ಲೇಖಾ ಲೋಕ- 32: ಇತಿಹಾಸ ವಿದ್ವಾಂಸ, ಅದ್ಭುತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ

Upayuktha
0


ಸಂಶೋಧನೆ, ಇತಿಹಾಸದ ವಿವರಣೆ ನೀಡಿ, ಸಾಮಾಜಿಕ ಕಾರ್ಯಕರ್ತನಾಗಿ ಸೃಜನಾತ್ಮಕ ಬರಹಗಳನ್ನು ನಾಡಿಗೆ ನೀಡಿದ ಕೃಷ್ಣ ಕೊಲ್ಹಾರ ಕುಲಕರ್ಣಿ ಪ್ರಸಿದ್ಧ ಲೇಖಕರು ನಾಡಿಗೆ ದೊರೆತ ಸೌಭಾಗ್ಯ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೊಲ್ಹಾರದಲ್ಲಿ 16-10-1940 ರಂದು ಜನಿಸಿದರು. ಹನುಮಂತರಾಯರು ಮತ್ತು ಗಂಗಾಬಾಯಿ ಅವರ ಪುತ್ರನಾಗಿ ಕೃಷ್ಣ ಕುಲಕರ್ಣಿ ಅವರು ತಮ್ಮ ಬಾಲ್ಯದ ಶಿಕ್ಷಣ ಕೊಲ್ಹಾರ ಮತ್ತು ವಿಜಯಪುರದಲ್ಲಿ ಪೂರೈಸಿದರು. ತಮ್ಮ ತಂದೆಯವರ ಅಕಾಲಿಕ ಮರಣ ಇವರ ವಿದ್ಯಾಭ್ಯಾಸಕ್ಕೆ ತಡೆ ಒಡ್ಡಿತು. ಹೀಗಾಗಿ ಅಂಚೆ ಮತ್ತು ತಂತಿ ಇಲಾಖೆ ಇವರಿಗೆ ಉದ್ಯೋಗದ ಆಸರೆಯಾಯಿತು. ವಿವಿಧ ಊರುಗಳಲ್ಲಿ ಸೇವೆ ಮಾಡಿದರು. ಮುಂಬಯಿ, ರಾಯಚೂರು, ಬೆಳಗಾವಿ, ಹಾಸನ, ಮೈಸೂರು ವಿಜಯಪುರ ಸ್ಥಳಗಳಲ್ಲಿ ಸೇವೆ ಸಲ್ಲಿಸಿ 1992ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದು ಬರವಣಿಗೆಗೆ ತಲ್ಲೀನರಾದರು.


ಇವರು ಮೈಸೂರಿನಲ್ಲಿ ಸೇವೆಯನ್ನು ಮಾಡುವ ಸಂದರ್ಭದಲ್ಲಿ ಮುಕ್ತ ವಿಶ್ವವಿದ್ಯಾಲಯದ ಎಂ.ಎ ಪದವಿಯನ್ನು ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿ ಚರಿತ್ರೆ ವಿಷಯ ಆಯ್ಕೆ ಮಾಡಿ ಸ್ನಾತಕೋತ್ತರ ಪದವಿ ಪಡೆದರು. ಇವರು ಡಾ॥ ಕೃಷ್ಣಮೂರ್ತಿ ಕಿತ್ತೂರು ಅವರ ಮಾರ್ಗದರ್ಶನದಲ್ಲಿ "ಕಾಖಂಡಕಿ ಶ್ರೀ ಮಹಿಪತಿದಾಸರು "ಪ್ರೌಢ ಪ್ರಬಂಧ ಮಂಡಿಸಿ, ಪಿ.ಎಚ್.ಡಿ. ಗಳಿಸಿದರು. ಹೊಸದಿಲ್ಲಿಯ ಭಾರತೀಯ ಇತಿಹಾಸ ಅನುಸಂಧಾನದ ಹಿರಿಯ ಶಿಷ್ಯ ವೇತನವನ್ನು ಪಡೆದು, ಅದಿಲ್ಶಾಹಿ ಕಾಲದ ಹಿಂದು-ಮುಸ್ಲಿಂ ಸಂಬಂಧ ರಚಿಸಿದರು.


ಕೆಲಕಾಲ ಅವಧಿಗೆ ವಿಜಯಪುರದ ವಿದ್ಯಾವರ್ಧಕ ಸಂಘದ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯ ಆಗಿ ಸೇವೆ ಸಲ್ಲಿಸಿದರು. ದಾಸ ಸಾಹಿತ್ಯ ಆಳವಾಗಿ ಅಧ್ಯಯನ ಮಾಡಿದ  ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಪುರಂದರದಾಸರ ನಂತರ ವಿಜಯ ದಾಸರು ತನಕ ಅಜ್ಞಾತ ಕಾಲ ಎಂದು ಪರಿಗಣಿಸಿದರೂ, ದಾಸ ಪಂಥದ ಚಟುವಟಿಕೆಗಳು ನಡೆಯುತ್ತಿದ್ದವೆಂದು ಪ್ರತಿಪಾದಿಸಿದ್ದಾರೆ. ಉತ್ತರಾದಿಮಠ, ಹರಿದಾಸರು ಕಂಡ ಜಯತೀರ್ಥರು, ಮಾಧ್ವಮಠಗಳು, ಮುಂತಾದ ಹರಿದಾಸರ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿ, ವಿದ್ಯಾಥಿ೯ಗಳಿಗೆ ಉಪಯುಕ್ತ ಸಹಾಯ ಮಾಡಿದ್ದಾರೆ.


