ಗ್ರಾಮೀಣ ಬ್ಯಾಂಕುಗಳ 50 ವರ್ಷಗಳ ಚಾರಿತ್ರಿಕ ಮೈಲಿಗಲ್ಲು- ವಿಶೇಷ ಅಂಚೆ ಲಕೋಟೆ ಬಿಡುಗಡೆ

Upayuktha
0


ಬಳ್ಳಾರಿ: 2 ನೇ ಅಕ್ಟೋಬರ್ 1975 ರಲ್ಲಿ ಭಾರತದ ಸರ್ಕಾರದ ಆಜ್ಞೆ ಮೂಲಕ ಮೊದಲ ಐದು ಆರ್‌ಆರ್‌ಬಿ ಗಳನ್ನು ಸ್ಥಾಪಿಸುವುದರೊಂದಿಗೆ ಆರಂಭವಾದ ಪ್ರಯಾಣವು ಇಂದು 43 ಗ್ರಾಮೀಣ ಬ್ಯಾಂಕ್ ಗಳೊಂದಿಗೆ  22069 ಶಾಖೆಗಳಿಂದ ಗ್ರಾಮೀಣ/ಉಪ ನಗರ ಪ್ರದೇಶಗಳಿಂದ ಠೇವಣಿಗಳನ್ನು ಸಂಗ್ರಹಿಸಿ ಮತ್ತು ಕಿರಿದಾದ ಮತ್ತು ಹಗುರ ಕೃಷಿಕರಿಗೆ, ಕೃಷಿ ಕಾರ್ಮಿಕರು, ಗ್ರಾಮೀಣ ಕುಶಲಕರ್ಮಿ ಮತ್ತು ಇತರ ಪ್ರಾಥಮಿಕ ಕ್ಷೇತ್ರದ ಭಾಗಗಳಿಗೆ ಸಾಲಗಳನ್ನು ಮತ್ತು ಮುಂಗಡಗಳನ್ನು ನೀಡುತ್ತವೆ.


40 ಕೋಟಿಗೂ ಅಧಿಕ ಗ್ರಾಹಕರಿಗೆ ಯಶಸ್ವಿ ಬ್ಯಾಂಕಿಂಗ್ ಸೇವೆ ನೀಡುವ ಮೂಲಕ ದೇಶದ ಪ್ರಗತಿಗೆ ಅಮೂಲ್ಯ  ಕೊಡುಗೆ ನೀಡುತ್ತಿದೆ. ಇದೀಗ ಈ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಅಕ್ಟೋಬರ್ 2, 2024 ರಿಂದ ಅಕ್ಟೋಬರ್ 2, 2025 ರವರೆಗೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನ ಸಂಘಟನೆ ಈ ಮಹತ್ವದ 50 ವರ್ಷಗಳ ಚಾರಿತ್ರಿಕ ಮೈಲಿಗಲ್ಲಿನ ಸಂಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ಗಳ ನೌಕರರ ಒಕ್ಕೂಟದ ಸಹಯೋಗದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಗೊಳಿಸಲು ಹೆಮ್ಮೆಯಾಗುತ್ತಿದೆ ಎಂದು  ಬಳ್ಳಾರಿ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನೌಕರರ ಸಹಕಾರಿ ಸಂಘದ ಸಮುದಾಯ ಭವನದಲ್ಲಿ  ವಿಶೇಷ ಲಕೋಟೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಂಚೆ ಅಧೀಕ್ಷಕರಾದ ಪಿ.ಚಿದಾನಂದ ರವರು ಅಭಿಪ್ರಾಯ ಪಟ್ಟರು. 


ಗ್ರಾಮೀಣ ಬ್ಯಾಂಕ್ ಗಳ 50 ವರ್ಷಗಳ ಯಶೋಗಾಥೆ ಇನ್ನೂ ಮುಗಿಲೆತ್ತರಕ್ಕೇರಲಿ, ಲಾಭವನ್ನು ಗಳಿಸಿ ದೇಶ ಸೇವೆಗೈಯಲಿ ಹಾಗೂ  ಮುಂದೆ ಅಂಚೆ ಇಲಾಖೆ ಗ್ರಾಮೀಣ ಬ್ಯಾಂಕಿನ ಕುರಿತು ಅಮೃತ ಮಹೋತ್ಸವ , ಶತಮಾನೋತ್ಸವದ ಕುರಿತು ಅಂಚೆ ಚೀಟಿಯನ್ನು ಬಿಡುಗಡೆ ಗೋಳಿಸುವಂತಾಗಲಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಛೇರ್ಮನ್ ರಾದ ಡಿ.ಅರ್.ದಿಲ್ಲಿಬಾಬು ಹಾರೈಸಿದರು. 


ವಿಶೇಷ ಲಕೋಟೆ ಬಿಡುಗಡೆ  ಕಾರ್ಯಕ್ರಮದಲ್ಲಿ, ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ  ಕಾರ್ಯದರ್ಶಿ ಎಸ್. ವೆಂಕಟೇಶ್ವರ ರೆಡ್ಡಿ , ಅಧ್ಯಕ್ಷರಾದ ಹೆಚ್ . ನಾಗಭೂಷಣ ರಾವ್, ವಿ ಕೆ ಬನ್ನಿಗೊಳ್,ಸಿ.ರಾಜೀವನ್,ಕೋಟೇಶ್ವರ ರಾವ್, ಟಿ ಜಿ ವಿಟ್ಟಲ್, ಪುಣ್ಯಮೂರ್ತಿ ಇತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದೇಶದ ವಿವಿದ ಜಿಲ್ಲೆಗಳಿಂದ ಬಂದಿದ್ದ ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಅಂಚೆ ಇಲಾಖೆಯ ನೌಕರರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top