ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ನೂತನ ಸಮಿತಿಯ ಪದಗ್ರಹಣ

Upayuktha
0

ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ



ಬಹರೈನ್: ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹಣ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.


ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಸಚಿವ ಶಿವರಾಜ್ ತಂಗಡಗಿರವರು ಪದಗ್ರಹಣ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು, ನಮ್ಮ ಕರ್ನಾಟಕ ರಾಜ್ಯ ಹಾಗೂ  ಬಹರೈನ್ ದೇಶಕ್ಕೂ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಬಹರೈನ್ ದೇಶದಲ್ಲಿ ಕನ್ನಡ ಬರಹಗಳು ಹಾಗೂ ಬಾವುಟ ಕಾಣಲು ಸಾಧ್ಯ. ನಾನು ಬಹರೈನ್ ದೇಶದ ರಾಜನಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕನ್ನಡ ಭಾಷೆ ಸಂಸ್ಕೃತಿ ಉಳಿವಿಗೆ ಅನಿವಾಸಿ ಕನ್ನಡಿಗರ ಕೊಡುಗೆ ಅಪಾರವಾದುದು ಎಂದು ಹೇಳಿದರು.


ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್, ಉಪಾಧ್ಯಕ್ಷರಾಗಿ ವಿಜಯ ನಾಯ್ಕ್ ವರ್ಕಾಡಿ, ಪ್ರ. ಕಾರ್ಯದರ್ಶಿಯಾಗಿ ರೋಶನ್ ಲೆವೀಸ್, ಕಾರ್ಯದರ್ಶಿಯಾಗಿ ವಿಟ್ಲ ಜಮಾಲುದ್ದೀನ್, ಕೋಶಾಧಿಕಾರಿಯಾಗಿ ಮಂಗೇಶ್ ದೆಸೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ್ ಮಾಣಿಲ, ಸಾರ್ವಜನಿಕ ಸಂಬಂಧ ಕಾರ್ಯದರ್ಶಿಯಾಗಿ ಅಬ್ದುಲ್ ಜವಾದ್ ಪಾಷ, ಸದಸ್ಯರಾಗಿ ಸುಜಯ್ ಪಿಂಟೋ ಅಧಿಕಾರ ಸ್ವೀಕರಿಸಿದರು.


ಬೆಂಗಳೂರಿನ ಮೈಸೂರು ಮರ್ಚೆಂಟ್‌ ಕಂಪನಿಯ ಅಧ್ಯಕ್ಷ ಡಾ. ಎಚ್.ಎಸ್ ಶೆಟ್ಟಿ ಮುಖ್ಯ ಅತಿಥಿಯಾಗಿ ‌ಭಾಗವಹಿಸಿ ಮಾತನಾಡಿ ಸರಕಾರಿ‌ ಹಾಗೂ ಅನುದಾನಿತ ಕನ್ನಡ ಶಾಲೆಗಳನ್ನು ಸರಕಾರವೇ ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತಿಸುತ್ತಿದೆ. ಇದರ ಪರಿಣಾಮವಾಗಿ ಮುಂದಿನ ಮೂವತ್ತು ವರ್ಷಗಳಲ್ಲಿ ಕನ್ನಡ ಮಾತನಾಡುವ ಜನರು ಸಿಗಬಹುದು ಹೊರತು ಕನ್ನಡ ಬರೆಯಬಲ್ಲ ವ್ಯಕ್ತಿ ಸಿಗುವುದು ಕಷ್ಟ ಸಾಧ್ಯ ಎಂದು ಹೇಳಿದರು.


ಅಲ್-ಅಲೀಲ್ ಆಸ್ಪತ್ರೆಯ ಉಪಾಧ್ಯಕ್ಷ ಅಸೀಫ್ ಮೊಹಮ್ಮದ್, ಸೌಂದರ್ಯ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಮಂಜಪ್ಪ ಪೂವಪ್ಪ, ಎಚ್.ಪಿ.ಆರ್ ಗ್ರೂಪ್ ಆಫ್ ಎಜ್ಯುಕೇಶನಲ್ ಇನಸ್ಟಿಟ್ಯೂಟ್ ನ ಅಧ್ಯಕ್ಷ ಹರಿಪ್ರಸಾದ್ ರೈ, ಮಂಗಳೂರಿನ ಎಕ್ಸ್ ಪಟ್೯ ವಿದ್ಯಾಸಂಸ್ಥೆ ಸ್ಥಾಪಕ ಸಿ.ಎ ಎಸ್.ಎಸ್ ನಾಯಕ್, ಚಲನಚಿತ್ರ ನಟಿ ನವ್ಯ ಪೂಜಾರಿ, ಕರ್ನಾಟಕ ಸೋಶಿಯಲ್ ಕ್ಲಬ್ ಅಧ್ಯಕ್ಷ ಅನಂದ್ ಲೋಬೋ, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ನ ಸಲಹೆಗಾರ ಆಸ್ಟೀನ್ ಸಂತೋಷ್ ಹಳೆಯಂಗಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.


ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಅಧ್ಯಕ್ಷ ರಾಜ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ನ ಪ್ರ.ಕಾರ್ಯದರ್ಶಿ ರೋಶನ್ ಲೆವೀಸ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಮಾಣಿಲ ವಂದಿಸಿದರು. ಜಾನ್ವೀ ಮಹಾದಿ ಕಾರ್ಯಕ್ರಮ ನಿರೂಪಿಸಿದರು.


ಗೋಪಿ, ಅಶೋಕ್ ಬಸ್ತಿ, ರಾಘವೇಂದ್ರ ಬಸ್ತಿ, ಅಶೋಕ್ ಪೊಳಲಿ, ಭಾಗ್ಯಶ್ರೀ ಮುಲುವಾಲಿ, ಜಯರಾಮ್ ಪ್ರಭು ರವರಿಂದ ಮಿಮಿಕ್ರಿ, ‌ಹುಲಿಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯಿತು.


ವರದಿ: ಆರೀಫ್ ಯು‌.ಆರ್ ಬಹರೈನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top