ಹಿಂದೂಗಳ ಏಕತೆಯ ಪ್ರತೀಕ ಕುಂಭಮೇಳ

Upayuktha
0

 



ಪ್ರಯಾಗರಾಜದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಯಾವುದೇ ಆಮಂತ್ರಣ ಅಥವಾ ಜಾಹಿರಾತು ಇಲ್ಲದೆ, ಯಾತ್ರೆಗಾಗಿ ಸವಲತ್ತು ಅಥವಾ ಆರ್ಥಿಕ ಸಹಾಯ ಪಡೆಯದೆ ಕೋಟ್ಯಾಂತರ ಶ್ರದ್ಧಾವಂತರು ಬರುತ್ತಾರೆ. ಇದರ ಮುಖ್ಯ ಕಾರಣ ಹಿಂದೂಗಳ ಧರ್ಮಪರಾಯಣತೆ ಆಗಿದೆ. ಗಂಗಾ ಮಾತೆ ಮತ್ತು ಪವಿತ್ರ ತ್ರಿವೇಣಿ ಸಂಗಮದ ಬಗ್ಗೆ ಇರುವ ಶ್ರದ್ದೆಯಿಂದಾಗಿ ಹಿಂದೂ ಸಮಾಜ ಸಾಧು ಸಂತರ ಜೊತೆಗೆ ಇಷ್ಟೊಂದು ಸಂಖ್ಯೆಯಲ್ಲಿ ಅಲ್ಲಿ ಒಗ್ಗೂಡುತ್ತಾರೆ. ಇದರಿಂದ ಹಿಂದೂ ಧರ್ಮದ ಅದ್ವಿತೀಯತೆ ತಿಳಿಯುತ್ತದೆ.


ಹಿಂದೂ ಧರ್ಮದ ಅಂತರಂಗದ ದರ್ಶನ - ಕುಂಭಮೇಳ : ಕುಂಭಮೇಳ ಕೇವಲ ಭಾರತದ ಸಾಂಸ್ಕೃತಿಕ ಮಹತ್ವದ  ದರ್ಶನ ಅಷ್ಟೇ ಅಲ್ಲದೆ, ಒಂದು ಆಧ್ಯಾತ್ಮಿಕ ಸಮ್ಮೇಳನವಾಗಿದೆ. ಕುಂಭಮೇಳದ ಆಧ್ಯಾತ್ಮಿಕ ಮಹತ್ವ ಮತ್ತು ಸಾಂಸ್ಕೃತಿಕ ಮಹಾನತೆ ಬಹಳ ವಿಶೇಷವಾಗಿದೆ. 'ಹಿಂದೂ ಐಕ್ಯತೆ' ಇದು ಕುಂಭಮೇಳದ ವೈಶಿಷ್ಟ್ಯವಾಗಿದೆ. ಕುಂಭಮೇಳದ ಮೂಲಕ ಹಿಂದೂಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಮರತೆಯ ದರ್ಶನವಾಗುತ್ತದೆ. ಈ ಮೇಳ ವಿದೇಶಿ ನಾಗರೀಕರಿಗೂ ಹಿಂದೂ ಧರ್ಮದ ಆಂತರಿಕ ಸ್ವರೂಪದ ಪರಿಚಯ ಮಾಡಿಸುತ್ತದೆ .


ದೇಹರೂಪದ ಕುಂಭವನ್ನು ಖಾಲಿ ಮಾಡುವ ಅವಕಾಶ : ಪಾಪ, ವಾಸನೆ ಮತ್ತು ಕಾಮಕ್ರೋಧಗಳಂತಹ ವಿಕಾರಗಳಿಂದ ತುಂಬಿರುವ ದೇಹ ರೂಪದ ಕುಂಭವನ್ನು ಖಾಲಿ ಮಾಡುವ ಸಮಯವೇ ಕುಂಭಮೇಳವಾಗಿದೆ. ಇದು ಮನಷ್ಯನಿಗಾಗಿ ಆಧ್ಯಾತ್ಮಿಕ ಪ್ರಗತಿಯ ಸುವರ್ಣ ಅವಕಾಶ ಪ್ರದಾನಿಸುತ್ತದೆ.


