ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳ ಘೋಷಣೆ

Upayuktha
0

   


ಕಾಂತಾವರ: ಕನ್ನಡ ಸಂಘದಲ್ಲಿ ಗಮಕಿ ಸತೀಶ್ ಕುಮಾರ್ ನಿಟ್ಟೆ ಕೆಮ್ಮಣ್ಣು ಅವರ ದತ್ತಿನಿಧಿಯ ‘ಗಮಕಕಲಾ ಪ್ರವಚನ’ ಪ್ರಶಸ್ತಿಗೆ ಪ್ರಸಿದ್ಧ ವ್ಯಾಖ್ಯಾನಕಾರರಾಗಿರುವ ಸರ್ಪಂಗಳ ಈಶ್ವರ ಭಟ್ ಮಂಗಳೂರು, ಗಮಕಿ ಯಾಮಿನಿ ಭಟ್ ಉಡುಪಿ ಅವರ ದತ್ತಿನಿಧಿಯ ‘ಗಮಕಕಲಾ ವಾಚನ’ ಪ್ರಶಸ್ತಿಗೆ ಗಮಕಿ ಯಜ್ಞೇಶ್ ಆಚಾರ್ಯ ಸುರತ್ಕಲ್  ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ  ಕೆ. ಶಾಮರಾಯ ಆಚಾರ್ಯ ಕಾರ್ಕಳ ಅವರ ದತ್ತಿನಿಧಿಯ ‘ಕಾಷ್ಠಶಿಲ್ಪಕಲಾ ಪ್ರಶಸ್ತಿಗೆ ರಥ ಶಿಲ್ಪಿ ಶಂಕರ ಆಚಾರ್ಯ ಕೋಟೇಶ್ವರ ಅವರು ಆಯ್ಕೆಯಾಗಿದ್ದು.


ಪ್ರತಿ ಪ್ರಶಸ್ತಿಯೂ ತಲಾ ಹತ್ತು ಸಾವಿರದ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಘೋಷಿಸಿದ್ದಾರೆ. ಈ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇದೇ ಮಾರ್ಚ್ 23ರಂದು ಕಾಂತಾವರದ ‘ಕನ್ನಡ ಭವನ’ದಲ್ಲಿ ನಡೆಯುವ ‘ಮುದ್ದಣ ಸಾಹಿತ್ಯೋತ್ಸವ’ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ‘ಮುದ್ದಣ ಸಾಹಿತ್ಯ ಪ್ರಶಸ್ತಿ’ಗಳ ಜೊತೆ ಈ ಪ್ರಶಸ್ತಿಗಳನ್ನೂ ನೀಡುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top