ನೃತ್ಯವು ಇಂದ್ರಿಯಗಳು ಮೆಚ್ಚುವ ಕಲೆ: ಗೋಪಿನಾಥ್ ಶೇಟ್

Upayuktha
0


ಮಂಗಳೂರು: ಭಾರತೀಯ ಲಲಿತ ಕಲೆಗಳಲ್ಲಿ ನೃತ್ಯವು ಇಂದ್ರಿಯಗಳು ಮೆಚ್ಚುವ ಕಲೆ ಎಂದು ಕಲಾಪೋಷಕ ಯುವ ಉದ್ಯಮಿ ಗೋಪಿನಾಥ ಶೇಟ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇವರು ನಾಟ್ಯ ನಿಕೇತನ ಅಂಗಣದಲ್ಲಿ ನಾಟ್ಯ ಮೋಹನ ನವತ್ಯುತ್ಸವ ನೃತ್ಯ ಸರಣಿ 13 ಹಾಗೂ ನಾಟ್ಯಾಂಜಲಿ ನಲವತ್ತರ ನಲಿವು 3 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಓರ್ವ ಸಮರ್ಥ ಗುರುಗಳ ಮಾರ್ಗದರ್ಶನ ಸಿಕ್ಕಿದಾಗ ಕಲಾವಿದ ಪರಿಪೂರ್ಣನಾಗಲು ಸಾಧ್ಯ. ಅಂತಹ ಸೃಜನಶೀಲ ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಕೀರ್ತಿ ಗುರುಗಳಾದ ಉಳ್ಳಾಲ ಮೋಹನ್ ಕುಮಾರ್ ಹಾಗೂ ಅವರ ಸುಪುತ್ರಿ ರಾಜಶ್ರೀ ಅವರಿಗೆ ಸಲ್ಲಲೇ ಬೇಕು ಎಂದರು.


ಇನ್ನೋರ್ವ ಮುಖ್ಯ ಅತಿಥಿ ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಧರ್ಮದರ್ಶಿ ಮಧುಸೂಧನ ಅಯ್ಯರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಕಲೆಯ ಶ್ರೀಮಂತಿಕೆಯನ್ನು ಬೆಳಗಿಸಿದ ಹಾಗೂ ಕಲಾ ಕ್ಷೇತ್ರದಲ್ಲಿ 68 ವರ್ಷಗಳನ್ನು ಪೂರೈಸಿದ ಹೆಮ್ಮೆಯ ಸಂಸ್ಥೆ ಇದಾಗಿದೆ ಎಂದರು.


ನಾಟ್ಯಾಚಾರ್ಯ ಮೋಹನ ಕುಮಾರ್ ನಟರಾಜ ದೇವರ ದೀಪ ಪ್ರಜ್ವಲನ ಮಾಡಿ ಶುಭ ಹಾರೈಸಿದರು. ವಿದುಷಿ ರಾಜಶ್ರೀ ಉಳ್ಳಾಲ್ ಧನ್ಯವಾದ ನೀಡಿದ ಕಾರ್ಯಕ್ರಮವನ್ನು ಶ್ರೀಧರ ಹೊಳ್ಳ ಸ್ವಾಗತಿಸಿ ನಿರೂಪಿಸಿದರು. ಅಬುಧಾಬಿಯ ಸುರೇಶ್ ಕಾಸರಗೋಡು ನೃತ್ಯ ಕಾರ್ಯಕ್ರಮ ನೀಡಿದರು. ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ಪವಿತ್ರ ವಿನಯ್, ಮೃದಂಗದಲ್ಲಿ ಮನೋಹರ ರಾವ್, ವಯೋಲಿನ್ ವಾದನದಲ್ಲಿ ಶ್ರೀಧರ ಆಚಾರ್ಯ, ನಟವಾಂಗ ವಿದ್ವಾನ್ ಚಂದ್ರಶೇಖರ ನಾವಡ ಸಹಕರಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top