ಈ ಯುವಕರು ಪ್ರೇಮಿಗಳ ದಿನಾಚರಣೆ ಮಾಡಿದ್ದು ಪ್ರಯಾಗ್ ರಾಜ್‌ನ ಚಂದ್ರಶೇಖರ್ ಆಜಾದ್ ಪಾರ್ಕ್‌ನಲ್ಲಿ. ಆಜಾದ್ ಹುತಾತ್ಮನಾದ ಸ್ಥಳದಲ್ಲಿ.
ಫೆಬ್ರವರಿ 14 ಸಂಜೆ ಮಹಾ ಕುಂಭ ಸ್ನಾನ ಪೂರೈಸಿ ಗೆಳೆಯ ಕೃಷ್ಣ ಶೆಟ್ಟಿ ತಾರೆಮಾರ್ ಅವರೊಂದಿಗೆ ಅಜಾದ್ ಪ್ರತಿಮೆಯ ಬಳಿ ಬಂದಾಗ ಹತ್ತಾರು ಯುವಕರು ನಗುತ್ತಾ ಸ್ವಾಗತಿಸಿದರು.
ಐದು ನಿಮಿಷ ನೀವು ನಮ್ಮೊಂದಿಗೆ ಇರಬೇಕು ಎಂದರು. ಪಾರ್ಕ್‌ನಲ್ಲಿ ಓಡಾಡುತ್ತಿದ್ದವರನ್ನು ಕರೆದು ಕುಳ್ಳಿರಿಸಿದರು. ಮೊಂಬತ್ತಿ ನೀಡಿದರು.
ಮೊಂಬತ್ತಿ ಉರಿಸಿದ ನಂತರ ಯುವಕನೋರ್ವ ಮಾತನಾಡಲಾರಂಭಿಸಿದ. ಪುಲ್ವಾಮ ದಾಳಿ, ಹುತಾತ್ಮ ಯೋಧರ ತ್ಯಾಗ, ಆತಂಕವಾದಿ ದೇಶದ್ರೋಹಿಗಳ ಕೃತ್ಯಗಳ ನೆನಪು ಮಾಡಿದ. ಈ ದಿನ "ದೇಶ ಪ್ರೇಮಿಗಳ ದಿನಾಚರಣೆ"ಯಾಗಲಿ ಎಂದು ಹಾರೈಸಿದ. ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಪಾರ್ಕ್‌ನಲ್ಲಿ ಅನುರಣಿಸಿತು.
ಯಶಸ್ವೀ ಫೌಂಡೇಶನ್‌ನ ವಿದ್ಯಾವಂತ ಯುವಕರ ದೇಶ ಭಕ್ತಿ ಯ ಬೆಳಕು ಮಹಾ ಕುಂಭಮೇಳದ ನಗರದಲ್ಲಿ ಉಳಿದ ಎಲ್ಲಾ ದೀಪಾಲಂಕಾರದ ಬೆಳಕನ್ನು ಮೀರಿ ಬೆಳಗಿತ್ತು.
-ಕದ್ರಿ ನವನೀತ ಶೆಟ್ಟಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