ಬಳ್ಳಾರಿ: ತಾಲೂಕಿನ ಹರಗಿನದೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಜೆ ಟಿ ಫೌಂಡೇಷನ್, ಜಿಲ್ಲಾ ಆಯುಷ್ ಆರೋಗ್ಯ ಮಂದಿರ, ಎಸ್‌ಆರ್‌ಕೆ ಯೋಗ ಕೇಂದ್ರ ಕುರೇಕುಪ್ಪ, ಇವರ ಸಹಯೋಗದೊಂದಿಗೆ ನಡೆಯಿತು ,108 ವಿದ್ಯಾರ್ಥಿಗಳು ವಜ್ರಾಸನ ಭಂಗಿ ಅಲ್ಲಿ 15 ನಿಮಿಷ ಗಳ ಕಾಲ ಓಂ ಕಾರ ಧ್ಯಾನದಲ್ಲಿ ಕುಳಿತು ವಿಶ್ವ ದಾಖಲೆಯ ಪ್ರಯತ್ನ ಮಾಡಿದ್ದಾರೆ.
ಜೆ ಟಿ ಫೌಂಡೇಷನ್ನ ತಿಮ್ಮಪ್ಪ ಜೋಳದ ರಾಶಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿ ಮಗುವಿಗೆ 300 ರೂಪಾಯಿ ನೀಡಿ ಪ್ರೋತ್ಸಾಹಿಸಿದ್ದಾರೆ.ಪ್ರತಿ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಯೋಗ ಕಾರ್ಯಕ್ರಮ ಮಾಡಬೇಕು. ನಿರಂತರವಾಗಿ ಯೋಗ ಮಾಡಿದರೇ ಏಕಾಗ್ರತೆ ಜಾಸ್ತಿ ಆಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಬಳ್ಳಾರಿ ಜಾಗತಿಕ ಯೋಗದ ಉಪಾಧ್ಯಕ್ಷ ಚಿದಂಬರ ರಾವ್ ,ರುದ್ರಪ್ಪ ,ರುದ್ರಮುನಿಗೌಡ ,ಬಸವನಗೌಡ ಶಾಲೆಯ ಮುಖ್ಯೋಪಾಧ್ಯಾಯಿನಿ ಜೀವ ,ಮುಖ್ಯ ಶಿಕ್ಷಕರಾದ ವನಜಾಕ್ಷಮ್ಮ ,ಗ್ರೇಸಿ,ಮಂಜುಳಾ ರಾಣಿ, ಮಲ್ಲಿಕಾರ್ಜುನ, ತಿಮ್ಮಪ್ಪ, ವಿಶ್ವಾರಾಧ್ಯ, ಅಂಬಿಕಾ, ಮಾಧುರಿ, ಲತಾ, ಊರಿನ ಪಂಚಾಯತ್ ಸದಸ್ಯರು ಚಂದ್ರು.
ಬಳ್ಳಾರಿ ಆಯುಷ್ ಇಲಾಖೆ ಮುಖ್ಯ ಯೋಗ ಶಿಕ್ಷಕರು ಬಳ್ಳಾರಿ ಜಿಲ್ಲಾ ಜಾಗತಿಕ ಯೋಗ ಶೃಂಗಸಭೆ ಚೀಫ್ ಕೋ ಆರ್ಡಿನೇಟರ್ ವಿಶ್ವ ಯೋಗಿ ಪ್ರಶಸ್ತಿ ವಿಜೇತ ಎಸ್ ಆರ್ ಕೆ ಯೋಗ ಕೇಂದ್ರ ಕಾರ್ಯಾಧ್ಯಕ್ಷ ಎ. ರಾಘವೇಂದ್ರ ಇದ್ದರು. ಯೋಗ ಶಿಕ್ಷಕರಾದ ಸೌಮ್ಯ, ಶ್ರಾವಣಿ ಎ ,ಶ್ರಾವಂತಿ ಎ ,ಸಂಗೀತ ನೃತ್ಯ ದೀಕ್ಷಾ ,ಗಾಂಧಾರಿ ವಿದ್ಯಾ ಸಾಯಿ ಸಗನ್ ,ಭರತ ನಾಟ್ಯ ನಕ್ಷತ್ರ ,ದಿವ್ಯ ಇವರಿಂದ ಪ್ರದರ್ಶಿಸಲಾಯ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