ಕ್ಯಾ. ಬ್ರಿಜೇಶ್ ಚೌಟರ ಎಂಪಿ ಲಾಡ್ಸ್ ಅನುದಾನಡಿ ಮೊದಲ ಕಾಮಗಾರಿಗೆ ಚಾಲನೆ

Upayuktha
0

 


ಮಂಗಳೂರು:  ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೋಮವಾರ ಚಾಲನೆ ನೀಡಿದ್ದಾರೆ. 


ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಕಸಬಾ ಪರ್ಲಡ್ಕ ಸರ್ಕಾರಿ ಕಾಂಪೌಂಡ್‌ ಒಳಗಿರುವ ತೋಡಿಗೆ ಚರಂಡಿ ವ್ಯವಸ್ಥೆ ಹಾಗೂ ಸ್ಲ್ಯಾಬ್ ನಿರ್ಮಾಣ ಕಾರ್ಯ ನಡೆಯಲಿದ್ದು, ಸಂಸದ ಕ್ಯಾ. ಚೌಟ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.


ಇದರ ಜತೆಗೆ ಪುತ್ತೂರು ಕಸಬಾ ದರ್ಬೆಯ ಆಫಿಸರ್ಸ್ ಕ್ಲಬ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು ಸಂಸದರ ನಿಧಿಯಡಿ 5 ಲಕ್ಷ ರೂ.  ವೆಚ್ಚದಲ್ಲಿ ಕಾಂಕ್ರೀಟಿಕರಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಯಿತು.


ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದರಾದ ಬಳಿಕ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಬಿಡುಗಡೆ ಮಾಡಲಾದ ವಿವಿಧ ಅನುದಾನದ ಅಭಿವೃದ್ಧಿ ಕಾಮಗಾರಿ ಇದಾಗಿದೆ.ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, "ನಮ್ಮ ಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ದಣಿವರಿಯದೇ ಕೆಲಸ ಮಾಡುತ್ತೇನೆ. ನಮ್ಮ ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.


ಈ ವೇಳೆ ಡಾ. ಸುರೇಶ್ ಪುತ್ತೂರಾಯ, ಬಿಜೆಪಿ ಪುತ್ತೂರು ನಗರ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್,  ಬಿಜೆಪಿ  ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪುತ್ತೂರು ನಗರಸಭೆ ಅಧ್ಯಕ್ಷ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಚಂದ್ರಶೇಖರ ರಾವ್ ಬಪ್ಪಳಿಗೆ, ಚನಿಲ ತಿಮ್ಮಪ್ಪ ಶೆಟ್ಟಿ, ರಾಧಾಕೃಷ್ಣ ಆಳ್ವ, ಜಗನ್ನಿವಾಸ ರಾವ್, ಡಾ. ಮಂಜುನಾಥ್ ಶೆಟ್ಟಿ, ಪ್ರಸನ್ನ ಮಾರ್ತ, ವಿಕಾಸ್ ಪುತ್ತೂರು, ಶಶಿಧರ್ ನಾಯ್ಕ್, ಸಂತೋಷ್ ರೈ ಕೈಕಾರ, ಶಶಿಧರ್ ನಾಯಕ್,ನಾಗೇಶ್ ಪ್ರಭು, ಹರಿಪ್ರಸಾದ್ ಯಾದವ್, ಹರಿಪ್ರಸಾದ್ ಪೆರಿಯತ್ತೋಡಿ, ವಿದ್ಯಾಧರ್ ಜೈನ್, ನಿತೀಶ್ ಶಾಂತಿವನ, ಪುನೀತ್ ಮಾಡತ್ತಾರ್, ನಿತೇಶ್ ಕಲ್ಲೇಗ ಮುಂತಾದವರು ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top