ಹಿಂದೂಗಳ ಸಾಂಸ್ಕೃತಿಕ ಐಕ್ಯತೆಯ ಬಹಿರಂಗ ವೇದಿಕೆ : ಪ್ರಯಾಗರಾಜ, ಹರಿದ್ವಾರ, ಉಜ್ಜೈನ, ಮತ್ತು ತ್ರ‍್ಯಂಬಕೇಶ್ವರ, ನಾಶಿಕ ಇಲ್ಲಿ ನಡೆಯುವ ಕುಂಭಮೇಳಗಳ ಮೂಲಕ ಧರ್ಮವ್ಯವಸ್ಥೆಯು ಹಿಂದೂ ಸಮಾಜಕ್ಕೆ 4 ಬಹಿರಂಗ ವೇದಿಕೆಗಳನ್ನು ಲಭ್ಯ ಮಾಡಿಕೊಟ್ಟಿದೆ. ಈ  4  ಕ್ಷೇತ್ರಗಳು 4 ದಿಕ್ಕುಗಳ ಪ್ರತೀಕವಾಗಿವೆ. 


ಆಧುನಿಕ ಸಾರಿಗೆ ವಾಹನಗಳು ಲಭ್ಯ ಇಲ್ಲದ ಕಾಲದಲ್ಲಿಯೂ ಈ ಕುಂಭಮೇಳ ಆಯೋಜನೆ ಮಾಡಲಾಗುತ್ತಿತ್ತು. ಆ ಕಾಲದಲ್ಲಿ ಭಾರತದ ನಾಲ್ಕು ದಿಕ್ಕಿನಿಂದ ಎಲ್ಲರೂ ಒಟ್ಟಾಗಿ ಸೇರುವುದು ಸುಲಭವಾಗಿರಲಿಲ್ಲ. ಆದರೂ ಭಕ್ತರು ತಮ್ಮ ಶ್ರದ್ಧೆಯಿಂದಾಗಿ ಅಲ್ಲಿ ಬರುತ್ತಿದ್ದರು. ಆದ್ದರಿಂದ ಈ ಕುಂಭ ಮೇಳ ಭಾರತೀಯ ಐಕ್ಯತೆಯ ಪ್ರತೀಕ ಮತ್ತು ಹಿಂದೂ ಸಂಸ್ಕೃತಿಯ ಸಮಾನತೆಯ ಅಂಶವಾಗಿದೆ.


ಇದಕ್ಕೆ ಸಂಬಂಧಪಟ್ಟ ಒಂದು ಮಹತ್ವಪೂರ್ಣ ಘಟನೆ ನೋಡೋಣ - 1942 ರಲ್ಲಿ ಭಾರತದ ವಾಯಸರಾಯ ಲಾರ್ಡ್ ಲಿನಲಿಥಗೋ ಇವರು ಪಂ. ಮದನಮೋಹನ ಮಾಲವೀಯ ಇವರ ಜೊತೆಗೆ ಪ್ರಯಾಗರಾಜದ ಕುಂಭಮೇಳವನ್ನು ವಿಮಾನದ ಮೂಲಕ ವೀಕ್ಷಿಸಿದರು. ಅವರು ಲಕ್ಷಾಂತರ ಭಕ್ತರ ಗದ್ದಲ ನೋಡಿ ಆಶ್ಚರ್ಯ ಚಕಿತರಾದರು. 


ಅವರು ಪಂ. ಮಾಲವೀಯ ಇವರಿಗೆ ಕೇಳಿದರು, "ಈ ಕುಂಭಮೇಳದಲ್ಲಿ ಜನರು ಸಹಭಾಗಿ ಆಗುವುದಕ್ಕಾಗಿ ಆಯೋಜಕರು ಎಷ್ಟು ಪ್ರಯತ್ನಪಟ್ಟಿದ್ದಾರೆ ಮತ್ತು ಎಷ್ಟು ಖರ್ಚು ಮಾಡಬೇಕಾಯಿತು ?" ಪಂ. ಮಾಲವೀಯ ಉತ್ತರಿಸಿದರು, "ಕೇವಲ ಎರಡು ಪೈಸೆ" ಇದನ್ನು ಕೇಳಿ ಲಿನಲಿಥಗೋ ಕೇಳಿದರು, ಪಂಡಿತ ಜಿ, ನೀವೇನು ತಮಾಷೆ ಮಾಡುತ್ತೀರ ?"