ನಾಟಕ, ಕಥಾ ಸಂಕಲನಗಳು ಸೇರಿ 50ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಸಿದ್ಧರಾದ ಸಂಶೋಧಕರು. ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ, ಕಾರ್ಯಾಗಾರದಲ್ಲಿ ವಿಶೇಷ ಆಸಕ್ತಿ ವಹಿಸಿ, ಸಂಘಟನೆ ಮಾಡಿದರು. ಬಿಜಾಪುರ ಜಿಲ್ಲಾ ಗೆಜೆಟಿಯರ್ ಸಂಪಾದನೆಗೆ ವಿಶೇಷ ಸಲಹಾ ಸಮಿತಿ ಸದಸ್ಯರಾಗಿದ್ದರು. ವಚನ ಪಿತಾಮಹ ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದ  ಅಧ್ಯಯನ ಸಮಿತಿ ಸದಸ್ಯರಾಗಿ, ಸೇವೆ ಮಾಡಿದ್ದಾರೆ. ಅನೇಕ ಭಾಷೆಗಳ ಗ್ರಂಥಗಳ ಅನುವಾದ ಮತ್ತು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಮಹನೀಯರು.

ನೀರಾವರಿ ಹೋರಾಟಕ್ಕೆ ಸಕ್ರಿಯ ಪಾತ್ರ ವಹಿಸಿ,ಅದರ ಬೆಳಕ ಚೆಲ್ಲಲು ಹಲವಾರು ಕೃತಿಗಳನ್ನು ಬರೆದಿದ್ದಾರೆ. ತಮ್ಮ ಅಂಚೆ ಮತ್ತು ತಂತಿ ಇಲಾಖೆಯ  ಬರಹಗಾರರ, ಕಲಾವಿದರ ಒಕ್ಕೂಟದ ರಾಜ್ಯಾಧ್ಯಕ್ಷ ಪದವಿ ಅಲಂಕರಿಸಿದವರು. ಅನೇಕ ಸಂಘಟನೆಗಳ ಕಾಯ೯ಕ್ರಮಗಳ ರೂವಾರಿಗಳು. ಅನೇಕ ವಿಧ ಸಂಶೋಧನಾ ಕೃತಿಗಳು, ಲೇಖನಗಳನ್ನು ಸಂಪಾದಿಸಿ ಪ್ರಕಟಿಸಿದವರು.


ಕರ್ನಾಟಕ ಸರಕಾರಕ್ಕೆ "ಬಿಜಾಪುರ ಜಿಲ್ಲಾ ಗೆಜೆಟಿಯರ್ ಸಂಪಾದನೆಗೆ ವಿಶೇಷ ಸಲಹಾ ಸಮಿತಿ ಸದಸ್ಯರಾಗಿ ಸಮಗ್ರ ದಾಸ ಸಾಹಿತ್ಯ ಯೋಜನೆಯ ಸಂಪಾದಕ ಸಮಿತಿ ಸದಸ್ಯರಾಗಿ 4 ಸಂಪುಟಗಳ ಸಂಪಾದಕರಾಗಿದ್ದವರು. ಇವರು ಕನ್ನಡ, ಹಿಂದಿ, ಮರಾಠಿ, ದಖನಿ, ಸಂಸ್ಕೃತ ಆಂಗ್ಲ ಭಾಷೆಯಲ್ಲಿ ಪರಿಣಿತ ಪಡೆದ ಬರಹಗಾರರು. ಹಂಪಿ ವಿಶ್ವವಿದ್ಯಾಲಯಕ್ಕೆ ಬುಸಾತಿನೆ ಸಲಾತಿನ ಅನುವಾದಗಳ ಜೊತೆಗೆ ಭಾರತೀಯ ವಿದ್ಯಾಭವನಕ್ಕಾಗಿ ಮಹಾತ್ಮಾ ಗಾಂಧಿ ಕೆಲವು ಸಂಪುಟಗಳ ಅನುವಾದ ಮಾಡಿ, ನಾಡಿಗೆ ನೀಡಿ ಪ್ರಖ್ಯಾತರಾದರು. ಮನೆ ಮುಳುಗಿತು, ರತ್ನಾಕರ ಮೊದಲಾದ ಕಾದಂಬರಿ ಬರೆದು ಖ್ಯಾತರಾದದ್ದು ವಿಶೇಷ!


ರಾಜಪುರೋಹಿತ ಪ್ರಶಸ್ತಿ, ಅನುವಾದ ಅಕಾಡೆಮಿ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಹೀಗೆ ಅನೇಕ ಗೌರವಗಳಿಗೆ ಪಾತ್ರರಾದ ಮಹನೀಯರು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top