ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ರಥಸಪ್ತಮಿ ದಿನಾಚರಣೆ

Upayuktha
0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಮಂಗಳವಾರ ರಥಸಪ್ತಮಿಯನ್ನು ಆಚರಿಸಲಾಯಿತು. ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸಾಯಿಲಕ್ಷ್ಮಿ ಮಾತನಾಡಿ ರಥಸಪ್ತಮಿಯು ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಪೌರಾಣಿಕ ಕಥೆಗಳ ಪ್ರಕಾರ ಸೂರ್ಯದೇವರ ಜನ್ಮದಿನ ಎಂದೂ ಹೇಳಲಾಗುತ್ತದೆ ಎಂದು ಹೇಳಿದರು. ಅಂತೆಯೇ ಸೂರ್ಯ ನಮಸ್ಕಾರದ ಪರಿಚಯವನ್ನು ಮಾಡಿದರು.


7ನೇ ತರಗತಿಯ ವಿದ್ಯಾರ್ಥಿನಿ ಪೂರ್ವಿ ಸೂರ್ಯ ನಮಸ್ಕಾರದ ಪ್ರತಿಯೊಂದು ಹಂತದ ಮಹತ್ವವನ್ನು ತಿಳಿಸಿದರು, ವಿದ್ಯಾಲಯದ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು. 6ನೇ ತರಗತಿಯ ವಿದ್ಯಾರ್ಥಿಗಳಾದ ಆದಿಶ್ರೀ ಮತ್ತು ತನ್ವಿ ನಾಗೇಂದ್ರ ಪ್ರಾರ್ಥಿಸಿದರು ಹಾಗೂ 7ನೇ ತರಗತಿಯ ನಿದಾ ಫಾತಿಮಾ ಕಾರ್ಯಕ್ರಮ ನಿರ್ವಹಿಸಿದರು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top