ಮುಜುಂಗಾವು ವಿದ್ಯಾಪೀಠದಲ್ಲಿ ಯೋಗಶಿಬಿರ

Upayuktha
0


ಮುಜುಂಗಾವು: ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮೂರು ದಿನಗಳ ಪ್ರಾಥಮಿಕ ಹಂತದ ಯೋಗ ಮತ್ತು ಧ್ಯಾನ ಶಿಬಿರಕ್ಕೆ ಇಂದು ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ ಬೆಳ್ಳೂರು ಇವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.


ವಿದ್ಯಾಲಯದ ಆಡಳಿತ ಸೇವಾಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಕಿದೂರು ದೀಪ ಬೆಳಗಿ ಉದ್ಘಾಟನೆ ನೆರವೇರಿಸಿದರು. ಅವರು ಮಾತನಾಡುತ್ತಾ, ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯಂತ ಪರಿಣಾಮಕಾರಿ, ಇದನ್ನು ನಿತ್ಯವೂ ಮುಂದುವರಿಸಿದರೆ ವೈದ್ಯರಿಂದ ದೂರವಿರಬಹುದು ಎಂದರಲ್ಲದೆ, ಶಿಬಿರಾರ್ಥಿಗಳಿಗೆ ಈ ಶಿಬಿರವು ಅತ್ಯಂತ ಪ್ರಯೋಜನವಾಗಲಿ ಎಂದು ಶುಭಹಾರೈಸಿದರು.


ಯೋಗಾಚಾರ್ಯರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಯೋಗ ಮತ್ತು ಧ್ಯಾನದ ಮಹತ್ವವನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ದರ್ಭೆಮಾರ್ಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿದ ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಯೋಜನವನ್ನು ಪಡೆಯಲಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top