ಸಂಸದ ಕ್ಯಾ. ಚೌಟ ಶಿಫಾರಸಿನಂತೆ ದ.ಕ. ಟೆಲಿಕಾಂ ಸಲಹಾ ಸಮಿತಿಗೆ 8 ಮಂದಿ ಸದಸ್ಯರ ನೇಮಕ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಶಿಫಾರಸಿನ ಮೇರೆಗೆ ಭಾರತ್ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್)ನ ದಕ್ಷಿಣ ಕನ್ನಡ ಜಿಲ್ಲೆ ಟೆಲಿಕಾಂ ಸಲಹಾ ಸಮಿತಿಗೆ 8 ಮಂದಿ ಸದಸ್ಯರನ್ನು ನೇಮಕಗೊಳಿಸಿ ದೂರ ಸಂಪರ್ಕ ಸಚಿವಾಲಯವು ಆದೇಶ ಹೊರಡಿಸಿದೆ.


ಕೊರಗಪ್ಪ ನಾಯ್ಕ್ ಮುಂಡಾಜೆ, ಚರಣ್ ರಾಜ್ ಉಳ್ಳಾಲ್, ಟಿ. ಜಯಂತ್ ಸಾಲ್ಯಾನ್ ತೋಕೂರು,  ಕೆ. ರಾಮ ಕೊಂಚಾಡಿ, ಪೂರ್ಣಿಮ ರಾವ್, ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ರಾಮಕೃಷ್ಣ ಭಟ್ ಬೆಳ್ಳಾರೆ, ನಿತೀಶ್ ಕುಮಾರ್ ಶಾಂತಿವನ ಅವರನ್ನು ನೇಮಕಗೊಳಿಸಲಾಗಿದೆ.


ಈ ನಾಮನಿರ್ದೇಶಿತ ಸದಸ್ಯರ ಅಧಿಕಾರವಧಿಯು 2026ರ ಜುಲೈ 13ಕ್ಕೆ ಕೊನೆಗೊಳ್ಳುತ್ತದೆ. ಬಿಎಸ್ಎನ್ಎಲ್ನ ಮಂಗಳೂರು ವಲಯದ ಪ್ರಧಾನ ಮಹಾ ಪ್ರಬಂಧಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತದೆ ಎಂದು ಭಾರತೀಯ ಟೆಲಿಕಾಂ ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. 


ನೂತನವಾಗಿ ನೇಮಕಗೊಂಡಿರುವ ಜಿಲ್ಲೆಯ ಎಂಟು ಮಂದಿ ಸದಸ್ಯರನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top