ಪಂ. ಮಾಲವೀಯಜಿ ಇವರು ತಮ್ಮ ಜೇಬಿನಲ್ಲಿನ ಪಂಚಾಂಗ ತೆಗೆದು ಅವರ ಕೈಗೆ ನೀಡುತ್ತಾ ಹೇಳಿದರು "ಇದರ ಬೆಲೆ ಕೇವಲ ಎರಡು ಪೈಸೆ". ಇದರಿಂದ ಜನರಿಗೆ ತಿಳಿಯುತ್ತದೆ, ಕುಂಭ ಪರ್ವದ ಪವಿತ್ರ ಸಮಯ ಯಾವುದು, ಮತ್ತು ಅವರು ಸ್ವತಹ ಆ ಸಮಯದಲ್ಲಿ ಸ್ನಾನಕ್ಕಾಗಿ ಹಾಜರಾಗುತ್ತಾರೆ. ಯಾರಿಗೂ ವೈಯಕ್ತಿಕ ಆಮಂತ್ರಣ ನೀಡಲಾಗದು."


ಗಂಗಾ ಸ್ನಾನದ ಧ್ಯೇಯ : ಕುಂಭಮೇಳದಲ್ಲಿ ಜನರು, ‘ಯಾರು ಏನು ಧರಿಸಿದ್ದಾರೆ’ ಇದರ ಕಡೆಗೆ ಗಮನ ನೀಡುವುದಿಲ್ಲ. ಅಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ, ಮತ್ತು ಅಲ್ಲಿ ಯಾವುದೇ ಅಯೋಗ್ಯ ವರ್ತನೆ ಇರುವುದಿಲ್ಲ . ಎಲ್ಲಾ ಭಕ್ತರು ಕೇವಲ ಈಶ್ವರ ಭಕ್ತಿಯಲ್ಲಿ ಮಗ್ನರಾಗಿರುತ್ತಾರೆ. ಗಂಗೆಯಲ್ಲಿ ಸ್ನಾನದ ಧ್ಯೇಯ ಇದೇ ಎಲ್ಲರ ಉದ್ದೇಶವಾಗಿರುತ್ತದೆ.


ಸಾಧು-ಸಂತರ ಶಾಹಿ ಶೋಭಾಯತ್ರೆ ಮತ್ತು ಭಕ್ತರ ಅಖಂಡ ಭಕ್ತಿ - ಅಖಾಡಾದ ಸಾಧುಗಳು ಈ ಪರ್ವಕಾಲದ ಸ್ನಾನಕ್ಕೆ 'ಶಾಹಿ ಸ್ನಾನ' ಎನ್ನುತ್ತಾರೆ. ಇದಕ್ಕಾಗಿ ಸಾಧು - ಸಂತರು ಶಸ್ತ್ರಗಳ ಜೊತೆಗೆ ಶೋಭಾಯತ್ರೆ ನಡೆಸುತ್ತಾರೆ. ರಸ್ತೆಯ ಎರಡು ಬದಿಗೆ ಭಕ್ತರ ದಂಡು ಇರುತ್ತದೆ. ಶೋಭಾ ಯಾತ್ರೆಯ ಮಾರ್ಗದಲ್ಲಿ ರಂಗೋಲಿಗಳು ಮತ್ತು ಹೂವಿನಿಂದ ಅಲಂಕರಿಸಿರುತ್ತಾರೆ. 


ಅದರ ನಂತರ ಅಖಾಡಾದ ಸಾಧುಗಳು, ಮಹಂತರು ಮತ್ತು ಅವರ ಅನುಯಾಯಿಗಳು, ಆನೆ, ಒಂಟೆ, ಕುದುರೆ ಮುಂತಾದವುಗಳ ಜೊತೆ ವಾದ್ಯ ಯಂತ್ರಗಳಲ್ಲಿ ಸಂಗೀತನಾದದ ಜೊತೆಗೆ ಪವಿತ್ರ ತೀರ್ಥದ ಕಡೆಗೆ ಸಾಗುತ್ತಾರೆ. ಪ್ರಾತಃಕಾಲ ನಾಲ್ಕು ಗಂಟೆಯಿಂದ. 'ಪವಿತ್ರ ಸ್ನಾನ' ಆರಂಭವಾಗುತ್ತದೆ. ಈ ಸಮಯದಲ್ಲಿ ಡೋಲ್ ಮತ್ತು 'ಹರ ಹರ ಮಹಾದೇವ', ಜೈ ಗಂಗಾ ಮೈಯಾಕೀ', ಹೀಗೆ ಜಯಘೋಷದಿಂದ ವಾತಾವರಣ ಪ್ರತಿಧ್ವನಿಸುತ್ತಿರುತ್ತದೆ.


