ಹಿಂದೂ ರಾಷ್ಟ್ರದ ಸಂವಿಧಾನವು ರಾಮರಾಜ್ಯದಂತಿರಲಿದೆ - ಸ್ವಾಮಿ ಆನಂದಸ್ವರೂಪ ಮಹಾರಾಜರು, ಶಾಂಭವಿ ಪೀಠಾಧೀಶ್ವರ.
ಪ್ರಯಾಗರಾಜ : ಭಾರತ ಹಿಂದೂ ರಾಷ್ಟ್ರವೆಂದು ಘೋಷಿತವಾಗುವುದು, ಇದು ನನ್ನ ಜೀವನದ ಅಂತಿಮ ಧ್ಯೇಯವಾಗಿದೆ. ಸ್ವಾತಂತ್ರ್ಯದ ನಂತರ ಹಿಂದೂಗಳ ಗುರುಕುಲ ಶಿಕ್ಷಣ ಪದ್ಧತಿ ನಿಲ್ಲಿಸಲಾಯಿತು. ಸಂವಿಧಾನದ ಮೂಲಕ ಶಾಲೆಗಳಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ನಿಷೇಧಿಸಲಾಯಿತು; ಆದರೆ ಮುಸಲ್ಮಾನರಿಗೆ ಮದರಸಾಗಳಲ್ಲಿ ಅವರ ಇಸ್ಲಾಂ ಪಂಥದ ಶಿಕ್ಷಣ ನೀಡಲಾಗುತ್ತಿದೆ.
ಭಾರತದಲ್ಲಿ ಗುರುಕುಲದಲ್ಲಿ ಶಿಕ್ಷಣ ನೀಡಿದರೆ, ಆಗ ವ್ಯಭಿಚಾರ, ಬಲಾತ್ಕಾರ, ಭ್ರಷ್ಟಾಚಾರ ನಿಲ್ಲುವುದು. ನಮ್ಮ ಭಗವದ್ಗೀತೆಯಲ್ಲಿ ಎಂದಾದರೂ ಸುಧಾರಣೆ ಆಗಿದೆಯೇ ? ಆದರೆ ಸಂವಿಧಾನದಲ್ಲಿ100 ಕಿಂತಲೂ ಹೆಚ್ಚಿನ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಸಂವಿಧಾನದಲ್ಲಿ ಹಿಂದೂಗಳಿಗೆ ಎರಡನೆಯ ಸ್ಥಾನ ನೀಡಿದ್ದಾರೆ; ಆದರೆ ಹಿಂದೂ ರಾಷ್ಟ್ರದ ಸಂವಿಧಾನದಲ್ಲಿ 'ಹಿಂದೂ' ಇದೇ ಕೆಂದ್ರಬಿಂದು ಆಗಿರುವುದು.
ಹಿಂದೂ ರಾಷ್ಟ್ರದ ಸಂವಿಧಾನದಲ್ಲಿ ಯಾವುದೇ ಇತರ ಪಂಥಗಳಿಗೆ ವಿರೋಧ ಇರುವುದಿಲ್ಲ. ಹಿಂದೂ ರಾಷ್ಟ್ರದ ಸಂವಿಧಾನ ಇದು ರಾಮ ರಾಜ್ಯದ ಸ್ವರೂಪವಾಗಿರುವುದು. ಎಂದು ಕಾಲಿ ಸೇನೆಯ ಸಂಸ್ಥಾಪಕ ಹಾಗೂ ಶಾಂಭವಿ ಪೀಠಾಧೀಶ್ವರ ಪ. ಪೂ. ಸ್ವಾಮಿ ಆನಂದ ಸ್ವರೂಪಜಿ ಮಹಾರಾಜರು ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಪ್ರತಿಪಾದಿಸಿದರು.ಈ ಅಧಿವೇಶನದಲ್ಲಿ ಆನಂದ ಸ್ವರೂಪಜಿ ಮಹಾರಾಜರು, 'ಹಮ್ ಹಿಂದೂ ಹೈ' ಈ ಹಿಂದೂ ರಾಷ್ಟ್ರ ಗೀತೆಯ ಲೋಕಾರ್ಪಣೆ ಮಾಡಿದರು.
ಕೋಟ್ಯಾಂತರ ಹಿಂದೂಗಳ ಶ್ರದ್ಧೆಯ ಮಹಾಕುಂಭ ಪರ್ವದಲ್ಲಿ ಉಪಸ್ಥಿತ ಸಂತ ಮಹಂತರು ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಘೋಷಣೆ ಮಾಡಿದರು. ಈ ದಿನ ಸಮಸ್ತ ಸಂತರ ವಂದನೀಯ ಉಪಸ್ಥಿತಿಯಲ್ಲಿ ಹಿಂದೂ ರಾಷ್ಟ್ರದ ಸಂವಿಧಾನದ ಕರಡು ಸಮರ್ಪಣೆ ಮಾಡಲಾಯಿತು.
