ಬಾಂಗ್ಲಾದೇಶಿ ನುಸುಳುಕೋರರ ಶೋಧ ಅಭಿಯಾನ`ನಡೆಸಿ: ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Upayuktha
0

 ನುಸುಳುಕೋರರಿಗೆ ಸಹಾಯ ಮಾಡುವವರ ಮೇಲೆ ದೇಶದ್ರೋಹದ ದೂರು ದಾಖಲಿಸಿ 



ಬಾಂಗ್ಲಾದೇಶಿ ನುಸುಳುಕೋರರನ್ನು ಓಡಿಸಿ, ದೇಶ ಉಳಿಸಿ' ಈ ಅಭಿಯಾನ ದೇಶಾದ್ಯಂತ ನಡೆಸಲಾಗುವುದು .


ಬೆಂಗಳೂರು: ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಬಾಂಗ್ಲಾದೇಶದ ನುಸುಳುಕೋರರ ಸಂಖ್ಯೆ ಭಯಾನಕವಾಗಿ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯದ ಸುರಕ್ಷೆತೆಗೆ ದೊಡ್ಡ ಅಪಾಯ ನಿರ್ಮಾಣವಾಗಿದ್ದು ಸಾಮಾಜಿಕ ಅಸ್ಥಿರತೆ, ಅಪರಾಧಗಳಲ್ಲಿ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಹಾಗೂ ಸುಳ್ಳು ದಾಖಲೆಗಳನ್ನು ಪಡೆದು ವಾಸಿಸುವವರ ದೊಡ್ಡ ಜಾಲವೇ ರಾಜ್ಯಗಳಲ್ಲಿ ಸಕ್ರಿಯವಾಗಿರುವುದು ಕಂಡುಬರುತ್ತಿದೆ. 


ಈ ಹಿನ್ನೆಲೆಯಲ್ಲಿ ಸಂಪೂರ್ಣ ದೇಶದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ನಂತಹ ಸ್ಥಿತಿ ನಿರ್ಮಾಣವಾಗುವ ಮೊದಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದಲ್ಲಿನ ಬಾಂಗ್ಲಾದೇಶಿ ನೂಸುಳುಕೋರರ ಶೋಧ ಅಭಿಯಾನ ನಡೆಸಿ ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಹುಡುಕಿ ಮತ್ತು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ದೇಶದಿಂದ ಹೊರಗಟ್ಟಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ  ಸತೀಶ್ ಕೋಚರೆಕರ ಇವರು ಆಗ್ರಹಿಸಿದ್ದಾರೆ. 


ಅವರು ಮುಂಬಯಿ ಮರಾಠಿ ಪತ್ರಕರ್ತರ ಸಂಘದಲ್ಲಿ ಫೆಬ್ರುವರಿ 3 ರಂದು ಆಯೋಜಿಸಿರುವ ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಅಭಿಯಾನದ ನಿಮಿತ್ತ ಜನಜಾಗೃತಿಗಾಗಿ ಸಂಪೂರ್ಣ ದೇಶದಲ್ಲಿ ಪ್ರತಿಭಟನೆಗಳು, ಮೋರ್ಚಾಗಳು , ಸಹಿ ಅಭಿಯಾನ, ಪೊಲೀಸರಲ್ಲಿ ದೂರುಗಳು ದಾಖಲಿಸುವುದು ಹೀಗೆ ಆಯೋಜನೆ ಕೂಡ ನಾವು ಮಾಡುವವರಿದ್ದೇವೆ` ಎಂದು ಕೋಚರೇಕರ ಇವರು ಹೇಳಿದರು. 


ಈ ಸಮಯದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಅಭಯ  ವರ್ತಕ, ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ರಾಹುಲ  ಪಾಟಕರ ಇವರು ಕೂಡ ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ವಕ್ತಾರರಾದ ಅಭಯ  ವರ್ತಕ ಇವರು, `ದೇಶದಲ್ಲಿ ಅನೇಕ ನಗರ ಪ್ರದೇಶಗಳಲ್ಲಿ ನೂರಾರು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಗಳನ್ನು ಬಂಧಿಸಲಾಗಿದೆ. 


