ಮಂಗಳೂರು: "ಯಕ್ಷಗಾನದಿಂದ ನಾನು ತುಂಬಾ ಅನುಭವ ಪಡೆದಿದ್ದೇನೆ. ಗಣ್ಯಮಾನ್ಯರ ಜೊತೆ ಕಲಾವಿದನಾಗಿ ಮಾನ್ಯತೆ ಪಡೆದಿದ್ದೇನೆ. ಜೊತೆಗೆ ಕಲೆಯ ಉಳಿಕೆಗಾಗಿ ಮೇಳ ನಡೆಸುತ್ತಾ ಸಾಕಷ್ಟು ನೋವು-ನಲಿವುಗಳನ್ನು ಹೊಂದಿದ್ದೇನೆ. ಆದರೂ ಸಹ ಕಲಾವಿದರ ಸಹಕಾರದಿಂದ ನೋವಿನಲ್ಲೂ ನಲಿವನ್ನು ಕಂಡಿದ್ದೇನೆ. ಅದರಲ್ಲಿ ಸಾರ್ಥಕತೆ ಇದೆ ಇಂದಿನ ಅಲೆವೂರಾಯ ಪ್ರತಿಷ್ಠಾನದ ಸನ್ಮಾನವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ" ಎಂದು ಬೆಂಕಿನಾಥೇಶ್ವರ ಮೇಳದ ಸಂಚಾಲಕ ಸುರೇಂದ್ರ ಮಲ್ಲಿ ಗುರುಪುರ ರವರು ಹೇಳಿದರು.
ಅವರು ಮಂಗಳಾದೇವಿಯಲ್ಲಿ ಜರಗುತ್ತಿರುವ ಅಲೆವೂರಾಯ ಪ್ರತಿಷ್ಠಾನದ ದ್ವಿತೀಯ ದಿನದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದೇವಳದ ಶ್ರೀನಿವಾಸ ಐತಾಳರು ಶುಭಕೋರಿದರು.
ತುಳು ಕೂಟ ಕುಡ್ಲದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಮಾತನಾಡಿ "ಯಕ್ಷಗಾನವು ಸರ್ವರನ್ನೂ ತೊಡಗಿಸಿಕೊಳ್ಳುವ ಕಲೆ.ಇಂದು ಮಕ್ಕಳು, ಸ್ರೀ ಪುರುಷ ಈ ಎನ್ನುವ ಭೇದವಿಲ್ಲದೇ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಪ್ರತಿಷ್ಠಾನದಿಂದ ಇನ್ನೂ ಇನ್ನು ಹೆಚ್ಚಿನ ಸೇವೆ ಈ ರಂಗಕ್ಕಿರಲಿ" ಎಂದು ಹೇಳಿದರು.
ಸುಧಾಕರ ರಾವ್, ಪೇಜಾವರರವರು ಸ್ವಾಗತಿಸಿದರೆ ರವಿ ಅಲೆವೂರಾಯ ನಿರ್ವಹಿಸಿ, ಮಧುಸೂದನ್ ಅಲೆವೂರಾಯ ವಂದಿಸಿದರು. ಬಳಿಕ ಖ್ಯಾತಕಲಾವಿದರ ಕೂಡುವಿಕೆಯಿಂದ "ರಾಮಾವತಾರ" ಎಂಬ ಬಯಲಾಟ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