ತಾಳುವಿಕೆಗಿಂತ ಅನ್ಯ ತಪವೂ ಬೇರೊಂದಿಲ್ಲ. ಇದು ಸೋದೆ ವಾದಿರಾಜರ ಪ್ರಸಿದ್ಧ ಕೃತಿಗಳಲ್ಲಿ ಒಂದಾದ ಕೃತಿ. ಇದು ತಾಳ್ಮೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಬದುಕಿನಲ್ಲಿ ತಾಳ್ಮೆ ಅತಿ ಮುಖ್ಯ. ಬಿತ್ತಿದ ಬೀಜ, ಗಿಡವಾಗಿ, ಮರವಾಗಿ, ಹಣ್ಣು ಬಿಡುವ ತನಕ ಕಾಯುವಂತೆ, ಒಲೆಯ ಮೇಲೆ ಬೇಯಲಿಕ್ಕೆ ಇಟ್ಟ ಅಕ್ಕಿ ಅನ್ನವಾಗುವ ತನಕ ಕಾಯುವಂತೆ, ಜೀವನವು ನಮಗೆ ಹೆಜ್ಜೆ, ಹೆಜ್ಜೆಗೆ ತಾಳ್ಮೆಯನ್ನು ಕಳಿಸಿ ಕೊಡುತ್ತದೆ.
ವಾದಿರಾಜರು ಹೇಳುವಂತೆ "ಕಟ್ಟಿದ ಬುತ್ತಿ ಉಡಲುಂಟು ತಾಳು" ಎನ್ನುವಂತೆ ಜೀವನದಲ್ಲಿ ಒಳ್ಳೆಯ ದಿನಗಳು ಬರುವ ತನಕ ಕಾದರೆ ಮಾತ್ರ ರುಚಿಯಾದ ಹಣ್ಣು, ಬೆಂದ ಅನ್ನ ಸಿಗಲು ಸಾಧ್ಯ.
ಡಿ.ವಿ.ಜಿಯವರು ತಮ್ಮ "ಮಂಕು ತಿಮ್ಮನ ಕಗ್ಗ"ದಲ್ಲಿ
ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ಸುರಿಯೇ
ಬೆಲ್ಲ ಸಕ್ಕರೆಯಾಗು
ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ- ಎಂದಿದ್ದಾರೆ.
ಇದು ಜೀವನದಲ್ಲಿ ತಾಳ್ಮೆಯ ಅವಶ್ಯಕವನ್ನು ಎತ್ತಿ ತೋರಿಸುತ್ತದೆ. ತಾಳ್ಮೆ ಎಂಬುದು ಕಷ್ಟಗಳ ಮಳೆ ಸುರಿದಾಗ ಛತ್ರಿ ಇದ್ದಂತೆ. ಅದು ನಮ್ಮ ಮಾನಸಿಕ ಶಕ್ತಿಯ ಪ್ರತೀಕವೇ ಹೊರತು ದೌರ್ಬಲ್ಯ ಅಲ್ಲ. ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸಹ "ಅವಸರವೇ ಅಪಘಾತಕ್ಕೆ ಕಾರಣ" ಎಂದು ಬರೆದಿರುವುದನ್ನು ಕಾಣ ಬಹುದು.
ಭೂದೇವಿಯು ಸಹ ಒಡಲನ್ನು ಹಸಿರು ಮಾಡಿಕೊಳ್ಳಲು ಮಳೆಗಾಗಿ ಕಾಯುತ್ತಾಳೆ. ಕಾಲ ಚಕ್ರವು ತಿರುಗುತ್ತಿರುವಾಗ ನಮ್ಮ ಒಳ್ಳೆಯ ಕಾಲಕ್ಕಾಗಿ ಕಾಯಲೇಬೇಕು. ಪ್ರತಿ ಅಂಧಕಾರಕ್ಕೂ ಒಂದು ಒಳ್ಳೆಯ ಸೂರ್ಯೋದಯ ಇದ್ದೇ ಇರುತ್ತದೆ. ಎಷ್ಟೋ ಜನ ತಾಳ್ಮೆ ಕಳೆದುಕೊಂಡು ಆತುರಗೆಟ್ಟು ಹಾರಾಡುತ್ತಿರುತ್ತಾರೆ.
ನಾವು "ಕಾಲ ಎಳಿತದೆ ಎಲ್ಲರ ಕಾಲು" ಎಂಬುದನ್ನು ಅರಿತು ಬದುಕೋಣ. ಏನಂತೀರ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