ಮುಂಬಯಿ ಮತ್ತು ನವ ಮುಂಬಯಿಯಲ್ಲಿ 8 ರಿಂದ 10 ಲಕ್ಷಕ್ಕಿಂತಲೂ ಹೆಚ್ಚಿನ ಅಕ್ರಮ ನುಸುಳುಕೋರರು ವಾಸಿಸುತ್ತಿರುವುದಾಗಿ ಅಂದಾಜು ಮಾಡಲಾಗಿದೆ. ಇಂತಹ ಪರಿಸ್ಥಿತಿ ದೇಶಾದ್ಯಂತ ಇದೆ. ವಾಸ್ತವದಲ್ಲಿ ಈ ಅಂಕಿಅಂಶ ಹಿಮ ಪರ್ವತದ ಕೇವಲ ಒಂದು ಚಿಕ್ಕ ಭಾಗವಾಗಿದೆ. ಬಾಂಗ್ಲಾದೇಶಿ ನಸುಳುಕೋರರ ಈ ಸಮಸ್ಯೆ ದೇಶದ ಸುರಕ್ಷತೆಯ ದೃಷ್ಟಿಯಿಂದ ಬಹಳ ಗಂಭೀರವಾಗಿದ್ದು ಇದನ್ನು ಬುಡ ಸಮೇತ ತೆಗೆಯುವುದು ಅತ್ಯಾವಶ್ಯಕವಾಗಿದೆ. 


ದೇಶಾದ್ಯಂತ `ಬಾಂಗ್ಲಾದೇಶ ನುಸುಳುಕೋರ ಶೋಧ ಅಭಿಯಾನ' ನಡೆಸಬೇಕು; ಇದರ ಅಂತರ್ಗತ ದೇಶದಾದ್ಯಂತ ಎಲ್ಲಾ ಜಿಲ್ಲೆಗಳು, ನಗರಗಳು, ತಾಲೂಕುಗಳಲ್ಲಿ ಶಂಕಿತ ಸ್ಥಳಗಳಲ್ಲಿ `ಸರ್ಚ್ ಆಪರೇಷನ್/ಕೊಂಬಿಂಗ್ ಆಪರೇಷನ್' ನಡೆಸಿ ಬಾಂಗ್ಲಾದೇಶಿ ನುಸುಳುಕೋರರನ್ನು ಹುಡುಕಬೇಕು; ನಕಲಿ ದಾಖಲೆಗಳು ತಯಾರಿಸಿ ಕೊಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ; ಬಾಡಿಗೆ  ಮನೆಗಳು ನೀಡುವ ಮೊದಲು ಮನೆ ಮಾಲೀಕರು ಬಾಡಿಗೆದಾರರ, ಹಾಗೂ ಕೆಲಸಕ್ಕೆ ಇರುವ ಕಾರ್ಮಿಕರ ಯೋಗ್ಯ ವಿಚಾರಣೆ ನಡೆಸಬೇಕು, ಶಂಕಿತರೆಂದು ಕಂಡುಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು.


ನುಸುಳುಕೋರರಿಗೆ ಆಶ್ರಯ ನೀಡುವವರು, ಜಾಮೀನು ನೀಡುವವರು ಅಥವಾ ಯಾವುದೇ ರೀತಿಯ ಸಹಾಯ ಮಾಡುವವರ ಮೇಲೆ ದೇಶದ್ರೋಹದ ದೂರು ದಾಖಲೆಸಬೇಕೆಂದು ನಾವು ಆಗ್ರಹಿಸುತ್ತೇವೆ. ನಟ ಸೈಫ್ ಅಲಿಖಾನ್ ಇವರ ನಿವಾಸ ಸ್ಥಳಕ್ಕೆ ನುಗ್ಗಿ ದಾಳಿ ನಡೆಸಿರುವ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಈ ಬಾಂಗ್ಲಾದೇಶಿ ನುಸುಳುಕೋರನನ್ನು ಬಂಧಿಸಲಾಗಿದೆ. ಅವನು ನಕಲಿ ಹೆಸರಿನಲ್ಲಿ ಮುಂಬಯಿಯಲ್ಲಿ ವಾಸಿಸುತ್ತಿದ್ದನು. ದೇಶದಲ್ಲಿನ ಅನೇಕ ಸಮಸ್ಯೆಗಳಿಗೆ ಬಾಂಗ್ಲಾದೇಶಿ ನುಸುಳುಕೋರರು ಕಾರಣರಾಗಿರುವುದು ಗಮನಕ್ಕೆ ಬರುತ್ತದೆ . 


