ಜೇನುಕುಟುಂಬ ಪೆಟ್ಟಿಗೆಗೆ ಬಂದಾಗ...

Upayuktha
0


ತಂಪಾದ ಸ್ಥಳದಲ್ಲಿ ಜೇನು ಪೆಟ್ಟಿಗೆಗಳಿಗೆ ಅಥವಾ ಮಣ್ಣಿನ ಮಡಕೆಗಳಿಗೆ ಜೇನುಮಯಣವನ್ನು ಸವರಿ ಇಟ್ಟಾಗ ಕೆಲವೊಮ್ಮೆ ಜೇನುಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಹೊಸದಾಗಿ ಜೇನುಕೃಷಿ ಪ್ರಾರಂಭಿಸುವವರಿಗೆ ಹಲವಾರು ಪ್ರಶ್ನೆಗಳು ಬರುವುದು ಸಹಜ. ಕೆಲವೊಂದು ಸಲ ಮಾಹಿತಿಯ ಕೊರತೆಯಿಂದ ಏನೋ ಮಾಡಲು ಹೋಗಿ ಜೇನುಕುಟುಂಬವೇ ಪರಾರಿ ಆಗುವ ಸಾಧ್ಯತೆ ಇದೆ.


ಜೇನುನೊಣಗಳು ಮೊದಲಿಗೆ ತಮಗೆ ವಾಸಿಸಲು ಯೋಗ್ಯವಾದ ಸ್ಥಳದ ಆಯ್ಕೆ ಮಾಡುತ್ತವೆ. ಈ ಸಂದರ್ಭದಲ್ಲಿ ಒಂದೆರಡು ಜೇನ್ನೊಣಗಳು ಬಂದು ಪೆಟ್ಟಿಗೆಯ ಸುತ್ತ ಮುತ್ತ ಹಾರಾಡಿ ಪೆಟ್ಟಿಗೆಯ ಒಳಗೆ ಹೋಗಿ ನೋಡಿ ವಾಸನೆ, ಶತ್ರುಗಳ ಕಾಟ ಇತ್ಯಾದಿಗಳ ಬಗ್ಗೆ ಪರಿಶೀಲನೆ ಮಾಡುತ್ತವೆ. ನೋಡ ನೋಡುತ್ತಿದ್ದಂತೆ ಒಂದೆರಡು ಇದ್ದ ಜೇನ್ನೊಣಗಳು ಎಂಟು ಹತ್ತು ಹನ್ನೆರಡು... ಹೀಗೆ ಬಂದು ವಾಸಸ್ಥಳನ್ನು ಪರಿಶೀಲಿಸಿ, ತಮಗೆ ಒಪ್ಪಿಗೆ ಆದಲ್ಲಿ ಇತರ ಜೇನ್ನೊಣಗಳನ್ನು ರಾಣಿಯೊಂದಿಗೆ ಕರೆತಂದು ಪೆಟ್ಟಿಗೆಯ ಒಳಗೆ ಸೇರಿಕೊಳ್ಳುತ್ತವೆ.


ಈಗ ಜೇನುಕೃಷಿಕರು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಜೇನ್ನೊಣಗಳೆಲ್ಲಾ ಒಳಗೆ ಸೇರಿದ ಅನಂತರ ರಾಣಿ ತಡೆಗೇಟನ್ನು ಅಳವಡಿಸಿ ಅದನ್ನು ಹತ್ತು ದಿನಗಳ ತನಕ ತೆಗೆಯಬಾರದು.


ಬೇರೆ ಕುಟುಂಬಗಳು ನಮ್ಮಲ್ಲಿ ಇದ್ದರೆ ಸಂಸಾರ ಕೋಣೆಯಿಂದ ಒಂದು ಹೊಸತಾದ, ಎಳೆ ಮೊಟ್ಟೆ ಮರಿಗಳಿರುವ ಎರಿಯೊಂದನ್ನು ತೆಗೆದು ಜೇನ್ನೊಣಗಳನ್ನು ಅದೇ ಪೆಟ್ಟಿಗೆಗೆ ಬಿಟ್ಟು, ನೊಣರಹಿತವಾಗಿ ಹೊಸತಾಗಿ ಬಂದು ಸೇರಿಕೊಂಡ ಕುಟುಂಬಕ್ಕೆ ಕೊಡಬೇಕು. ಮೊಟ್ಟೆ ಮರಿಗಳಿರುವುದರಿಂದ ಅಲ್ಪ ಸ್ವಲ್ಪ ತೊಂದರೆ ಆದರೂ ಕುಟುಂಬ ಪೆಟ್ಟಿಗೆಯನ್ನು ಬಿಟ್ಟು ಪಕ್ಕನೆ ಹೋಗಲಾರದು. ಮತ್ತೆ ಹತ್ತಾರು ದಿನಗಳ ಕಾಲ ಪೆಟ್ಟಿಗೆಯನ್ನು ಮುಟ್ಟಬಾರದು.


ಬೇರೆ ಕುಟುಂಬಗಳು ಇಲ್ಲದಿದ್ದರೆ ರಾಣಿ ತಡೆಗೇಟನ್ನು ಅಳವಡಿಸಿದ ನಂತರ ಪೆಟ್ಟಿಗೆಯನ್ನು ಮುಟ್ಟಬಾರದು. ಸ್ವಲ್ಪವೇ ತೊಂದರೆ ಆದರೂ ಜೇನ್ನೊಣಗಳು ಪೆಟ್ಟಿಗೆಯನ್ನು ಬಿಟ್ಟು ಪರಾರಿ ಆಗುವ ಸಾಧ್ಯತೆ ಇದೆ.


ಹತ್ತು ದಿನಗಳ ನಂತರ ಅವಶ್ಯಕತೆಗೆ ಅನುಗುಣವಾಗಿ ಮಯಣದ ಹಾಳೆ, ಸಕ್ಕರೆ ನೀರು ಇತ್ಯಾದಿಗಳನ್ನು ಕೊಟ್ಟು ಕುಟುಂಬದ ಅಭಿವೃದ್ಧಿಗೆ ಸಹಕರಿಸಬಹುದು.


ಬಂದು ಸೇರಿದ ಕುಟುಂಬದಲ್ಲಿ ಗಂಡುನೊಣಗಳು ಇದ್ದರೆ ಸಾಯಂಕಾಲ ಐದು ಗಂಟೆಯ ಅನಂತರ ರಾಣಿ ತಡೆಗೇಟನ್ನು ತೆಗೆದು, ಬೆಳಿಗ್ಗೆ ಎಂಟು.... ಎಂಟೂವರೆಯ ಮೊದಲು ಮತ್ತೆ ಅಳವಡಿಸಬೇಕು. ಹಾಗೆ ಮಾಡಿದರೆ ರಾಣಿತಡೆಗೇಟಿನಿಂದಾಗಿ ಗಂಡು ನೊಣಗಳು ಹೊರಬರಲಾರದೆ ಗೇಟಿನ ಬದಿಯಲ್ಲಿ ಸತ್ತು ಕೆಲಸಗಾರ ನೊಣಳಿಗೆ ಕೆಲಸಕ್ಕೆ ತೊಂದರೆ ಉಂಟಾಗುತ್ತದೆ. ಗಂಡು ನೊಣಗಳು ಸಾಯಂಕಾಲದ ಹೊತ್ತಿಗೆ ಗೂಡಿನಿಂದ ಹೊರ ಬಂದು ಹಾರಾಟ ಮಾಡುವುದು ಪದ್ಧತಿ.


- ಶಿರಂಕಲ್ಲು ಕೃಷ್ಣ ಭಟ್ 

7975159138


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top