ಮಧ್ವನವಮಿ: ಶ್ರೀ ಮಧ್ವಾಚಾರ್ಯರು

Upayuktha
0


ಶ್ರೀ ಮಧ್ವಾಚಾರ್ಯರು ಉಡುಪಿ ಜಿಲ್ಲೆಯ ಪಾಜಕ ಎಂಬಲ್ಲಿ ಕ್ರಿ ಶ.1238 ರಲ್ಲಿ ಅಶ್ವಯುಜ ಮಾಸದ ವಿಜಯದಶಮಿಯ ಪುಣ್ಯದಿನ ದಂದು  ಹುಟ್ಟಿದರು. ಅವರ ತಂದೆ ಮಧ್ಯಗೇಹಭಟ್ಟರು ಭಾಗವತ ಸಂಪ್ರದಾಯದ ಅನುಯಾಯಿಗಳಾಗಿದ್ದರು. ತಾಯಿ ವೇದವತಿ ಸಾಧ್ವಿ ಶಿರೋಮಣಿ. ಅವರ ತಂದೆ ಉಡುಪಿಯ ಶ್ರೀ ಅನಂತೇಶ್ವರ ಸ್ವಾಮಿಯನ್ನು ಬಹಳ ವರ್ಷಗಳ ಪೂಜಿಸಿ ಮಗುವನ್ನು ಪಡೆದಿದ್ದರು.


ಮಗುವಿಗೆ ವಾಸುದೇವನೆಂದು ನಾಮಕರಣ ಮಾಡಿದರು. ಬಾಲ್ಯದಲ್ಲೇ ವಾಸುದೇವ ಅಸಾಧಾರಣವಾದ ಬುದ್ಧಿಶಕ್ತಿಯನ್ನು ತೋರಿಸಿದ. ಅವನ ಪಾಂಡಿತ್ಯಪೂರ್ಣವಾದ ಮಾತುಗಳನ್ನು ಕೇಳಿ ತಂದೆ ಆಶ್ಚರ್ಯಪಡುತ್ತಿದ್ದರು.


ಮನೆಯಲ್ಲೇ ವಾಸುದೇವನಿಗೆ ತಂದೆ ಪಾಠ ಹೇಳುತ್ತಿದ್ದರು. ತಮ್ಮ ಚಿಕ್ಕವಯಸ್ಸಲ್ಲೇ ವಾಸುದೇವ ಸನ್ಯಾಸದೀಕ್ಷೆ ಪಡೆದರು. ಅವರಿಗೆ ಅಚ್ಯುತ ಪ್ರೇಕ್ಷಾಚಾರ್ಯ ಎಂಬುವ ಅದ್ವೈತ ಮತದ ಗುರುಗಳು ಸನ್ಯಾಸದೀಕ್ಷೆ ನೀಡಿ ಅನುಗ್ರಹಿಸಿದರು. ಅವರಿಗೆ ಅದ್ವೈತಮತದ ಪಾಠಗಳು ರುಚಿಸುತ್ತಿರಲಿಲ್ಲ. ಆಚಾರ್ಯ ಮಧ್ವರು ಮಧ್ವಮತವನ್ನು ಸ್ಥಾಪಿಸಿದರು. ಅವರು ಪಾಂಡಿತ್ಯದಲ್ಲಿ ಅದ್ವಿತೀಯರಾಗಿದ್ದರು.


ಶ್ರೀ ಮಧ್ವ ಗುರುಗಳ ಬದುಕಿನ ಕೆಲವು ಘಟನೆಗಳು ಹೀಗಿವೆ.


ಅವರ ಮೊದಲಿನ ಹೆಸರು ವಾಸುದೇವ. ಅವರು ಚಿಕ್ಕವರಿದ್ದಾಗಿಂದಲೂ ಕುಶಾಗ್ರಮತಿ. ಅವರ ತಂದೆಯೇ ಅವರಿಗೆ ಅಕ್ಷರಾಭ್ಯಾಸ ಮಾಡಿಸಿದರು. ಮರುದಿನ ಅದೇ ಅಕ್ಷರಗಳನ್ನು ಹೇಳಿದರೆ ನೀವು ಇವುಗಳನ್ನು ಹೇಳಿಯಾಗಿದೆ, ಮತ್ತೆ ಅದನ್ನೇ ಹೇಳಬೇಡಿ ಎನ್ನುತ್ತಿದ್ದರಂತೆ. ಒಂದು ಶ್ಲೋಕವನ್ನು ಅವರ ತಂದೆ ಹೇಳುತ್ತಿದ್ದಾಗ ನೀವು ತಪ್ಪು ಹೇಳುತ್ತಿದ್ದೀರಿ ಎಂದರಂತೆ.


