ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಉಪನ್ಯಾಸಕಿ ಪರಿಣಿತ ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಹಾರ ಆಡಳಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಪಿ ಫಕೀರಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ "ಕಲ್ಚರಲ್ ಹೆರಿಟೇಜ್ ಅಂಡ್ ಪ್ರಮೋಷನ್ ಆಫ್ ಟೂರಿಸಂ: ಎ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಇನ್ ಕರ್ನಾಟಕ" ಎಂಬ ವಿಷಯದ ಕುರಿತಾದ ಮಹಾಪ್ರಬಂಧಕ್ಕೆ ಈ ಗೌರವ ಸಂದಿದೆ. ಪರಿಣಿತ ಶೆಟ್ಟಿ, ಯಳಂತೂರು ಹಾಡಿಮನೆ ಚಂದ್ರಹಾಸ ಶೆಟ್ಟಿ ಹಾಗೂ ಪರೀಕ ಮೇಲ್ಮನೆ ದಿ.ವಿಶಾಲಾಕ್ಷಿ ಸಿ ಶೆಟ್ಟಿಯವರ ಪುತ್ರಿ ಹಾಗೂ ಅಲ್ತಾರ್ ಮೂಡೊದ್ದಿನ ಮನೆ ಅಶ್ವತ್ಥಾಮ ಹೆಗ್ಡೆಯವರ ಪತ್ನಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