ಸತತ ಅಭ್ಯಾಸದಿಂದ ಕೌಶಲ್ಯ ಕರಗತ: ಬಾಲಕೃಷ್ಣ ಹೆಚ್

Upayuktha
0

ಪುತ್ತೂರು: ಒಳ್ಳೆಯದು ಎಲ್ಲಿದ್ದರೂ ಅದನ್ನ ಸ್ವೀಕರಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೌಶಲ್ಯಗಳನ್ನು  ಏಕಾಗ್ರತೆಯಿಂದ ಗಮನಿಸಿ, ಕರಗತಗೊಳಿಸಬೇಕು. ಸತತ ಅಭ್ಯಾಸ ಹಾಗೂ ತಾಳ್ಮೆಯಿಂದ ಕೌಶಲ್ಯಗಳಲ್ಲಿ ಮೇಲುಗೈ ಸಾಧಿಸಬೇಕು ಎಂದು ವಿವೇಕಾನಂದ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್. ಹೇಳಿದರು. 


ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಸ್ವಾಯತ್ತ) ಇಲ್ಲಿನ ಬಿಬಿಎ ವಿಭಾಗ ಹಾಗೂ ಐಕ್ಯೂಎಸಿ ಘಟಕದಡಿಯಲ್ಲಿ ಆಯೋಜಿಸಲಾದ “ಸಾಫ್ಟ್ ಸ್ಕಿಲ್ಸ್” 5 ದಿನಗಳ ಕಾರ್ಯಾಗಾರ "ಪ್ರಕಾಶನ"ವನ್ನು ಉದ್ಘಾಟಿಸಿ ಉಪನ್ಯಾಸವನ್ನು ನೀಡಿದರು.


ಮನುಷ್ಯನು ಮಾತನಾಡುವ ಮೊದಲು ಯೋಚಿಸಬೇಕು. ಯೋಚನೆಗೆ ಹಾಗೂ ಮಾತಿಗೆ ಸಮತೋಲನವಿದ್ದು, ಅದೆರಡೂ ವ್ಯಕ್ತಿತ್ವವನ್ನು ಸಮಾನವಾಗಿ ವ್ಯಾಖ್ಯಾನಿಸಬೇಕು. ಮಾತಿನ ಮೌಲ್ಯವನ್ನು ನಿರ್ಣಯಿಸುವಲ್ಲಿ ದೇಹದ ಭಾಷೆ, ಸ್ವರದ ನಿಲುವು ಮುಖ್ಯವಾಗಿರುತ್ತದೆ. ಉತ್ತಮ ಸಂವಹನ ಕೌಶಲ್ಯ ಮನುಷ್ಯನ ಬೆಲೆಯನ್ನು ಅಧಿಕಗೊಳಿಸುತ್ತದೆ ಎಂದು ಹೇಳಿದರು. 


ವೇದಿಕೆಯಲ್ಲಿ ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿಭಾಗದ ಉಪನ್ಯಾಸಕಿ ಅನ್ನಪೂರ್ಣ ವಂದಿಸಿದರು, ಅಂತಿಮ ಪದವಿ ವಿದ್ಯಾರ್ಥಿನಿ ತನಿಷಾ ನಿರೂಪಿಸಿದರು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top