ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಗೇಣಿ ಒಕ್ಕಲುಗಳ ಸಮಸ್ಯೆ ಅತ್ಯಂತ ಐತಿಹಾಸಿಕವಾಗಿದ್ದು ಸ್ವಾತಂತ್ರ್ಯ ದೊರಕಿ ಏಳುವರೆ ದಶಕಗಳ ಅನಂತರವೂ ಜೀವಂತವಾಗಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ. ಈ ರೀತಿಯ ಶೇೂಷಣೆ ನಿವಾರಿಸುವರೆ ರಾಜ್ಯ ಸರ್ಕಾರ 2011ರಲ್ಲಿ ಮೂಲಗೇಣಿದಾರರಿಗೆ ಭೂಮಿಯ ಸಂಪೂರ್ಣ ಒಡೆತನ ಖಾತ್ರಿ ಪಡಿಸುವ ಕಾಯಿದೆ ನಿಣ೯ಯಿಸಿ ರಾಷ್ಟ್ರಪತಿಗಳ ಅಂಕಿತವನ್ನು ಪಡೆದು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಹಿತಾಸಕ್ತಿ ಮೂಲಿದಾರರು ಹೈಕೋರ್ಟ್ ಮೆಟ್ಟಿಲು ಹತ್ತಿದರು.
ಇದರ ಪರಿಣಾಮವಾಗಿ ರಾಜ್ಯ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ಮೂಲಗೇಣಿದಾರರ ಬೇಡಿಕೆ ನ್ಯಾಯಯುತವಾಗಿದೆ ಎಂದು ತೀಪು೯ ನೀಡಿತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕಾರಣ ಇದೀಗ ತೀರ್ಪು ಬರುವ ಹಂತದಲ್ಲಿದ್ದು ಈ ನ್ಯಾಯ ಪಡೆಯುವಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಮೂಲಗೇಣಿದಾರರು ಒಟ್ಟಾಗಿ ಧ್ವನಿ ಎತ್ತಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಅವರು ಮೂಲಗೇಣಿದಾರರ ಸಮಾವೇಶವನ್ನು ಉದ್ದೇಶಿಸಿ ವಿಶೇಷ ಮಾಹಿತಿ ಉಪನ್ಯಾಸ ನೀಡಿದರು. ಉಡುಪಿ ಜಿಲ್ಲಾ ಬಳಕೆದಾರರ ವೇದಿಕೆಯ ಹೊರಗಿನ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿತು. ಮಂಗಳೂರು ಮೂಲಗೇಣಿ ಒಕ್ಕಲು ವೇದಿಕೆಯ ಅಧ್ಯಕ್ಷರಾದ ಎಂ.ಕೆ. ಯಶೇೂಧರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೂಲಗೇಣಿ ಹೇೂರಾಟದ ಪ್ರತಿಯೊಂದು ಅನುಭವಗಳನ್ನು ಸಭೆಯ ಮುಂದೆ ಎಳೆ ಎಳೆಯಾಗಿ ಹಂಚಿಕೊಂಡರು. ಸಮಾವೇಶದ ವೇದಿಕೆಯಲ್ಲಿ ಹಿರಿಯ ಪದಾಧಿಕಾರಿಗಳಾದ ಕ್ಯಾಪ್ಟನ್ ಹ್ಯುಗಸ್ ಮಂಗಳೂರು, ಕೇೂಶಾಧಿಕಾರಿ ಶಂಕರ್ ಪ್ರಭು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸಂಘಟನಾ ಪ್ರತಿನಿಧಿ ಎಸ್.ಎಸ್. ಶೇಟ್ ವಂದಿಸಿದರು. ಉಡುಪಿ ಜಿಲ್ಲಾ ಏಳು ತಾಲೂಕಿನ ಮೂಲಗೇಣಿದಾರರು ಸಮಾರಂಭದಲ್ಲಿ ಉಪಸ್ಥಿತರಿದ್ದು ಸಂವಾದ ಕಾರ್ಯಕ್ರಮದಲ್ಲಿ ಭಾವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