ಕೃತಿ: ಸೃಷ್ಟಿ ಸಿರಿಯಲಿ ಪುಷ್ಪ ವೃಷ್ಟಿ
ಪ್ರಾ. ಭಾಸ್ಕರ ರೈ ಕುಕ್ಕುವಳ್ಳಿ.
ಪುಟ 136.
ರಾಜ್ ಪ್ರಕಾಶನ ಮೈಸೂರು.2024
ರೂ 150.
......
ತುಳು ಕನ್ನಡ ಲೇಖಕ, ಕವಿ ಅರ್ಥದಾರಿ, ಅಧ್ಯಾಪಕ, ವಾಗ್ಮಿ, ಗ್ರಂಥ ಸಂಪಾದಕ, ವಾಹಿನಿ ನಿರ್ವಾಹಕ ನಿರೂಪಕ, ನಟ ಭಾಸ್ಕರ ರೈ ಕುಕ್ಕುವಳ್ಳಿ ಅವರ ಈ ಕವಿತಾ ಸಂಕಲನವು ವೈವಿಧ್ಯಯುತ ಗುಚ್ಛ ಸೃಷ್ಟಿಯ ಸಿರಿಯ ಸ್ಪಂದನ.
ಇದರಲ್ಲಿ ಕಾವ್ಯ ಸಿರಿ, ಭಾವ ಸಿರಿ ಭಕ್ತಿ ಸಿರಿ ಎಂಬ ಮೂರು ವಿಭಾಗಗಳಲ್ಲಿ 80ಕ್ಕೂ ಮಿಕ್ಕಿ ಕವಿತೆಗಳಿವೆ. ವಿಸ್ತಾರ ವ್ಯಾಪ್ತಿ ಮತ್ತು ಉದಾರ ನಿಲುವಿನ, ಭಾವದೊಳ್ ಒಳಗೊಂಬ ಕವಿತ್ವದ ಕುಕ್ಕುವಳ್ಳಿ ಮನನ ಗಾಯನ ಎರಡಕ್ಕೂ ಒದಗುವ ರಚನೆಗಳನ್ನು ನೀಡಿದ್ದಾರೆ. ಮಾವಿನ ಮರಗಳು ಹೂ ಈ ಕಾಲದಲ್ಲಿ ಈ ಪುಷ್ಪ ವ್ರಿಷ್ಟಿ ಸಂಕಲನ ಹೊರಬರುತ್ತಿವುದು ಅಭಿನಂದನೀಯ.
ಚೆಲುವು, ಜಾಗೃತಿ, ಆಶಯ, ಆರಾಧನೆ, ಭಾವ ಸೂಕ್ಷ್ಮ, ಪುರಾಣ ರೂಪಕ ಸಮಾಜ ಪರತೆ, ಪ್ರೀತಿ, ದೈವ ಚಿಂತನ ತುಂಬಿರುವ ಹಲವು ಕವಿತೆಗಳಿವೆ.
ಅಗಸ್ತ್ಯ ಕೋಪ, ನಗುವೆಲ್ಲಿ ಹೋಯ್ತು, ಅಷ್ಟಾವಂಕ, ವಿದ್ಯಾರಣ್ಯ, ಚಿಟ್ಟೆಹಿಡಿಯುವ, ವೀರಯತಿ, ಭಾಗ್ಯದ, ದುಗುಡವಿದೆತಕೆ, ರಾಮನಾಗು, ನಾಗಬ್ರಹ್ಮ ಮೊದಲಾದ ಕವನಗಳು ವಿಶಿಷ್ಟವಾಗಿವೆ.
ಪ್ರತಿಭೆಯ ಸಮೃದ್ಧಿ, ಭಾವ, ಅನುಭವ ವೈವಿಧ್ಯ ಇರುವ, ಕವಿ ಕುಕ್ಕುವಳ್ಳಿ ಈಗಾಗಲೇ ತುಳು ಕವಿತಾ ಸಂಕಲನ ಸೀಯನ ತಂದಿದ್ದಾರೆ. 30ಕ್ಕೂ ಮಿಕ್ಕಿದ ಗದ್ಯ ಪದ್ಯ ನಾಟಕಾದಿ ಕೃತಿಗಳ ಕರ್ತೃ, ರೈಗಳ ಬಾಲ್ಯೊಟ್ಟು ಗುತ್ತು ದೈವ ಸಿರಿ ಸಿಹಿಯಾನ ಪಸರಿಸಿ ಮಾಧುರ್ಯ ನೀಡುತ್ತಿರಲಿ.
- ಡಾ. ಎಂ. ಪ್ರಭಾಕರ ಜೋಶಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