ಫಲಪುಷ್ಪ ಪ್ರದರ್ಶನ: ಮಳಿಗೆ ತೆರೆಯಲು ಅವಕಾಶ

Upayuktha
0


ಉಡುಪಿ: ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26 ರಿಂದ 28 ರ ವರೆಗೆ ರೈತ ಸೇವಾ ಕೇಂದ್ರ, ಶಿವಳ್ಳಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 


ಸದರಿ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ಯಮದಾರರು, ಯಂತ್ರೋಪಕರಣ ಮಾರಾಟಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸದರಿ ಮಳಿಗೆಗೆ ರೂ. 3500/- ರಂತೆ ದರವನ್ನು ನಿಗದಿಪಡಿಸ ಲಾಗಿದ್ದು, ಸದರಿ ಮಳಿಗೆಗಳಲ್ಲಿ ತೋಟಗಾರಿಕೆ ಚಟುವಟಿಕೆ ಹೊಂದಿರುವವರಿಗೆ ಹಾಗೂ ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುವುದು.


ಮಳಿಗೆ ತೆರೆಯಲು ಆಸಕ್ತರು ಮಳಿಗೆಗಳ ಮೊತ್ತವನ್ನು ಆನ್‍ಲೈನ್ ಮೂಲಕವೇ ರೈತ ಸೇವಾ ಕೇಂದ್ರ ಖಾತೆಗೆ ಪಾವತಿಸಿ ತಮ್ಮ ಹೆಸರನ್ನು ಜನವರಿ 20 ರ ಒಳಗಾಗಿ ನೊಂದಾಯಿಸಿಕೊಳ್ಳಬಹುದಾಗಿದೆ. ಮಳಿಗೆ ಹೆಸರು ನೋಂದಾಯಿಸಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ರಾಜ್ಯವಲಯ, ಉಡುಪಿ ದೂರವಾಣಿ ಸಂಖ್ಯೆ: 7892326323 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ. 


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top