ಕಾಲಿ ಸೇನಾ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿಯಾಗಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಅಧಿವೇಶನ ಸೆಕ್ಟರ್ ೯ ಇಲ್ಲಿ ಶಾಂಭವಿ ಪೀಠದ ಕಾಲಿ ಸೇನೆಯ ಶಿಬಿರದಲ್ಲಿ ಮಂಗಳವಾರ 4 ಫೆಬ್ರವರಿಯಂದು ನೆರವೇರಿತು. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಅದನ್ನು ನಡೆಸಲು ನೇತೃತ್ವ ವಹಿಸುವ ಸಂಕಲ್ಪ ಉಪಸ್ಥಿತ ಎಲ್ಲಾ ಸಂತ ಮಹಂತರು ಮಾಡಿದರು.
ಧರ್ಮಶಿಕ್ಷಣ, ಧರ್ಮಜಾಗೃತಿ ಹಾಗೂ ಹಿಂದೂಸಂಘಟನೆ ಇವುಗಳ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆ - ಸದ್ಗುರು (ಡಾ.) ಚಾರುದತ್ತ ಪಿಂಗಳೆ
ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು, 18 ನೆಯ ಶತಮಾನದವರೆಗೆ ಭಾರತ ಒಂದು ಸ್ವಯಂಭೂ ಹಿಂದೂ ರಾಷ್ಟ್ರ ಮತ್ತು ಆರ್ಥಿಕ ಮಹಾಕೇಂದ್ರ ಆಗಿತ್ತು. ಆ ಸಮಯದಲ್ಲಿ ಭಾರತ ವೈಶ್ವಿಕ ವ್ಯಾಪಾರದಲ್ಲಿ ಅಗ್ರಸ್ಥಾನದಲ್ಲಿತ್ತು. ಇಂದು ಸೆಕ್ಯುಲರ್ ಆಡಳಿತ ವ್ಯವಸ್ಥೆಯಿಂದ ನಮ್ಮ ಸ್ಥಿತಿ ಏನಾಗಿದೆ? ಇಂದು ಅನ್ಯ ಪಂಥೀಯರ ದೇಶಗಳಲ್ಲಿ ದೇಶದ ಆಯಾ ಪಂಥದ ಜನರ ಬಗ್ಗೆ ಪ್ರಾಧಾನ್ಯತೆಯಿಂದ ಕಾಳಜಿ ವಹಿಸುತ್ತಾರೆ; ಆದರೆ ಭಾರತ ಹಿಂದೂ ಬಹುಸಂಖ್ಯಾತರಾಗಿದ್ದರೂ ಹಿಂದೂ ಹಿತದ ರಕ್ಷಣೆ ಮಾಡಲಾಗುತ್ತಿಲ್ಲ.
ಆದ್ದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರವಾಗುವುದು ಆವಶ್ಯಕವಾಗಿದೆ. ಧರ್ಮಶಿಕ್ಷಣ, ಧರ್ಮಜಾಗೃತಿ, ಹಾಗೂ ಹಿಂದೂ ಸಂಘಟನೆ ಇವುಗಳ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಹಿಂದೂ ಸಮಾಜ ಮತ್ತು ದೇಶವನ್ನು ಉಳಿಸುವ ಏಕೈಕ ಮಾರ್ಗವಾಗಿದೆ.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಪೂರ್ಣ ಭಾರತದಲ್ಲಿ ದಿಗ್ವಿಜಯ ಯಾತ್ರೆ ನಡೆಸಬೇಕು - ಗೋವಿಂದಾನಂದ ಸರಸ್ವತಿ , ಜ್ಯೋತಿರ್ಮಠ
ಯಾವುದೇ ಕಾರ್ಯ ಶಾಸ್ತ್ರಸಮ್ಮತವಾಗಿರಬೇಕು. ಆದ್ಯಶಂಕರಚಾರ್ಯರು ಶಾಸ್ತ್ರದ ಆಧಾರದಲ್ಲಿಯೇ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದ್ದರು. ಆದ್ಯಶಂಕರಾಚಾರ್ಯರು ಹಿಂದೂ ರಾಷ್ಟ್ರದ ಪುನರ್ಸ್ಥಾಪನೆಗಾಗಿ ನಾಲ್ಕು ಪೀಠಗಳ ನಿರ್ಮಾಣ ಮಾಡಿದರು. ಭಗವಾನ್ ಶ್ರೀಕೃಷ್ಣ , ಶ್ರೀರಾಮ ಇವರು ಧರ್ಮ ರಕ್ಷಣೆಗಾಗಿಯೇ ಅವತಾರ ತಾಳಿದ್ದರು.
