ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ ಆಯೋಜಿಸಿದ್ದ ನೃತ್ಯ ಸಂಭ್ರಮ- 2025ರಲ್ಲಿ ಭರತನಾಟ್ಯ, ಶಾಸ್ತ್ರೀಯ ಹಾಗೂ ಜನಪದ ಸಂಗೀತ, ಜನಪದ ನೃತ್ಯ, ಸರಸ್ವತಿ, ದೇವಿ ಹಾಗೂ ವಿಶೇಷವಾಗಿ ಪುಣ್ಯಕೋಟಿ ನೃತ್ಯ ರೂಪಕಗಳು ನೋಡುಗರನ್ನು ಮನರಂಜಿಸಿತು.
ನಗರದ ಕಲಾಗ್ರಾಮದಲ್ಲಿ ನೃತ್ಯ ದಿಶಾ ಟ್ರಸ್ಟ್ ಫೆಬ್ರವರಿ 19ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳು ಪ್ರದರ್ಶಿಸಿದ ಅಷ್ಟಲಕ್ಷ್ಮಿ, ಗಣೇಶ, ಲಕ್ಷ್ಮಿ, ಪಾರ್ವತಿಯ ಅನೇಕ ನೃತ್ಯ ಹಾಗೂ ನೃತ್ಯ ರೂಪಕ ಕಾರ್ಯಕ್ರಮಗಳು, ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ನಾಟ್ಯ ವಿಶಾರದೆ ಕು|| ಸಹನಾ ಹೊಸಮನೆ ಹಾಗೂ ಕು||ಸ್ಫೂರ್ತಿ ಶ್ರೀಧರ್ ನಡೆಸಿಕೊಟ್ಟರು.
ಜನಪದ ತಂಡಗಳ ಕಲಾ ಪ್ರದರ್ಶನ ಪ್ರೇಕ್ಷಕರಿಗೆ ಕಲಾ ಸಂಸ್ಕೃತಿಯನ್ನು ಪರಿಚಯಿಸಿತು. ಈ ನೃತ್ಯ ಹಬ್ಬದಲ್ಲಿ ಅನೇಕ ನೃತ್ಯ ಭಾನಿಗಳಿಗೂ ಹಾಗೂ ವಾಗ್ಗೇಯಕಾರರಿಗೂ ಅರ್ಪಣೆ ಸಲ್ಲಿಸಲಾಗಿತ್ತು.
ಕಾಲ ಮಾಯೆ ನೃತ್ಯ ಶಾಲೆಯ ಸಂಸ್ಥಾಪಕರು ವಿದುಷಿ ಲತಾ ಶಂಕರ ಅವರು ಉದ್ಘಾಟಿಸಿ ನೃತ್ಯ ದಿಶಾ ಸಂಸ್ಥೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಿದೆ ಎಂದು ತಿಳಿಸಿದರು. ಹಿರಿಯ ಸಹಾಯಕ ನಿರ್ದೇಶಕಿ ಎಂ ಬಿ ಅರುಂಧತಿ ಹಾಗೂ ರಂಗಸ್ವಾಮಿಯವರು ಕಾರ್ಯಕ್ರಮದ ವಿಶೇಷತೆಯನ್ನು ಪ್ರಶಂಸಿಸಿದರು.
ನೃತ್ಯ ಸಂಭ್ರಮ ಆಯೋಜನೆ ಮಾಡಿದ ನೃತ್ಯ ದಿಶಾ ಸಂಸ್ಥೆಗೆ ಹಾಗೂ ಗುರು ಡಾ|| ದರ್ಶಿನಿ ಮಂಜುನಾಥ್ ಅವರಿಗೆ ನೆರೆದಿದ್ದ ಗಣ್ಯರು, ಕಲಾ ಪೋಷಕರು ಅಭಿನಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