ತೊಗಲುಗೊಂಬೆ ಕಲೆ ತುಂಬಾ ಸೂಕ್ಷ್ಮ ಹಾಗೂ ಸಂಕೀರ್ಣ ಕಲೆ, ಇದಕ್ಕೆ ಇನ್ನಷ್ಟು ಆಧುನಿಕ ಸ್ಪರ್ಶ ಸೇರಿ ವಿಶ್ವಮಾನ್ಯವಾಗಲಿ-ರುದ್ರೇಶ್.
ಬಳ್ಳಾರಿ: ಬಳ್ಳಾರಿ ನಗರದ ಹುಲಿಕುಂಟೆರಾಯ ತೊಗಲಗೊಂಬೆ ಕಲಾ ತಂಡದ 15 ನೇ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ದದ”ಹುಲಿಕುಂಟೆ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಇಲ್ಲಿನ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿ.ಎಸ್.ಕೆ. ವಿಶ್ವವಿದ್ಯಾಲಯದ ಕುಲಸಚಿವ ಎಸ್. ಎನ್. ರುದ್ರೇಶ್, ತೊಗಲುಗೊಂಬೆ ಕಲೆ ತುಂಬಾ ಸೂಕ್ಷ್ಮ ಹಾಗೂ ಸಂಕೀರ್ಣ ಕಲೆ, ಇದಕ್ಕೆ ಇನ್ನಷ್ಟು ಆಧುನಿಕ ಸ್ಪರ್ಶ ಸೇರಿ ಅದು ವಿಶ್ವಮಾನ್ಯವಾಗಲಿ ಎಂದು ಆಶಿಸಿದರು.
ಈ ತೊಗಲು ಗೊಂಬೆ ಕಲೆ ಕಲೆಯಲು ವಿದೇಶಿಯರು ಲಕ್ಷಾಂತರ ರೂ ಶುಲ್ಕ ನೀಡಿ ಭಾರತಕ್ಕೆ ಬಂದು ಕಲಿಯುತ್ತಾರೆ. ಆದರೆ ಇಲ್ಲಿನ ಈ ಕಲೆಯ ಕಲಾವಿದರ ಬದುಕು ಅಷ್ಟೊಂದು ಸುಂದರವಾಗೇನಿಲ್ಲ. ಅದಕ್ಕಾಗಿ ನಮ್ಮ ವಿವಿಯಲ್ಲಿ ಇಂತಹ ಕಲೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.
ಇಂದಿನ ಸೆಮಿಸ್ಟರ್ ಶಿಕ್ಷಣ ಪದ್ದತಿಯಿಂದ ಮಕ್ಕಳು ಬರೀ ಪುಸ್ತಕದ ಹುಳುಗಳಾಗಿ ಅಂಕಗಳಿಸುತ್ತಾರೆ ಹೊರತು, ಕಲೆ ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಅರಿವಿಲ್ಲ. ಈ ಮೊದಲಿನಂತೆ ಸಮಗ್ರ ಶಿಕ್ಷಣದಾವಶ್ಯಕತೆ ಇದೆಂದರು. ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ಬಿ. ನಾಗರಾಜ್ ಮಾತನಾಡಿ. ಇಂದಿನ ಮಕ್ಕಳು ಸಾಂಸ್ಕೃತಿಕ ವಕ್ತಾರರಾಗುವ ಬದಲು ಮೊಬೈಲ್ ದಾಸರಾಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅರಿವು ಮೂಡಿಸಬಲ್ಲ ಕೃತಿಗಳ ಅಭ್ಯಸ ವಿಲ್ಲದಂತಾಗಿದೆ. ತಾಯಿ ಎಂಬ ಕೃತಿ ಓದದೇ ವಿದ್ಯಾರ್ಥಿ ಜೀವನ ಪರಿಪೂರ್ಣ ಆಗಲಾರದು. ಮಕ್ಕಳು ಮೊಬೈಲ್ ರೀಲ್ ಗೀಳಿನಿಂದ ಹೊರಬರಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅದ್ಯಕ್ಷ ಸಿದ್ಧರಾಮ ಕಲ್ಮಠ್ ಮಾತನಾಡಿ, ಕೆ. ಹೊನ್ನೂರಸ್ವಾಮಿ ಸಾಧಕರನ್ನು ಗುರುತಿಸಿ ಹುಲಿಕುಂಟೆಶ್ರೀ ಪ್ರಶಸ್ತಿ ನೀಡುತ್ತಿರುವುದು ಅಭಿನಂದನಾರ್ಹ ಕೆಲಸ ಎಂದರು .
ಅದ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡಮಿ ಅಧ್ಯಕ್ಷ ಡಾ.ಕೆ.ಆರ್. ದುರ್ಗದಾಸ್ ಮಾತನಾಡಿ, ಅಳಿವಿನಂಚಿನಲ್ಲಿರುವ ತೊಗಲುಗೊಂಬೆ ಕಲೆ ಉಳಿಸುತ್ತಿರುವ ಹೊನ್ನೂರಸ್ವಾಮಿಯವರ ಶ್ರಮ ಮಹತ್ತರವಾದದ್ದು , ಬಳ್ಳಾರಿ ಬಯಲಾಟದ ತವರೂರು ,ಇತ್ತೀಚಿಗೆ ಬಯಲಾಟ ತನ್ನ ಮೂಲತನವನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದರು.
ಕಲೆ ಸಾಹಿತ್ಯ ಶಿಕ್ಷಣ ಸಂಗೀತ ಸಮಾಜ ಸೇವೆ ಕೃಷಿ ರಂಗಭೂಮಿ ಹಾಗೂ ಸಾಹಿತ್ಯ ಸೇವೆ ಸಲ್ಲಿಸಿದ . ಟಿ. ಎಚ್. ಎಂ. ಬಸವರಾಜ್, ಎ.ಎಂ.ಪಿ ವೀರೇಶಸ್ವಾಮಿ, ದರೂರು ಪುರುಷೋತ್ತಮಗೌಡ, ಮೋಕಾ ರಾಮೇಶ್ವರ, ಸುವರ್ಣ ಟಿವಿ ವರದಿಗಾರ ನರಸಿಂಹ ಮೂರ್ತಿ ಕುಲಕರ್ಣಿ ಸೇರಿದಂತೆ 19 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಸಂಸ್ಥೆಯ ಅಧ್ಯಕ್ಷ ಕೆ.ಹೊನ್ನೂರಸ್ವಾಮಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಮಾತಿ ಬಸವಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು , ವಿವಿಧ ಸಂಘ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