ಹಿಂದೂ ಸ್ವಧರ್ಮವನ್ನು ಮರೆತಿದ್ದಾರೆ. ಅವರಿಗೆ ಸನಾತನ ಹಿಂದೂ ಧರ್ಮದ ನೆನಪು ಮಾಡಿಕೊಡುವುದು ಸಂತರ ಕಾರ್ಯವಾಗಿದೆ. ಹಿಂದೂ ರಾಷ್ಟ್ರದ ಜಾಗೃತಿಗಾಗಿ ಸಂಪೂರ್ಣ ಭಾರತದಲ್ಲಿ ದಿಗ್ವಿಜಯ ಯಾತ್ರೆ ನಡೆಸಬೇಕು. ಅದಕ್ಕಾಗಿ ಸಂತರು ನೇತೃತ್ವ ವಹಿಸಿಕೊಳ್ಳಬೇಕು, ಎಂದು ಜೋತಿರ್ಮಠದ ದಂಡಿ ಸ್ವಾಮಿ ಗೋವಿಂದಾನಂದ ಸರಸ್ವತಿ ಇವರು ಈ ಸಮಯದಲ್ಲಿ ಕರೆ ನೀಡಿದರು.
ಮೆಕ್ಯಾಲೆ ಪದ್ಧತಿ ಅಲ್ಲ, ಗುರುಕುಲ ಶಿಕ್ಷಣದಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! - ಶ್ರೀ ಜಾಗೃತ ಚೇತನಾಗಿರಿ
ಕುಂಭಮೇಳದಿಂದ ಹಿಂದೂ ರಾಷ್ಟ್ರದ ಫಲಕಗಳು ತೆರವುಗೊಳಿಸಲಾಯಿತು. ಭಾರತದಲ್ಲಿ ಹಿಂದೂ ರಾಷ್ಟ್ರದ ಫಲಕ ತೆಗೆಯಲಾಗುತ್ತಿದ್ದರೆ, ಆಗ ಹಿಂದೂ ರಾಷ್ಟ್ರದ ಸ್ಥಾಪನೆ ಹೇಗೆ ಆಗುವುದು ? ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ರಾಜಕೀಯ ಮತ್ತು ದೇವಪ್ರಭುತ್ವ ಒಗ್ಗೂಡುವುದು ಅಗತ್ಯವಾಗಿದೆ.
ಧರ್ಮಸ್ಥಾಪನೆಗಾಗಿ ಹಿಂದೂಗಳ ಶಕ್ತಿಯ ಅವಶ್ಯಕತೆ ಇದೆ. ಗುರುಕುಲ ಶಿಕ್ಷಣ ಪದ್ಧತಿ ಮತ್ತು ಮಾತೃ ಶಕ್ತಿಯಿಂದಲೇ ಹಿಂದುಗಳಿಗೆ ಶಕ್ತಿ ಪ್ರಾಪ್ತವಾಗುವುದು. ಅದರಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು ಎಂದು ಮಹಾಮಂಡಲೇಶ್ವರ ಶ್ರೀ ಜಾಗೃತ ಚೇತನಾಗಿರಿ ಇವರು ಪ್ರತಿಪಾದಿಸಿದರು .
ಸಂತರ ನೇತೃತ್ವದಲ್ಲಿ ಮತ್ತೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು ! - ಸದ್ಗುರು ನಿಲೇಶ ಸಿಂಗಬಾಳ
ಕಾಲಿ ಸೇನೆಯಿಂದ ಪ್ರಸಾರ ಮಾಡಲಾದ ಹಿಂದೂ ರಾಷ್ಟ್ರದ ಸಂವಿಧಾನದ ಕರಡು ಎಂದರೆ ನಾವು ಹಿಂದೂ ರಾಷ್ಟ್ರದ ಗಡಿಯಲ್ಲಿ ಇರುವುದರ ಪ್ರತೀಕವಾಗಿದೆ. ಈ ಗಡಿ ದಾಟಿ ನಾವು ಹಿಂದೂ ರಾಷ್ಟ್ರದಲ್ಲಿ ಹೆಜ್ಜೆ ಹಾಕಬೇಕು. ಸನಾತನ ಧರ್ಮದ ಮೇಲೆ ಪ್ರತಿಯೊಂದು ಯುಗದಲ್ಲಿ ಆಘಾತಗಳಾಗಿವೆ.
