ಫೆ. 28 ; ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಸೈನ್ಸ್ ಎಕ್ಸ್ಪೋ

Upayuktha
0


ಬಳ್ಳಾರಿ: ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಫೆ 28 ರಂದು ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಪ್ರತಿವಷದಂತೆ ಈ ವರ್ಷವೂ ಸಹಿತ ಸೈನ್ಸ್ ಎಕ್ಸ್ಪೋ ವಸ್ತುಪ್ರದರ್ಶನ ಆಯೋಜಿಸಲಾಗಿದೆ.

ಈ ಕುರಿತು ಶಾಲೆಯ ಪ್ರಾಚಾರ್ಯರಾದ ಲಕ್ಷ್ಮಿ ಅವರು ಪ್ರಕಟಣೆ ನೀಡಿದ್ದು, ಅಂದು ಬೆಳಿಗ್ಗೆ 9-30ರಿಂದ ಆರಂಭವಾಗುವ ಸೈನ್ಸ್ ಎಕ್ಸ್ ಪೋ ಕಾರ್ಯಕ್ರಮವನ್ನು ಖ್ಯಾತ ತಜ್ಞವೈದ್ಯರಾದ ಡಾ.ವಸಂತ್ ಶೇಠ್ ಅವರು ಚಾಲನೆ ನೀಡಲಿದ್ದಾರೆ. 


ಸಂಜೆ 3 ಗಂಟೆಯವರೆಗೆ ವಿದ್ಯಾಥಿಗಳಿಂದಲೇ ರೂಪಿತವಾಗುವ ವಿಜ್ಞಾನ, ಗಣಿತ, ಸಮಾಜ, ಆರ್ಥಿಕ, ಭೌಗೋಳಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ, ಪ್ರಾಕೃತಿಕ, ಜ್ಞಾನಪೀಠ ವಿಜೇತರ, ಹಂಪಿ ಉತ್ಸವ ಮತ್ತು ವೈವಿಧ್ಯ ನಮೂನೆಯ ಎಲ್ಲ ಬಗೆಯ ವಾಸ್ತವಿಕ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ವಸ್ತುಪ್ರದಶನ ಏಪಡಿಸಲಾಗಿದೆ. ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರವೂ ಒಳಗೊಂಡಂತೆ ವಿವಿಧ ಕ್ಷೇತ್ರಗಳ ಗಣ್ಯ ಮಾನ್ಯರು, ಸಾಧಕರು ಈ ವಸ್ತುಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ. 


ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕ ವಿಕಸನಕ್ಕೆ ಪೂರಕವಾಗಿ ಈ ವಸ್ತುಪ್ರದರ್ಶನ ಜರುಗಲಿದ್ದು ಪೋಷಕರು, ವಿದ್ಯಾರ್ಥಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಚೈತನ್ಯ ಟೆಕ್ಕೋ ಆಡಳಿತ ಮಂಡಳಿಯ ಎಜಿಎಂ ಹರಿಕೃಷ್ಣ ಸೇರಿದಂತೆ ಶಾಲೆಯ ಎಲ್ಲ ಪ್ರಾಧ್ಯಾಪಕರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಮತ್ತು ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top