ಪುತ್ತೂರು: ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ಇದರ ಪುತ್ತೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜನವರಿ 12 ರಂದು ಐಡಿಎ ಭವನ ಪುತ್ತೂರು ಇಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬಾಯಿ ಮತ್ತು ಮುಖ ರೋಗ ತಜ್ಞ, ಜಿಲ್ಲಾ ಗೃಹರಕ್ಷಕ ದಳದ ಗೌರವ ಸಮಾದೇಷ್ಠರಾಗಿ ಕಾರ್ಯ ನಿರ್ವಹಿಸಿದ ಡಾ. ಮುರಳೀ ಮೋಹನ್ ಚೂಂತಾರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಪುತ್ತೂರು ದಂತ ವೈದ್ಯರ ಶಾಖೆ ಮಾಡುತ್ತಿರುವ ಕಾರ್ಯ ಹಾಗೂ ಸಾಧನೆಗಳ ಪ್ರತಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಉಪಸ್ಥಿತರಿದ್ದ ಎಲ್ಲಾ ದಂತ ವೈದ್ಯರಿಗೂ ಸ್ಮರಣಿಕೆಯನ್ನು ಹಂಚಿದರು.
ಐಡಿಎ ಪುತ್ತೂರು ಶಾಖೆಯ ನೂತನ ಅಧ್ಯಕ್ಷೆ ಡಾ.ಆಶಾ ರಾಘವೇಂದ್ರ ಅವರಿಗೆ ಡಾ. ರಾಜಾರಾಮ ಕೆ.ಬಿ ಅವರು ಪ್ರಮಾಣ ವಚನ ಬೋಧಿಸಿದರು.
ಸಂಘದ ಕೇಂದ್ರ ಕೌನ್ಸಿಲ್ ಸದಸ್ಯ ಡಾ. ರಾಘವೇಂದ್ರ ಪಿದಮಲೆ, ಸಂಘದ ಕೋಶಾಧಿಕಾರಿ ಡಾ ಚರಣ್ ಕಜೆ ಪದಾಧಿಕಾರಿಗಳಾದ ಡಾ. ಎಲ್ ಕೃಷ್ಣ ಪ್ರಸಾದ್, ಡಾ. ಕೃಷ್ಣ ಭಟ್, ಡಾ. ಪ್ರಕಾಶ್ ಭಟ್, ಡಾ. ವಿಶು ಕುಮಾರ್, ಡಾ. ಮುರಳೀಧರ್ ರೈ, ಡಾ. ಶಿವಾನಂದ ಹೆಚ್, ಡಾ. ಮುರಳೀಧರ್ ಭಟ್, ಡಾ. ರಿತೇಶ್ ಕೆ.ಬಿ, ಡಾ. ಶ್ರುತಿ ಹೆಗ್ಡೆ, ಡಾ. ವಾಣಿ ರಿತೇಶ್, ಡಾ. ಆಶಾ ಜಿ.ಕೆ, ಡಾ. ಗಣೇಶ್ ಚಿಂತನ್, ಡಾ. ಹರ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಕಟಪೂರ್ವಾಧ್ಯಕ್ಷೆ ಡಾ. ಆಶಾ ಅಮ್ಮಂಕಲ್ಲು ಸ್ವಾಗತಿಸಿ, ಕಾರ್ಯದರ್ಶಿ ಡಾ. ಕೀರ್ತನ್ ಕಜೆ ವಂದಿಸಿದರು.
ಡಾ. ದೀಪಾಲಿ ಡೋಂಗ್ರೆ, ಡಾ.ರಮ್ಯಾ ಕಜೆ ಹಾಗೂ ಡಾ. ಅಮೃತ ಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಐಡಿಎ ಸದಸ್ಯರು ಮತ್ತು ಸದಸ್ಯರ ಕುಟುಂಬ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