ವಿಸಿ ಪುತ್ತೂರು: ಬಿಬಿಎಂ ಹಳೆ ವಿದ್ಯಾರ್ಥಿಗಳ ಪುನರ್ಮಿಲನ, ಗುರುವಂದನೆ

Upayuktha
0


ಪುತ್ತೂರು: 1999 ರ ಬ್ಯಾಚ್ ನ ಬಿಬಿಎಂ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಜ.11 ರಂದು ನೆಹರು ನಗರದ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆಯಿತು. ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಜಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಎ.ವಿ ನಾರಾಯಣ ಮುಖ್ಯ ಅತಿಥಿಗಳಾಗಿದ್ದರು.


ಶ್ರೀಮತಿ ನಂದಿತಾ ಪೈ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಿಬಿಎಂ ನ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ವಿದೇಶದಿಂದ ಆಗಮಿಸಿದ ವಿದ್ಯಾರ್ಥಿಗಳ ಸಹಿತ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎ.ವಿ ನಾರಾಯಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.


1999 ಬಿಬಿಎಂನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕೃಷ್ಣರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತು ನುಡಿದರು. 


ಹಳೆ ವಿದ್ಯಾರ್ಥಿಗಳ ಪರಿಚಯ ಜೊತೆಗೆ ಕಾರ್ಯಕ್ರಮ ಆರಂಭಗೊಂಡಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉಪನ್ಯಾಸಕರಾದ ಪಿ ಕೆ ಬಾಲಕೃಷ್ಣ,  ವೆಂಕಟರಮಣ ಭಟ್, ವೇದವ್ಯಾಸ, ಶಂಕರ ನಾರಾಯಣ ಭಟ್, ಮಾಧವ ಭಟ್, ಪರಮೇಶ್ವರ ಶರ್ಮ, ಶ್ರೀಮತಿ ಶೈಲಜಾ ಶೆಣೈ, ಪ್ರಭಾಕರ್, ಶ್ರೀಮತಿ ವತ್ಸಲ ನಾರಾಯಣ, ಚೆಟ್ಟಿಯಾರ್ ಮತ್ತು ಶ್ರೀಧರ ವರಿಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು.


ಹಳೆ ವಿದ್ಯಾರ್ಥಿಗಳ ಪರವಾಗಿ ಶ್ರೀಮತಿ ಸುಷ್ಮಾ ಭಟ್, ಶ್ರೀಮತಿ ಬಬಿತಾ, ಗಿರೀಶ, ವಿಜಯಾನಂದ್, ಕಾರ್ಯಪ್ಪ, ಶಿವನಾರಾಯಣ, ರಾಘವೇಂದ್ರ  ಮತ್ತು ಆನಂದ ಶೆಟ್ಟಿ ತಮ್ಮ ಅನುಭವ ಹಂಚಿಕೊಂಡರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಎ ವಿ ನಾರಾಯಣ ರವರು ಕಾಲೇಜು ಬೆಳೆದ ಬಗೆಯನ್ನು ವಿವರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಬಿಬಿಎಂ 1999 ಬ್ಯಾಚ್ ನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾವರ್ಧಕ ಸಂಘದ ಸತೀಶ್ ರಾವ್ ಮತ್ತು  ಉಪನ್ಯಾಸಕ ವೃಂದ ಸಾಂದರ್ಭಿಕ ನುಡಿಗಳನ್ನಾಡಿ ಎಲ್ಲರಿಗೂ ಶುಭ ಹಾರೈಸಿದರು.


ಅದ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರಾಂಶುಪಾಲ ವಿ.ಜಿ.ಭಟ್ ರವರು ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ ಎಲ್ಲರ ಸಹಕಾರ ಕೋರಿದರು.ಜೊತೆಗ ಇಂತಾ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಲಿ ಎಂದರು. ಶಿವನಾರಾಯಣ ವಂದನಾರ್ಪಣೆ ಗೈದರು. ಸದಾಶಿವ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.


ಭೋಜನ ಕೂಟದೊಂದಿಗೆ ಮುಕ್ತಾಯವಾದ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳ ಗುರುವಂದನಾ ವಿಡಿಯೋ ಸಂದೇಶ ಬಿತ್ತರಿಸಲಾಯಿತು. ಉತ್ತಮವಾಗಿ ಸಂಘಟಿಸಿದ್ದ ಕಾರ್ಯಕ್ರಮದ ಕೊನೆಯಲ್ಲಿ ಪ್ರಾಂಶುಪಾಲ ವಿ ಜಿ ಭಟ್ ಹಳೆಯ ವಿದ್ಯಾರ್ಥಿಗಳ ಜೊತೆಗೂಡಿ ಬಿಬಿಎಂ ತರಗತಿಯನ್ನು ಮರುಸೃಷ್ಟಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top