ಸಾಧು ಸಂತರ ದರ್ಶನದ ಅಮೂಲ್ಯ ಅವಕಾಶ -

ಹಿಮಾಲಯದ ಗುಹೆಗಳಲ್ಲಿ ಧ್ಯಾನ ಮಾಡುತ್ತಿರುವ ಸಿದ್ದಪುರುಷರು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆದು ಯಾತ್ರೆ ಮಾಡುವ ವ್ರತಸ್ಥರು ಮತ್ತು ಅಖಾಡಾದ ಸಾಧು ಮಹಂತರ ದರ್ಶನ ಕುಂಭಮೇಳದಲ್ಲಿ ಆಗುತ್ತದೆ.


ಶ್ರವಣ ಭಕ್ತಿಗೆ ಪ್ರೋತ್ಸಾಹ ನೀಡುವ ಆಯೋಜನೆ - ಕುಂಭಮೇಳದಲ್ಲಿ ಸಂತರ ಪ್ರವಚನ ಮತ್ತು ವ್ಯಾಖ್ಯಾನ ಭಕ್ತರ ಶ್ರವಣ ಭಕ್ತಿಗೆ ಪ್ರೋತ್ಸಾಹ ನೀಡುತ್ತದೆ. ಹಗಲಿರಳು ನಡೆಯುವ ಅನ್ನಛತ್ರಗಳು - ಪ್ರತಿ ಅಖಾಡಾದಲ್ಲಿ ಭಕ್ತರಿಗಾಗಿ ಹಗಲಿರಳು ಅನ್ನ ಛತ್ರಗಳನ್ನು ನಡೆಸುತ್ತಾರೆ. ಇದರಿಂದ ಲಕ್ಷಾಂತರ ಭಕ್ತರ ಭೋಜನದ ವ್ಯವಸ್ಥೆ ಆಗುತ್ತದೆ.


ಮೇಲು-ಕೀಳನ್ನು ಮರೆಸುವ ಅನ್ನದಾನ - ಕುಂಭದಲ್ಲಿ ಅನ್ನ ಛತ್ರಗಳ ಮಾಧ್ಯಮದಿಂದ ಭಕ್ತರಿಗೆ ಸಮಾನತೆಯ ಅನುಭವ ನೀಡುತ್ತದೆ. ಅಲ್ಲಿ ಭಿಕ್ಷುಕ ಮತ್ತು ಶ್ರೀಮಂತ, ಇಬ್ಬರೂ ಒಂದೇ ಸಾಲಿನಲ್ಲಿ 'ಪ್ರಸಾದ' ಸ್ವೀಕರಿಸುತ್ತಾರೆ.


ಈ ರೀತಿ, ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಬೇರೆ ಬೇರೆ ಸ್ಥಳಗಳಿಂದ ಬಂದಿರುವ ಭಕ್ತರು, ಸಾಧು ಸಂತರು ಮತ್ತು ಮಹಂತರು ತಮ್ಮ ವಿವಿಧತೆಯಲ್ಲಿ ಐಕ್ಯತೆಯ ದರ್ಶನ ಮಾಡಿಸುತ್ತಾರೆ. ಅದಕ್ಕಾಗಿ ಕುಂಭಮೇಳ ಹಿಂದೂಗಳ ಐಕ್ಯತೆಯ ಪ್ರತೀಕವಾಗಿದೆ.


ಈ ವರ್ಷದ ಮಹಾಕುಂಭದಲ್ಲಿ ವಿವಿಧ ಆಖಾಡಾಗಳು, ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮುಂತಾದವು ಒಟ್ಟಾಗಿ ಸೇರಿ ಹಿಂದೂ ರಾಷ್ಟ್ರ ಅಧಿವೇಶನ, ಹಿಂದೂ ಐಕ್ಯತಾ ಪಾದಯಾತ್ರೆಯ ಆಯೋಜನೆ ಮಾಡಿದರು. ಇದಕ್ಕೆ ಭಕ್ತರಿಂದ ಕೂಡ ಬಹಳ ಉತ್ಸಾಹದಿಂದ ಸಮರ್ಥನೆ ದೊರೆತು ಕಾಲ ಮಹತ್ಮೆಯ ಪ್ರಕಾರ ಹಿಂದೂ ಐಕ್ಯತೆಯ ದರ್ಶನವಾಯಿತು.


ಆಧಾರ : ಸನಾತನದ ಗ್ರಂಥ 'ಕುಂಭಮೇಳದ ಮಹತ್ವ ಹಾಗೂ ಪಾವಿತ್ರ್ಯ ರಕ್ಷಣೆ'


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top