ಮಾದಕ ವಸ್ತು – ದ್ರವಗಳ ಚಟಕ್ಕಿಂತ ಭೀಕರ ಮೊಬೈಲ್ ಗೀಳು

Upayuktha
0


ಮೊ
ನ್ನೆ ಬಿ.ಎ ಮೊದಲವರ್ಷ ಓದುವ ಯುವತಿಗೆ, ಮೊಬೈಲ್ ಸಾಕು ಎಂದು ಬುದ್ದಿಹೇಳಿದ ತಾಯಿ ಮಾತಿನಿಂದ ಕೆರಳಿದ ಆಕೆ ನೇಣು ಹಾಕಿಕೊಂಡು ಸತ್ತೇ ಹೋದಳು. ಈಗ ವಿವಿಧ ಭಾಷೆಗಳ ಪತ್ರಿಕೆಗಳ ಹಿಂದಿನ ಸಂಚಿಕೆಗಳನ್ನ ಗಮನಿಸೋಣ. 2022 ಜೂನ್ 5ರ ಮಲಯಾಳಂ ಪತ್ರಿಕೆ ವರದಿ ಪ್ರಕಾರ, ನವೈಕುಲಂ ಬಳಿ ಶವವಾಗಿ ಪತ್ತೆಯಾದ ಪ್ಲಸ್ ಒನ್ ವಿದ್ಯಾರ್ಥಿನಿ.


ವೆಟ್ಟಿಯಾರಾದ ಜೀವ ಮೋಹನ ಜೆ.ಎಸ್ 16 ವರ್ಷದ ಯುವತಿ. ಮಧ್ಯಾಹ್ನ 1 ಗಂಟೆಗೆ ಸೀಲಿಂಗ್ ಫ್ಯಾನಿಗೆ ನೇಣುಹಾಕಿಕೊಂಡು ಸತ್ತಳು. ಸ್ಮಾರ್ಟ್ ಫೋನ್ ಚಟ ಕಾರಣವಾಗಿತ್ತು. ನವೆಂಬರ್ 18 -2023 ರ ಮರಾಠಿ ಪತ್ರಿಕೆಯ ವರದಿ ಪ್ರಕಾರ, ಮುಂಬೈನಲ್ಲಿ 16 ವರ್ಷದ ಹುಡುಗ ವೀಡಿಯೋ ಗೇಮ್ ಚಟ ಹೊಂದಿದ್ದ. ತನ್ನ ತಂದೆ ಸ್ಮಾರ್ಟ್ ಫೋನ್ ಕಿತ್ತುಕೊಂಡ ನಂತರ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ.


 ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರಲ್ಲಿ ಫೋನ್ ವ್ಯಸನದೊಂದಿಗೆ ಪರಸ್ಪರ ಸಂಬಂಧ ಹೊಂದಿರುವ ಖಿನ್ನತೆ ಮತ್ತು ಆತ್ಮಹತ್ಯೆಯ ಹೆಚ್ಚಳವೂ ಇದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಹದಿಹರೆಯದ ಹುಡುಗಿಯರು ವಿಶೇಷವಾಗಿ ಅಪಾಯಕ್ಕೆ ಒಳಗಾಗುತ್ತಿದ್ದಾರೆ.


ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, 2010, ಮತ್ತು 2015ರ ನಡುವೆ ಆತ್ಮಹತ್ಯೆ ಪ್ರಮಾಣವು 65%ರಷ್ಟು ಹೆಚಾಗಿದೆ. ಅದೇ ಸಮಯದಲ್ಲಿ ಹುಡುಗಿಯರಲ್ಲಿ ತೀವ್ರ ಖಿನ್ನತೆಯ ಪ್ರಮಾಣವು 58% ಹೆಚ್ಚಾಗಿದೆ. ಆತ್ಮಹತ್ಯೆಗಳ ಹೆಚ್ಚಳವು ಫೋನ್ ಚಟದ ಋಣಾತ್ಮಕ ಪರಿಣಾಮಗಳ ನೇರ ಪ್ರತಿಬಿಂಬವಾಗಿದೆ ಎಂದು ಅನೇಕ ಸಂಶೋಧಕರು ನಂಬಿದ್ದಾರೆ. 


