ಬಳ್ಳಾರಿ: ವಿದ್ಯಾರ್ಥಿಗಳಿಗಾಗಿ ಶುಚಿ- ರುಚಿ ಆಹಾರ ಸ್ಪರ್ಧೆ

Upayuktha
0

 


ಬಳ್ಳಾರಿ:  ಶುಚಿ-ರುಚಿಯಾದ ಉತ್ತಮ ಆಹಾರ ಸೇವನೆಯಿಂದ ಆರೋಗ್ಯವಂತರಾಗಿ ಜೀವಿಸಲು ಸಾಧ್ಯ. ಇತ್ತೀಚೆಗೆ ಹೊರಗಿನ ಆಹಾರಕ್ಕೆ ಮಕ್ಕಳು ಆಕರ್ಷಿತರಾಗಿ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ   ಎಂದು ಕಿತ್ತೂರು ರಾಣಿ ಚೆನ್ನಮ್ಮ ಪ್ರಾಥಮಿಕ ಹಾಗೂ ಬಾಲಕಿಯರ  ಪ್ರೌಢಶಾಲೆ ಅಧ್ಯಕ್ಷರು ಟಿ ನರೇಂದ್ರಬಾಬು ಅಭಿಪ್ರಾಯಪಟ್ಟರು.


ಅವರು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ" ಶುಚಿ ರುಚಿ ಆಹಾರ ಸ್ಪರ್ಧೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಶಾಲೆಗಳಲ್ಲಿ ಈ ರೀತಿ ಅಡುಗೆ ಸ್ಪರ್ಧೆ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಅಡುಗೆಯ ಕಲಿಯುವ ಮನೋಭಾವನೆ ಬೆಳೆದು ನಮ್ಮ ಹಳೆಯ ಆಹಾರ ಪದ್ಧತಿ ಮನೆಯ ಅಡುಗೆಯ ಬಗ್ಗೆ ಅರಿತುಕೊಳ್ಳಲು ಸಹಾಯಕವಾಗಿರುತ್ತದೆ. ವಿದ್ಯಾರ್ಥಿಗಳು ವಿವಿಧ ರೀತಿಯ ತಿನಿಸುಗಳನ್ನು ಪ್ರೌಢಶಾಲೆಯ ವಿದ್ಯಾರ್ಥಿನಿಯರು ತಾವೇ ಸ್ವತಃ ತಯಾರಿಸಿದ್ದ ವಿವಿಧ ಬಗೆಯ ಹಬ್ಬದ ಅಡಿಗೆಗಳನ್ನು ವಿಶಿಷ್ಟ ರೀತಿಯಲ್ಲಿ ರುಚಿಯಾಗಿ ಉತ್ಸಾಹದಿಂದ ತಯಾರಿಸಿದ್ದು ಮೆಚ್ಚುಗೆ ಪಡೆಯಿತು. 


ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಸಹಕರಿಸಿದ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಪಾಲಕರ ಪ್ರೋತ್ಸಾಹ ಶ್ಲಾಘನೀಯವೆಂದು  ತೀರ್ಪುಗಾರರು ಹೇಳಿದರು.  


ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿ ಸದಸ್ಯರಾದ ಕೆ ಶಂಭುಲಿಂಗ, ಎಸ್ ಚಂದ್ರಶೇಖರ, ಎಸ್. ಅನುಪ್ ಕುಮಾರ್,  ವಿ ಜೆ ವಿಕ್ರಂ, ಪಿ ಜೋಳದ ರಾಶಿ  ಬಸವರಾಜ್ ಗೌಡ  ಹಾಗೂ ತೀರ್ಪುಗಾರರಾಗಿ  ಪರಿಮಳ,  ಶಿಲ್ಪ, ಹಾಗೂ  ಸುನಿತಾ ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top