ಈ ದೃಷ್ಟಿಯಿಂದ  ಬಾಂಗ್ಲಾದೇಶಿ ನುಸುಳುಕೋರರನ್ನು ಓಡಿಸಿ, ದೇಶ ಉಳಿಸಿ' ಈ ಅಭಿಯಾನವನ್ನು ನಾವು ಎಲ್ಲಾ ಹಿಂದೂ ಸಂಘಟನೆಗಳು ಸೇರಿ ದೇಶಾದ್ಯಂತ ನಡೆಸುವೆವು. ಇದರಲ್ಲಿ ಜನಸಾಮಾನ್ಯರೂ ಸಹಕಾರ ನೀಡಬೇಕೆಂದು ಕರೆ ನೀಡುತ್ತೇವೆ. ದೇಶವನ್ನು ನುಸುಳುಕೋರರಿಂದ ಮುಕ್ತಗೊಳಿಸುವುದು ನಮ್ಮ ಸಂಕಲ್ಪವಾಗಿದೆ ಎಂದರು.


ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ರಾಹುಲ ಪಾಟಕರ ಇವರು, ಬಾಂಗ್ಲಾದೇಶಿ  ನುಸುಳುಕೋರರು ದೇಶದಲ್ಲಿನ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿನ ಸಂಭಾಜಿ ನಗರ ಜಿಲ್ಲೆಯ ಸಿಲ್ಲೋಡದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಬಾಂಗ್ಲಾದೇಶಿ  ನುಸುಳುಕೋರರಿಗೆ ನಕಲಿ ಪ್ರಮಾಣ ಪತ್ರ ಹಂಚುತ್ತಿರುವ ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 


ರತ್ನಗಿರಿ ಜಿಲ್ಲೆಯ ಚಿಪಳುನ್ ನಲ್ಲಿ  13 ಬಾಂಗ್ಲಾದೇಶಿ ನಾಗರಿಕರಲ್ಲಿ 3 ಜನರನ್ನು ಬಂಧಿಸಲಾಗಿದೆ; ಇದರಲ್ಲಿಯೂ ಸಹ ಪೊಲೀಸರು ಈ ಪ್ರಕರಣ ಸರಿಯಾಗಿ ಪರಿಶೀಲಿಸದ ಕಾರಣ ಬಾಂಗ್ಲಾದೇಶಿ ನುಸುಳುಕೋರರಿಗೆ ಜಾಮೀನು ಸಿಕ್ಕಿದೆ, ಇದು ಬಹಳ ಗಂಭೀರ ವಿಷಯವಾಗಿದೆ. ದೇಶದ ನ್ಯಾಯ ವ್ಯವಸ್ಥೆ ಬಾಂಗ್ಲಾದೇಶಿ ನುಸುಳುಕೋರರಿಗೆ ಜಾಮೀನು ನೀಡುವುದು ನ್ಯಾಯ ದೇವತೆಯ ಅವಮಾನವಾಗಿದೆ.


'ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ನಾಳೆ ಇದೇ ಬಾಂಗ್ಲಾದೇಶಿ ನುಸುಳುಕೋರರು ಹೆಚ್ಚಾಗಿ ಭಾರತದಲ್ಲಿ ಚಿಕ್ಕ ಬಾಂಗ್ಲಾದೇಶ ನಿರ್ಮಿಸಿ ಅಲ್ಲಿಯ ಹಿಂದೂಗಳ ಮೇಲೆ ಹೀಗೆ ದೌರ್ಜನ್ಯ ನಡೆಸುವರು, ಈ ಪರಿಸ್ಥಿತಿ ಬರಬಾರದೆಂದರೆ, ಈ ಪ್ರಕರಣದಲ್ಲಿ ಸರಕಾರವು ಈಗಲೇ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಕೋಚರೆಕರ ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top