ಹದಿಹರೆಯದ ಹುಡುಗಿಯರು ಮತ್ತು ಯುವಕರ ಸ್ವಾಭಿಮಾನವು ಹಾಳಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಫಿಲ್ಟರ್ ಮತ್ತು ಕ್ಯುರೆಟೆಡ್ ಜೀವನಕ್ಕೆ ಯುವಜನರು ಮಾಡುತ್ತಿರುವ ನಿರಂತರ ಹೋಲಿಕೆಗಳು ಇದಕ್ಕೆ ಕಾರಣವಾಗಿರಬಹುದು. 


ವರ್ಜಿನ್ ಮೊಬೈಲ್ ಪ್ರಕಟಿಸಿದ ಅಧ್ಯಯನವು, ಆ ಶತಕೋಟಿ ಸ್ಮಾರ್ಟ್ ಫೋನ್ ಬಳಕೆದಾರರು, ದಶಕದ ಹಿಂದೆ ಮಾಡಿದ್ದಕ್ಕಿಂತ 427% ಹೆಚ್ಚು ಸಂವಹನ ಮತ್ತು ಅಧಿಸೂಚನೆಗಳನ್ನು  ಕಳುಹಿಸುತ್ತಾರೆ. ಹೆಚ್ಚುವರಿಯಾಗಿ ಅವರು 278% ಹೆಚ್ಚು ಪಠ್ಯಗಳನು ಕಳುಹಿಸಿರುತ್ತಾರೆ. ಫೋನ್ ಬಳಕೆ ಆಧುನಿಕ ಜೀವನಕ್ಕೆ ನೈಸರ್ಗಿಕ ಅವಶ್ಯಕತೆಯಂತೆ ತೋರುತ್ತದೆ. ಅದಾಗ್ಯೂ, ಇದು ಹೆಚ್ಚು ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.   


 ಫೋನ್ ಚಟವು ಮೊಬೈಲ್ ಫೋನ್‌ನ ಆಬ್ಸೆಸಿವ್ (ಗೀಳು) ಮತ್ತು ಕಂಪಲ್ಸಿವ್ (ಒತ್ತಾಯದ) ಬಳಕೆಯಾಗಿದೆ. ಸ್ಮಾಟ್ ಫೋನಿನ ಗೀಳಿನ ಬಳಕೆಯಾಗಿದೆ. ಇದು ಆತಂಕ, ಕಡಿಮೆ ಗಮನ ಸೆಳೆಯುವಿಕೆ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. 2024ರಲ್ಲಿ ಜಗತ್ತಿನಲ್ಲಿ 6-8 ಶತಕೋಟಿ ಸ್ಮಾರ್ಟ್ಪೋನ್ ಬಳಕೆದಾರರಿದ್ದಾರೆ.


ಮಾಹಿತಿ ನೋಡುವ ಮೂಲಕ, ಇಲ್ಲಿಯವರೆಗೆ ಅಪರಿಚಿತವಾಗಿದ್ದ ವಿಷಯಗಳು, ವ್ಯಕ್ತಿಗಳು, ಘಟನೆಗಳು, ಕುಳಿತಲ್ಲೇ ಪ್ರಪಂಚದ ಸುತ್ತಾಟ, ಹೊಸ ಹೊಸ ಮಿತ್ರರ ಸ್ನೇಹ ಅವರಿವರ ಸಂದೇಶ- ಚಿತ್ರಗಳ ಬಗೆಗಿನ ಕುತೂಹಲ, ಅರಿಯದ ಸುದ್ಧಿ, ತನಗೇ ಮೊದಲು ತಿಳಿಯಲಿದೆ ಎಂಬ ಬಿಂಕ, ತಾನೂ ಇತರರಂತೆ ನೋಡದಿದ್ದರೆ, ಚಾಟ್ ಮಾಡದಿದ್ರೆ ತನ್ನನ್ನು ಎಲ್ಲಿ ಎಲ್ಲರೂ, ಹಳ್ಳಿಗೊಡ್ಡು ಎಂದುಕೊಳ್ಳುವರೋ ಎಂಬ ಚಿಂತೆ – ಏನೇನು ಕಾರಣಗಳಿವೆ ನೋಡಿ, ನೀವು ಗಮನಿಸಿ.


