ಆಳ್ವಾಸ್‌ನ ಮಹಿಳಾ ಉದ್ಯೋಗಿಗಳಿಗೆ ಕ್ರೀಡಾಕೂಟ ಆಯೋಜನೆ

Upayuktha
0



ಮೂಡುಬಿದಿರೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಭಾವಿಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಕ್ಷಮ ಮಹಿಳಾ ವೇದಿಕೆ, ಡೆಕಾಥ್ಲಾನ್ ಮತ್ತು ಏರೋಡೈನಾಮಿಕ್ಸ್  ಸಹಯೋಗದಲ್ಲಿ ಸ್ವರಾಜ್ಯ  ಮೈದಾನದಲ್ಲಿ ಆಳ್ವಾಸ್ ಸಂಸ್ಥೆಯ ಮಹಿಳಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.


ಮಂಗಳೂರಿನ ಇಂಡಿಯನ್ ಕೋಸ್ಟ್ ಗಾರ್ಡ್ ನ ಸಹಾಯಕ ಕಮಾಂಡೆಂಟ್ ಪ್ರಿಯಾ ಮಾತನಾಡಿ, ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.  ಪುರುಷನಷ್ಟೇ ಸಮರ್ಥರಾಗಿ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ  ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ರಾಷ್ಟ್ರದ ಗಡಿಗಳನ್ನು ಕಾಪಾಡುವುದು ಅತ್ಯಂತ ಕಠಿಣ ಕೆಲಸವಾದರೂ, ಮಹಿಳೆಯರು ಈ ಸವಾಲಿನ ಕೆಲಸಗಳಲ್ಲಿ  ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.


ಆಳ್ವಾಸ್  ಶಿಕ್ಷಣ  ಪ್ರತಿಷ್ಠಾನದ ವಿವಿಧ ಸಂಸ್ಥೆಗಳ  ಮಹಿಳಾ  ಉದ್ಯೋಗಿಗಳಿಂದ ಪಥಸಂಚಲನದೊಂದಿಗೆ  ಕ್ರೀಡಾಕೂಟಕ್ಕೆ  ಚಾಲನೆ  ನೀಡಲಾಯಿತು. ಆಳ್ವಾಸ್ ಸೆಂಟ್ರಲ್ ಶಾಲೆಯ ಕ್ರೀಡಾ ಶಿಕ್ಷಕರಾದ ಆಶಾ, ಉಷಾ ಕುಮಾರಿ ಮತ್ತು ಚಿತ್ರಾವತಿ, ಆಳ್ವಾಸ್ ಪ್ರಾಥಮಿಕ ಶಾಲೆಯ ಕವಿತಾ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಹರ್ಷಿತಾ ಶೆಟ್ಟಿ, ಶಾಂಭವಿ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ  ಕಾಲೇಜಿನ ಭಾಗ್ಯಲಕ್ಷ್ಮಿ ಮತ್ತು ಅಕ್ಷತಾ  ಕ್ರೀಡಾ ಜ್ಯೋತಿಯ ನೇತೃತ್ವ ವಹಿಸಿದ್ದರು.


ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ  ಹಾಗೂ ಪ್ರಸೂತಿ ತಜ್ಞೆ ಡಾ.ಹನ ಶೆಟ್ಟಿ, ಆಳ್ವಾ ಫಾರ್ಮಸಿಯ ಆಡಳಿತಾಧಿಕಾರಿ ಡಾ.ಗ್ರೀಷ್ಮಾ ವಿವೇಕ್ ಆಳ್ವ, ಅರಿವಳಿಕೆ ತಜ್ಞೆ ಡಾ. ಮಮತಾ ಗುರುಪ್ರಸಾದ್, ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಧು ಜಿ.ಆರ್, ದೈಹಿಕ ಶಿಕ್ಷಣ ನಿರ್ದೇಶಕಿ ಹಂಸಾವತಿ ಸಿ.ಹೆಚ್., ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಎಸ್.ಶೆಟ್ಟಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ರೈ ಇದ್ದರು.


ಕ್ರೀಡಾ ದಿನದ ಪೂರ್ವಭಾವಿಯಾಗಿ ಎರಡು ಹಂತದ ಸ್ಪರ್ಧೆಗಳನ್ನು ನಡೆಸಲಾಯಿತು. ಮೊದಲ ಹಂತದಲ್ಲಿ ಚೆಸ್, ಬ್ಯಾಡ್ಮಿಂಟನ್ ಮತ್ತು ಈಜು ಎರಡನೇ ಹಂತದಲ್ಲಿ ಥ್ರೋಬಾಲ್, ಡಾಡ್ಜಾಲ್ ಮತ್ತು ಕೇರಂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


ಕ್ರೀಡಾಕೂಟದ ದಿನದಂದು 100ಮೀ ಓಟ, 200ಮೀ ಓಟ, 400ಮೀ ಓಟ, ಶಾಟ್-ಪುಟ್, ಲಾಂಗ್ ಜಂಪ್, 4*1೦೦ ಮೀಟರ್ ರಿಲೇ ಜೊತೆಗೆ ಸ್ಟೇಷನ್ ಆಟಗಳು, ಸಂಗೀತ ಕುರ್ಚಿ ಮತ್ತು ಹಗ್ಗಜಗ್ಗಾಟ ಸೇರಿದಂತೆ ಹಲವಾರು ಕ್ರೀಡೆಗಳು ನಡೆದವು. ಕಾರ್ಯಕ್ರಮದ ನಿರೂಪಣೆಯನ್ನು ರಶ್ಮಿನ್ ತನ್ವೀರ್  ನಿರ್ವಹಿಸಿ, ಆಳ್ವಾಸ್ ನಿರಾಮಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ  ಡಾ ಸುರೇಖಾ ಪೈ ವಂದಿಸಿದರು. ನವೀನಚಂದ್ರ ಅಂಬೂರಿ, ಡಾ ಸುಧಾರಾಣಿ, ಡಾ ಸುಲತಾ  ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ನೀಡಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top