ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಸಂಸ್ಥೆಯ 60ನೇ ಸಂಗೀತೋತ್ಸವವನ್ನು ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ರಾಮ ಮಂದಿರದಲ್ಲಿ ಫೆಬ್ರವರಿ 1 ರಿಂದ 16ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ನಾಡಿನ ಪ್ರಖ್ಯಾತ ಸಂಗೀತ ದಿಗ್ಗಜರುಗಳಿಗೆ ಪ್ರಶಸ್ತಿ-ಪುರಸ್ಕಾರಗಳನ್ನು ಹಮ್ಮಿಕೊಂಡಿತ್ತು.
ಹಿರಿಯ ಪಿಟೀಲು ವಿದ್ವಾನ್ ಎಸ್. ಶೇಷಗಿರಿರಾವ್ ಅವರಿಗೆ "ಜೀವಮಾನ ಸಾಧನ ಪುರಸ್ಕಾರ ಪ್ರಶಸ್ತಿ", ವಿದುಷಿ ಟಿ.ಎಸ್. ಸತ್ಯವತಿ ಅವರಿಗೆ "ಕಲಾಜ್ಯೋತಿ ಪ್ರಶಸ್ತಿ" ಮತ್ತು ಬೆಂಗಳೂರು ಸಹೋದರರೆಂದೇ ಖ್ಯಾತರಾದ ವಿದ್ವಾನ್ ಎಂ. ಬಿ. ಹರಿಹರನ್ ಮತ್ತು ವಿದ್ವಾನ್ ಎಸ್. ಅಶೋಕ್ ಅವರಿಗೆ "ನಾದಜ್ಯೋತಿ ಪುರಸ್ಕಾರ"ಗಳನ್ನು ನೀಡಿ ಗೌರವಿಸಲಾಯಿತು.
ಈ ವಿಶೇಷ ಸಮಾರಂಭಕ್ಕೆ ಮುಖ್ಯ ಅತಿಥಿಗಳು ಬಿ.ಕೆ. ಶಿವರಾಂ (ನಿವೃತ್ತ ಸಹಾಯಕ ಆಯುಕ್ತರು ಪೋಲೀಸ್ ಇಲಾಖೆ), ರವೀಂದ್ರ ಭಟ್ಟ (ಎಕ್ಸಿಕ್ಯೂಟಿವ್ ಸಂಪಾದಕರು, ಪ್ರಜಾವಾಣಿ) ಮತ್ತು ಎಂ. ಕೆ. ಕೃಷ್ಣ (ನಿರ್ದೇಶಕರು, ಡಾ|| ರಾಜಕುಮಾರ್ ನೇತ್ರ ಬ್ಯಾಂಕ್) ಇವರುಗಳು ಆಗಮಿಸಿದ್ದರು. ಸಂಸ್ಥೆಯ ಆಡಳಿತ ವರ್ಗದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