ಮಾಹಿತಿ ನೋಡುವಿಕೆ – ಕೇಳುವಿಕೆ ಕ್ಷಣಾರ್ಧದಲ್ಲಿ ದೇಶ – ವಿದೇಶ – ಕಾಲ -ಸ್ಥಳ, ಭಾಷೆ, ಧರ್ಮಗಳ ಸೀಮೆ ದಾಟಿ, ಕ್ರಮೇಣ ಆಸಕ್ತಿ ನಿತ್ಯಚಟುವಟಿಕೆಯಾಗಿ ಮುಂದೆ ಪ್ರತಿ ಕ್ಷಣದ ವೀಕ್ಷಣೆಯತ್ತ ಮನ ಸೆಳೆಯುವಂತಾಗುತ್ತದೆ. ನೋಡದಿದ್ದರೆ ಏನೇನೋ ಕಳಕೋತೀನಿ ಎಂಬ ಆತಂಕ ಕಾಡುತ್ತದೆ. 


ಕೂತಲ್ಲೇ, ಮಲಗಿದಲ್ಲೇ, ನಿಮ್ಮತ್ತ ಧಾವಿಸುವ ಈ ಮಾಹಿತಿ ಪ್ರವಾಹ ನಿಮ್ಮನ್ನ ಕ್ರಮೇಣ ತನ್ನಲ್ಲೇ ಮುಳುಗಿಸಿಕೊಳ್ಳುತ್ತದೆ. ಪುಲ್ ಟು ರಿಫ್ರೆಷ್ ಎಂಬ ಕರೆ - ಸ್ಲಾಟ್‌ಗಳು ಮತ್ತು ಇತರ ಕ್ಯಾಸಿನೋ ವೀಡಿಯೋ ಗೇಮ್‌ಗಳಿಂದ ಇದು ಪ್ರೇರೇಪಿಸಲ್ಪಟ್ಟಿದೆ. 


ವಿವಿಧ ಮೊಬೈಲ್ ಕಂಪನಿಗಳು - ವಿನ್ಯಾಸಕಾರರು ನಿರ್ಮಿಸಿ, ಹೆಚ್ಚು ಹೆಚ್ಚು ಮಾರಾಟ ಮಾಡುವ ಗುರಿಯಿಂದ ಯುವಜನಾಂಗವನ್ನ ಮತ್ತೆ ಮತ್ತೆ ಆಕರ್ಷಿಸಲು, ಬಣ್ಣ, ಆಕಾರ, ಗಾತ್ರ, ವಿವಿಧ ಹೆಚ್ಚಿನ ವಿಶೇಷತೆಗಳನ್ನು ಹೊಸ ಹೊಸ ಮೊಬೈಲ್ ಮಾದರಿಗಳಲ್ಲಿ ಅಳವಡಿಸುತ್ತಾರೆ. ಈಗ ತಾನೆ ಕೊಂಡಿದ್ದರೂ, ಕೆಲವೇ ತಿಂಗಳಲ್ಲಿ ಬೇರೆ ಹೊಸದಕ್ಕೆ ಮಾರು ಹೋಗಿ, ಮತ್ತೆ ಮತ್ತೆ ಕೊಳ್ಳಬಯಸುವ ಯುವಜನರ – ಚಂಚಲತೆ ಸ್ವಭಾವವೇ ಮೊಬೈಲ್ ಪ್ರಪಂಚದ ಖಾತ್ರಿ ಕೊಳ್ಳುವಿಕೆಯ  ಸೂತ್ರ.


