
0

ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ 50 ಪೈಸೆ ಅಂಚೆ ಕಾರ್ಡಿನಲ್ಲಿ ರಾಜ್ಯ ಮಟ್ಟದ ಉಚಿತವಾಗಿ “ಕಾರ್ಡಿನಲ್ಲಿ ಕಥೆ” ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿದೆ ಎಂದು  ತೀರ್ಪುಗಾರರಲ್ಲಿ ಒಬ್ಬರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.


ಪ್ರಥಮ ಬಹುಮಾನ ಬೆಂಗಳೂರಿನ ಭಾರ್ಗವಿ ಪಿ, ದ್ವಿತೀಯ ಬಹುಮಾನ ಬೆಂಗಳೂರಿನ ಉಮೇಶ್ ಸಿ.ಎನ್. ತೃತೀಯ ಬಹುಮಾನ ಬೆಂಗಳೂರಿನ ಸಂಜಯ್ ಹೆಚ್.ಪಾಟೀಲ್, ಸಮಾಧಾನಕರ ಬಹುಮಾನಗಳು ಉಡುಪಿ ಜಿಲ್ಲೆಯ ಕುತ್ಪಾಡಿಯ ಸರಿತಾ ಅಂಬರೀಶ್ ಭಂಡಾರಿ, ದಾವಣಗೆರೆಯ ಕುಸುಮಾ ಲೋಕೇಶ್ ಪಡೆದಿರುತ್ತಾರೆ. 


ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ  ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುತ್ತದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top