ಆ ಸಮಯದಲ್ಲಿ ರಕ್ಷಣೆಗಾಗಿ ಸಂತರು ನೇತೃತ್ವ ವಹಿಸಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮುಂದಾಳತ್ವ ವಹಿಸಿದ್ದರು. ಈಗ ಮತ್ತೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂತರು ಮುಂದಾಳತ್ವ ವಹಿಸಬೇಕು. ಸಂತರ ನೇತೃತ್ವದಲ್ಲಿಯೇ ಮತ್ತೊಮ್ಮೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಸದ್ಗುರು ನಿಲೇಶ ಸಿಂಗಬಾಳ ಇವರು ಪ್ರತಿಪಾದಿಸಿದರು.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳು ಶಕ್ತಿಶಾಲಿಗಳಾಗಬೇಕು - ಕಾಮೇಶ್ವರಪುರಿ ಮಹಾರಾಜ್, ಜುನಾ ಪಂಚದಶನಾಮ ಆಖಾಡಾ
'ಸೆಕ್ಯುಲರ್ ' ಶಬ್ದದಿಂದ ಹಿಂದೂಗಳು ನಿಷ್ಕ್ರಿಯರಾಗಿದ್ದಾರೆ. ಮನೆ ಕಟ್ಟುವಾಗ ಯಾವ ರೀತಿ ಅನೇಕ ವಸ್ತುಗಳ ಅವಶ್ಯಕತೆ ಇರುತ್ತದೆ. ಅದೇ ರೀತಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ವಿವಿಧ ಕೊಡುಗೆಯ ಆವಶ್ಯಕತೆ ಇದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಣ, ಕೌಶಲ್ಯಯುತ ಪೀಳಿಗೆಯ ಅಗತ್ಯವಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳು ಶಕ್ತಿಶಾಲಿ ಆಗಬೇಕು, ಎಂದು ಜುನಾ ಪಂಚದಶನಾಮ ಆಖಾಡಾದ ಕಾಮೇಶ್ವರಪುರಿ ಮಹಾರಾಜರು ಕರೆ ನೀಡಿದರು.
ಈ ಅಧಿವೇಶನದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದುಗಳ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯ, ಬಾಂಗ್ಲಾದೇಶಿ - ರೋಹಿಂಗ್ಯಾ ನುಸುಳುಕೊರರಿಂದ ಭಾರತದ ಆಂತರಿಕ ಸುರಕ್ಷೆಗೆ ನಿರ್ಮಾಣವಾಗಿರುವ ಅಪಾಯ; ಕಾಶಿ, ಮಥುರಾ ಇದರ ಜೊತೆಗೆ ಇತರ ದೇವಸ್ಥಾನಗಳ ಮುಕ್ತಿಗಾಗಿ ಸಂವಿಧಾನಿಕ ಹೋರಾಟ; ಹಿಂದೂ ದೇವಸ್ಥಾನದ ಸರಕಾರಿಕರಣ; ಭಾರತಾದ್ಯಂತ ನಡೆಯುವ ಉತ್ಸವದ ಸಮಯದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಗಳು, ಲವ್ ಜಿಹಾದ್, ಮತಾಂತರ, ಭಯೋತ್ಪಾದನೆ, ಗಲಭೆಗಳು ಮುಂತಾದ ಸಮಸ್ಯೆಗಳ ಕುರಿತು ಸಂತ ಮಹಂತರು ವಿಚಾರ ಮಂಥನ ನಡೆಸಿದರು.
ಹಿಂದೂ ಜನಜಾಗೃತಿ ಸಮಿತಿಯ ಸುನಿಲ ಕದಮ ಇವರು ಕಾರ್ಯಕ್ರಮದ ಸೂತ್ರ ಸಂಚಾಲನೆ ಮಾಡಿದರು. ಅಧಿವೇಶನದಲ್ಲಿ 'ಜಯತು ಜಯತು ಹಿಂದೂ ರಾಷ್ಟ್ರಮ್', ಜೈ ಶ್ರೀರಾಮ್', ಭಾರತ ಹಿಂದೂ ರಾಷ್ಟ್ರ ಹೈ, ಹಿಂದೂ ರಾಷ್ಟ್ರ ಹೋಗ', ಹೀಗೆ ಸಂತರು ಮತ್ತು ಭಕ್ತರು ನೀಡಿದ ಘೋಷಣೆಯಿಂದ ಪರಿಸರ ಪ್ರತಿಧ್ವನಿಸಿತು .
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