ಗಮನಿಸುತ್ತಾ ಹೋದರೆ, ಬಳಕೆದಾರರು ತಮಗೇನೂ ಆಗೋಲ್ಲ ಎಂದೇ ಪ್ರತಿಪಾದಿಸಿದರೂ, ಅವರ ನಿದ್ರೆಯ ಕೊರತೆ, ಸೃಜನಶೀಲತೆಗೆ ತಡೆಗಳು, ಆತಂತ, ಒತ್ತಡ, ಒಂಟಿತನ ಅಭದ್ರತೆ, ದುರ್ಬಲಗೊಂಡ ಸಂಬಂಧಗಳು, ಮಾನಸಿಕ ಅಸ್ವಸ್ಥತೆ, ಗೊಂದಲಗಳು, ಸಣ್ಣ ಸಣ್ಣ ಪ್ರಶ್ನೆ ಸಲಹೆಗಳಿಗೂ ರೇಗುವ, ಅಳುವ, ಜಗಳಾಡುವ ಪ್ರವೃತ್ತಿ, ಈ ಫೋನ್ ಹುಚ್ಚು ಎಷ್ಟು ಆಳವಾಗಿದೆ ಎಂದು ಕ್ಷಣಕ್ಷಣಕ್ಕೂ ಎತ್ತಿ ತೋರಿಸುತ್ತೆ.


ಫೋನ್ ಚಟದ ಚಿಹ್ನೆಗಳು ಮತ್ತು ಲಕ್ಷಣಗಳು:- ಸಾಮಾನ್ಯ ಫೋನ್ ಬಳಕೆ ಹಾಗೂ ಚಟದ ನಡುವೆ ವ್ಯತ್ಯಾಸ ಹೇಗೆ ಕಂಡು ಹಿಡಿಯುತ್ತೀರಿ?

 ಫೋನ್ ಬಳಕೆಗೆ ಅಡ್ಡಿಪಡಿಸಿದರೆ ಕೋಪ ಅಥವಾ ಕಿರಿಕಿರಿ. ಫೋನ್ ಪರಿಶೀಲಿಸಲು ರಾತ್ರಿ ಎದ್ದೇಳುವುದು, ಒಬ್ಬರೇ ಇದ್ದಾಗ ಫೋನ್ ಹಿಡಿದು ಅದರಲ್ಲೇ ತಲ್ಲೀನರಾಗುವುದು. ಸಿಗ್ನಲ್ ಸಿಗದಿದ್ದಾಗ ವಿಪರೀತ ಚಡಪಡಿಸುವುದು, ಫೋನ್ ರಿಂಗ್ ಆಗದಿದ್ದರೂ ಮತ್ತೆ ಮತ್ತೆ ಪರಿಶೀಲಿಸುವುದು, ಇವೇ ಫೋನ್ ಚಟದ ಚಿಹ್ನೆಗಳು. ಇದಕ್ಕೆ ನಮಗೆ ದೊರೆತಿರುವ ವೈಜ್ಞಾನಿಕ ವಿವರಣೆ  ಇಲ್ಲಿದೆ.


ದೀರ್ಘಕಾಲದ ಫೋನ್‌ನ ಮಿತಿಮೀರಿದ ಬಳಕೆಯು, ಮೆದುಳಿನಲ್ಲಿರುವ ರಿವಾರ್ಡ್ ಸರ್ಕ್ಯೂಟ್‌ಗಳನ್ನು ರಾಸಾಯನಿಕವಾಗಿ ಬದಲಾಯಿಸುತ್ತದೆ ಎಂದು ಸಾಬೀತಾಗಿದೆ. ಪ್ರಾಥಮಿಕ ಪೀಡಿತ ನರಪ್ರೇಕ್ಷಕಗಳಲ್ಲಿ ಒಂದು ಗಾಮಾ – ಅಮಿನೊಬ್ಯುಟ್ರಿಕ್ ಆಮ್ಲ ಒಂದು ಪ್ರತಿಬಂಧಕ ನರಪ್ರೇಕ್ಷಕವಾಗಿದ್ದು, ಅದು ಶಾಂತಗೊಳಿಸುವ ಅಥವಾ ಯೂಪೋರಿಕ್ ಪರಿಣಾಮವನ್ನು ಉಂಟುಮಾಡುತ್ತದೆ. 


ಇದು ಭಯ ಮತ್ತು ಆತಂಕವನ್ನು ಸಹ ನಿಯಂತ್ರಿಸಬಹುದು. ದೀರ್ಘಕಾಲದ ಫೋನ್ ಬಳಕೆಯು GABA ಉತ್ಪಾದನೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸುತ್ತದೆ. GABA ವ್ಯವಸ್ಥೆಯಲ್ಲಿನ ಅಡಚಣೆಗಳು ವ್ಯಸನದ ಎಚ್ಚರಿಕೆಯ ಸಂಕೇತವೆಂದು ಸಾಬೀತಾಗಿದೆ. 


