ಶ್ರೀಮತಿ ಶ್ರುತಿ ಎಸ್ ಭಟ್ ಇವರಿಗೆ 'ರಾಗ ಧನ ಪಲ್ಲವಿ ಪ್ರಶಸ್ತಿ'-2025

Upayuktha
0



ಉಡುಪಿ: ಹೆಸರಾಂತ ಸಂಗೀತ ಸಭಾ 'ರಾಗ ಧನ' ವತಿಯಿಂದ ಈ ವರ್ಷ ನೀಡಲಾಗುವ 'ರಾಗ ಧನ ಪಲ್ಲವಿ ಪ್ರಶಸ್ತಿ'-2025 ಪ್ರಶಸ್ತಿಯನ್ನು ಗಾಯಕಿ ವಿದುಷಿ ಶ್ರುತಿ ಭಟ್ ಅವರಿಗೆ ಫೆಬ್ರವರಿ 7 ರಂದು ಸಂಜೆ 5 ಗಂಟೆಗೆ ಎಂ. ಜಿ. ಎಂ. ನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿರುವ 37 ನೇ ಪುರಂದರ ದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ಖ್ಯಾತ ಹಿರಿಯ ಕೊಳಲು ವಿದ್ವಾಂಸ ಯು. ರಾಘವೇಂದ್ರ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ ಶ್ರುತಿ ಎಸ್ ಭಟ್ ಅವರ ಸಂಗೀತ ಕಛೇರಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಭಾಷಾ ವಿಜ್ಞಾನಾದಿ ನಾನಾ ಕ್ಷೇತ್ರಗಳ ವಿದ್ವಾಂಸರೂ, ಸಂಗೀತ ಪ್ರಿಯರೂ ಆದ ಡಾ. ಸುಶೀಲಾ ಉಪಾಧ್ಯಾಯ ಇವರ ಸಂಸ್ಮರಣೆಯಲ್ಲಿ ಇವರ ಪತಿ ಡಾಕ್ಟರ್ ಯು. ಪಿ. ಉಪಾಧ್ಯಾಯ ಇವರು ಸ್ಥಾಪಿಸಿದ "ರಾಗ ಧನ ಪಲ್ಲವಿ "ಪ್ರಶಸ್ತಿಯನ್ನು ಸ್ಥಳೀಯ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಸಾಧಕರಿಗೆ ರಾಗ ಧನ ಸಂಸ್ಥೆಯು ಪ್ರತಿ ವರ್ಷ ನೀಡಲಾಗುತ್ತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top