ದಿನಾಲೂ ನಾಲ್ಕು ತೀರ್ಥಗಳಲ್ಲಿ ಸ್ನಾನ ಮಾಡುತ್ತಿದ್ದರಂತೆ. ಅವರ ತಾಯಿ ಸ್ನಾನಕ್ಕೆ ಅಷ್ಟು ದೂರ ಯಾಕೆ ಹೋಗುತ್ತಿ ಎಂದಾಗ ಒಂದು ಕೋಲಿನಿಂದ ತೀರ್ಥವನ್ನೇ ಹತ್ತಿರ ತಂದರಂತೆ. ದಿನಾಲೂ ಅವರು ತಮ್ಮ ಆರಾಧ್ಯದೈವವಾದ ವಿಮಾನದ ದುರ್ಗೆಯೊಡನೆ ಸಂಭಾಷಿಸುತ್ತಿದ್ದರಂತೆ. ಅಮ್ಮ ಊಟಕ್ಕೆ ಕರೆದಾಗ ಒಂದೇ ನೆಗೆತಕ್ಕೆ ಮನೆಗೆ ಹಾರಿದರಂತೆ. ಅದರ ಕುರುಹಾಗಿ ಇಂದಿಗೂ  ಪಾಜಕದಲ್ಲಿ ಅವರ ಪಾದದ ಗುರುತುಗಳಿವೆ. ಒಬ್ಬ ರಾಕ್ಷಸ ಉಗುರಿನ ರೂಪದಲ್ಲಿ ಬಂದು ಆಚಾರ್ಯರೊಡನೆ ಯುದ್ಧ ಮಾಡಿದನಂತೆ. ಆಚಾರ್ಯರು ತಮ್ಮ ಉಂಗುಷ್ಠದಲ್ಲಿ ಕಿರುಬೆರಳಲ್ಲಿ ಒತ್ತಿ ಸಾಯಿಸಿದರಂತೆ. ಪಾಜಕ ಕ್ಷೇತ್ರದಲ್ಲಿ ಇದರ ಕುರುಹೂ ಇದೆ.


ಒಮ್ಮೆ ತಾಯಿ ಹಾಲು ಮೊಸರಿನ ಪಾತ್ರೆ ಮೇಲೆ ಏನಾದರೂ ಮುಚ್ಚಿಡು ಎಂದಾಗ ದೊಡ್ಡ ದೊಡ್ಡ ಕಲ್ಲುಗಳನ್ನೇ ಎತ್ತಿಟ್ಟು ಮುಚ್ಚಿದರಂತೆ. ಇವುಗಳನ್ನು ನಾವು ಇಂದಿಗೂ ನೋಡಬಹುದು.


ಶ್ರೀ ಮಧ್ವಾಚಾರ್ಯರ ವಿಚಾರಗಳು:

ಜೀವಾತ್ಮ, ಪರಮಾತ್ಮ ಬೇರೆ ಬೇರೆ. ಪಂಚಬೇಧಗಳ ಬಗ್ಗೆ ತಿಳಿಸಿದರು. ಜೀವ, ಜೀವಕೆ ಬೇಧ, ಜಡ ಜಡಕೆ ಬೇಧ, ಜೀವ ಜಡಕೆ ಬೇಧ, ಜೀವ ಪರಮಾತ್ಮನಿಗೂ ಬೇಧ. ವೇದಗಳಿಂದಲೇ "ಶ್ರೀಹರಿ" ಯನ್ನು ತಿಳಿಯಲು ಸಾಧ್ಯ. 


ನೀಲವರ್ಣದ ಆಕಾಶ ಇದೆ. ಆ ಆಕಾಶದ ಮೇಲೆ ಇನ್ನೊಂದು ಆಕಾಶ ಇದೆ. ಪಿಂಡಾಂಡ ಬ್ರಹ್ಮಾಂಡಕ್ಕೂ ಸಂಬಂಧ ಇದೆ. ಸಸ್ಯಗಳಿಗೂ ಜೀವವಿದೆ. ದೇವರಿಗೆ ಭಕ್ತರ ಬಗ್ಗೆ ಬೇಧವಿಲ್ಲ. ಬರೀ ಭಕ್ತಿಯಿಂದಲೇ ಶ್ರೀಹರಿಯನ್ನು ಸೇರಲು ಸಾಧ್ಯ. ಇವೇ ಅವರ ಉಪದೇಗಳು. ಇಂದು ಅವರನ್ನು ನೆನೆವ ಪುಣ್ಯ ದಿನ.


-ರೇಖಾ ಮುತಾಲಿಕ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top