ಮೆದುಳಿನಲ್ಲಿರುವ ಬೂದು ದ್ರವ್ಯವು ಕೇಂದ್ರ ನರಮಂಡಲದ ಭಾಗಕ್ಕೆ ಸಂಪರ್ಕ ಹೊಂದಿದೆ. ಇದು ವ್ಯಕ್ತಿಗಳಿಗೆ ಚಲನೆ, ಸ್ಮರಣೆ ಮತ್ತು ಭಾವನೆಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚಿನ ಅಧ್ಯಯನವು ಫೋನ್ ಚಟದಿಂದ ಭಾಗವಹಿಸುವವರ ಮಿದುಳನ್ನು ಸ್ಕ್ಯಾನ್ ಮಾಡಿದೆ ಮತ್ತು ಅವರ ಮೆದುಳಿನ ಬೂದು ದ್ರವ್ಯದಲ್ಲಿ ಬದಲಾವಣೆಯನ್ನು ಕಂಡುಹಿಡಿದಿದೆ. ಸಂಶೋಧಕರ ಪ್ರಕಾರ ಅವರ ಮಿದುಳಿನ ಭೌತಿಕ ಆಕಾರ ಮತ್ತು ಗಾತ್ರವು ಮಾದಕವಸ್ತು ಬಳಕೆದಾರರನ್ನು ಹೋಲುತ್ತದೆ. ಬೂದುಬಣ್ಣದ ದ್ರವ್ಯದ ಪ್ರಮಾಣವು ನಿರ್ಣಾಯಕ ಪ್ರದೇಶಗಳಲ್ಲಿ ಕಡಿಮೆಯಾಗುತ್ತದೆ. ವಸ್ತುವಿನ ಬಳಕೆಯ ಅವಸ್ಥತೆ ಹೊಂದಿರುವ ವ್ಯಕ್ತಿಗಳಲ್ಲಿ ಇದೇ ರೀತಿಯ ಕಾಹಿಲೆಯನ್ನು ಗಮನಿಸಿಬಹುದು. 


ಇತ್ತೀಚಿನ ವರ್ಷಗಳಲ್ಲಿ ಹದಿಹರೆಯದವರಲ್ಲಿ ಈಗಾಗಲೇ ದೊಡ್ಡ ಖಿನ್ನತೆ ಮತ್ತು ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ಗಮನಿಸುವುದು ಬಹಳ ಮುಖ್ಯ. ಇದು ಫೋನ್ ವ್ಯಸನದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ವಿಶೇಷವಾಗಿ ಇಂತಹ ಬೆಳವಣಿಗೆಗಳಿಗೆ  ಒಳಗಾಗುತ್ತಾರೆ. ಸೆಂಟರ್ಸ್ ಫಾರ್ ಕಂಡಿಷನ್ ಕಂಟ್ರೋಲ್ ಅಂಡ್ ಅವಾಯ್ಡೆನ್ಸ್ (CDC) ಪ್ರಕಾರ, 2010 ಮತ್ತು 2015ರ ನಡುವೆ ಆತ್ಮಹತ್ಯೆ 65% ಹೆಚ್ಚಾಗಿದೆ. ಅದೇ ಸಮಯದಲ್ಲಿ ಹುಡುಗಿಯರಲ್ಲಿ ತೀವ್ರ ಖಿನ್ನತೆಯ ಪ್ರಮಾಣವು 58% ಹೆಚ್ಚಾಗಿದೆ. ಆತ್ಮಹತ್ಯೆಗಳ ಹೆಚ್ಚಳವು ಮೊಬೈಲ್ ವ್ಯಸನದ ಋಣಾತ್ಮಕ ಪರಿಣಾಮಗಳ ನೇರ ಸಾಕ್ಷಿ ಎಂದು ಅನೇಕ ವಿಜ್ಞಾನಿಗಳು ನಂಬುತ್ತಾರೆ. 


-ಎನ್.ವ್ಹಿ.ರಮೇಶ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top