ಬಂದಿಗಳಿಗೆ ಉಚಿತ ಕಾನೂನು ಅರಿವು-ನೆರವು

Upayuktha
0

 


                                  

ಉಡುಪಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಉಡುಪಿ ರವರ ಸಂಯುಕ್ತ ಆಶ್ರಯದಲ್ಲಿ ಬಂದಿಗಳಿಗೆ ಉಚಿತ ಕಾನೂನು ಅರಿವು-ನೆರವು, ಬಂದಿಗಳ ಮನಃ ಪರಿವರ್ತನೆ ಮತ್ತು ಮನರಂಜನೆ(ಹಾಸ್ಯ) ಕಾರ್ಯಕ್ರಮವು ಶುಕ್ರವಾರ ಉಡುಪಿಯ ಜಿಲ್ಲಾ ಕಾರಾಗೃಹದಲ್ಲಿ ನಡೆಯಿತು. 


ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಮಾತನಾಡಿ, ಹುಟ್ಟುವ ಮಗುವಿನಿಂದ ಸಾಯುವ ವಯೋವೃದ್ಧರವರೆಗೂ ಸ್ವಚ್ಛಂಧ ಜೀವನ ನಡೆಸಲು ನಮ್ಮ ಸಂವಿಧಾನಲ್ಲಿ ಕಾನೂನು ರಚಿಸಲಾಗಿದೆ ಎಂದ  ಅವರು, ತಪ್ಪುಗಳು ಸಹಜ ಅವುಗಳನ್ನು ತಿದ್ದಿಕೊಂಡು ಬಂಧಿಗಳು ಮನವನ್ನು ಪರಿವರ್ತನೆಗೊಳಿಸಿಕೊಳ್ಳಬೇಕು ಎಂದರು. 


ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಸದಸ್ಯ ರಾಜೇಶ ಆರ್.ಉಡುಪಿ ಹಾಗೂ ಜಿಲ್ಲಾ ಕಾರಾಗೃಹದ ಅಧೀಕ್ಷಕ ವಿಜಯಕುಮಾರ ದೀ ಚವ್ಹಾಣ ಮಾತನಾಡಿದರು. 


ಹಾಸ್ಯ ಕಲಾವಿದ ಬೆಮಲ್ ಕಂಪಲಪ್ಪರವರು ಹಾಸ್ಯ ಚಟಾಕಿ ಬೀರುವ ಮೂಲಕ ಬಂದಿಗಳ ಮುಖದಲ್ಲಿ ಮಂದಹಾಸ ಮೂಡಿಸಿದರು.


ಜಿಲ್ಲಾ ಕಾರಾಗೃಹದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top