ಯಕ್ಷಗಾನವು ಸಧೃಡ ಸಶಕ್ತ ಕಲೆ: ಧರ್ಮದರ್ಶಿ ಹರಿಕೃಷ್ಣ ಪುನರೂರು

Upayuktha
0


ಮಂಗಳೂರು: ದೇಶದ ಹಲವಾರು ಕಲೆಗಳಲ್ಲಿ ಯಕ್ಷಗಾನವು ಅಗ್ರಸ್ಥಾನ ಎನ್ನು ಪಡೆದಿದೆ. ನೃತ್ಯ ಸಾಹಿತ್ಯ ಹಿಮ್ಮೇಳಗಳಿಂದ ಶ್ರೀಮಂತವಾಗಿದ್ದು ವಿಶ್ವದಲ್ಲಿಯೇ ಸಶಕ್ತ- ಸದೃಢ ಕಲೆಯಾಗಿರುತ್ತದೆ. ಬೇರೆ ರಾಜ್ಯಗಳಲ್ಲಿರುವ ಕಲೆಗಳೂ ಹೆಚ್ಚು ಹೆಚ್ಚಾಗಿ ಯಕ್ಷಗಾನಕ್ಕೆ ಸಮೀಪವೇ ಇವೆ. ರಾಜಕಲೆ ಯಾದ ಇದನ್ನು ರಾಜಾಶ್ರಯದಿಂದ ಬೆಳೆಸೋಣ" ಎಂದು ಡಾ. ಹರಿಕೃಷ್ಣ ಪುನರೂರು ಹೇಳಿದರು. 


ಅವರು ಮಂಗಳಾದೇವಿಯಲ್ಲಿ ನಡೆದ ಅಲೆವೂರಾಯ ಪ್ರತಿಷ್ಠಾನದ ಎಂಟನೇ ವರ್ಷದ "ಯಕ್ಷ ತ್ರಿವೇಣಿ"ಯನ್ನು ಉದ್ಘಾಟಿಸಿ ಮಾತನಾಡಿದರು.


ಮಂಗಳಾದೇವಿ ದೇವಳದ ಮೊಕ್ತೇಸರರಾದ ಅರುಣ್ ಐತಾಳರು "ನಮ್ಮಂತಹ ದೇವಸ್ಥಾನಗಳಲ್ಲಿ ಇಂತಹ ಕಲಾಪ್ರಕಾರಗಳ ಪ್ರದರ್ಶನಕ್ಕೆ ಖಂಡಿತಾ ಅವಕಾಶವಿದೆ. ಅಲೆವೂರಾಯ ಸಹೋದರರ ಈ ಪ್ರಯತ್ನಕ್ಕೆ ಶುಭವಾಗಲಿ" ಎಂದು ಶುಭ ಹಾರೈಸಿದರು.


ಅಲೆವೂರಾಯ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕ, ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಸುಜಯೀಂದ್ರ ಹಂದೆಯವರು "ನಮ್ಮ ಮಕ್ಕಳ ಮೇಳದಂತೆಯೇ ಇಲ್ಲಿಯೂ ಇದೆ. ಇದನ್ನು ನಾವು ದೇವರ ಕಲೆ ಎಂದು ಆರಾಧಿಸುತ್ತೇವೆ. ಹಾಗಾಗಿ ಈ ಸನ್ಮಾನ ನನಗೆ ದೊರೆತಿರುವುದು ತುಂಬಾ ಸಂತಸದ ವಿಷಯ" ಎಂದರು.


ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಜನಾರ್ದನ ಹಂದೆ, ಉಪನ್ಯಾಸಕ ಬಾಲಕೃಷ್ಣ ಶೆಟ್ಟಿ ಯವರ ಹಿಮ್ಮೇಳ ಕಲಾವಿದ ವೇಣುಗೋಪಾಲ ಮಾಂಬಾಡಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.


ಪ್ರತಿಷ್ಠಾನದ ವಿಶ್ವಸ್ಥರಾದ ವರ್ಕಾಡಿ ರವಿ ಅಲೆವೂರಾಯ ಸ್ವಾಗತ- ಪ್ರಸ್ತಾವನೆ ಮಾಡಿದರು. ಸುಧಾಕರ ರಾವ್ ಪೇಜಾವರ ನಿರೂಪಣೆ ಮಾಡಿದರು. ಮಧುಸೂದನ ಅಲೆವೂರಾಯ ವರ್ಕಾಡಿ ಧನ್ಯವಾದವಿತ್ತರು. ಬಳಿಕ 'ಭೂಭಾರ ಹರಣ' ಬಯಲಾಟ ಜರಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top