ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಕೆಲಿಂಜ ಗ್ರಾಮದಲ್ಲಿ ನೆಟ್ಲ ಸದಾಶಿವೇಶ್ವರ, ನರಹರಿ ಸದಾಶಿವೇಶ್ವರ ದೇವಸ್ಥಾನಗಳ ಆವರಣದಲ್ಲಿ ಸ್ವಚ್ಚತಾ ಜಾಗೃತಿ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಒಟ್ಟು 7 ಶ್ರದ್ಧಾ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಸುಮಾರು 230 ಸದಸ್ಯರು ಭಾಗವಹಿಸಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟಿಗಳು, ಜನ ಪ್ರತಿನಿಧಿಗಳು, ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳಾದ ಗಣೇಶ್, ಸುಕನ್ಯಾ, ವಿಜಯ, ಲೀಲಾವತಿ, ವಿದ್ಯಾರವರು ಉಪಸ್ಥಿತರಿದ್ದರು.
ಕುಕ್ಕಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಚಿ ಕುಕ್ಕಾಜೆ ಒಕ್ಕೂಟದ ವತಿಯಿಂದ ವಿಷ್ಣುಮೂರ್ತಿ ದೈವಸ್ಥಾನ ತಿರುವಾಲೆ ಆವರಣವನ್ನು ಯೋಜನೆಯ 50 ಸದಸ್ಯರು ಸ್ವಚ್ಚತೆ ಮಾಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಯಶವಂತ್ ಪೂಜಾರಿ, ಒಕ್ಕೂಟದ ಉಪಾಧ್ಯಕ್ಷ ರವೀಂದ್ರ ಪೂಜಾರಿ, ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ವಲಯ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ, ಸೇವಾ ಪ್ರತಿನಿಧಿ ಶ್ರೀಮತಿ ಚಂಚಾಲಕ್ಷಿ ಉಪಸ್ಥಿತರಿದ್ದರು.
ವನದುರ್ಗಾ ದೇವಸ್ಥಾನ ದೇಂತಡ್ಕದಲ್ಲಿ:
ಪೆರ್ನೆ ವಲಯದ ಕೆದಿಲ ಒಕ್ಕೂಟ ಮತ್ತು ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಶ್ರೀ ವನದುರ್ಗಾ ದೇವಸ್ಥಾನ ದೇಂತಡ್ಕದ ಜಾತ್ರೋತ್ಸವದ ಪ್ರಯುಕ್ತ ದೇವಸ್ಥಾನದ ಸುತ್ತ ಸ್ವಚ್ಛತೆಯನ್ನು ಯೋಜನೆಯ 75 ಸದಸ್ಯರು ಮಾಡಿದ್ದು ದೇವಸ್ಥಾನದ ಆಡಳಿತ ಸಮಿತಿಯ ಜೆ ಶಂಕರ್ ಭಟ್, ವಸಂತ್ ಕುಮಾರ್ ಅಮೈ, ಜೆ ಶ್ಯಾಮ್ ನಾರಾಯಣ್, ಜೆ ರಾಮಕೃಷ್ಣ ಭಟ್, ಕೃಷ್ಣಾನಂದ ಬರೆಂಗಾಯಿ, ರಘು ಅಜಿಲ ಮಿತ್ತಿಲ, ಸತೀಶ್ ಮುರುವ, ಮೋಹನ ಕಜೆ, ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾ ರವರು ಕೆದಿಲ "B" ಒಕ್ಕೂಟದ ಸೇವಾಪ್ರತಿನಿಧಿ ಜಯಂತಿರವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