"ಕಣ್ಮನ ಸೆಳೆಯುವ ಕೈ ಮಗ್ಗದ ಇಳಕಲ್ ಸೀರೆಗಳು" ನಾರಿಯರ ಮನಗೆದ್ದಿರುವ ಕೈ ಮಗ್ಗದ ಇಳಕಲ್ ಸೀರೆಯು ಕರ್ನಾಟಕದ ಪ್ರಸಿದ್ಧ ಸೀರೆಗಳಲ್ಲಿ ಒಂದಾಗಿದೆ ಇಳಕಲ್ ಸೀರೆಯು ಸಾಂಪ್ರದಾಯಿಕ ರೂಪವಾಗಿದೆ. ದೇಹದ ಮೇಲೆ ಕಾಟನ್ ವಾರ್ಪ್ ಬಾರ್ಡರಗಾಗಿ ಆರ್ಟ್ ಸಿಲ್ಕ್ ವಾರ್ಪ್ ಮತ್ತು ಸೀರೆಯ ಪಲ್ಲು ಭಾಗಕ್ಕೆ ಆರ್ಟ್ ಸಿಲ್ಕ್ ಬದಲಿಗೆ ಶುದ್ಧ ರೇಷ್ಮೆ ಬಳಸಲಾಗುತ್ತದೆ.
ಇಳಕಲ್ ಸೀರೆಯ ವಿಶಿಷ್ಟ ಲಕ್ಷಣವೆಂದರೆ, ಕಸೂತಿ ಸೀರೆಗಳ ಮೇಲೆ ಕಸೂತಿ ಮಾಡಲಾದ ಪಲ್ಲಕ್ಕಿಗಳು, ಆನೆಗಳು ಮತ್ತು ಕಮಲಗಳಂತಹ ಸಾಂಪ್ರದಾಯಿಕ ಮಾದರಿಗಳು. ಈ ಸೀರೆಗಳು ಸಾಮಾನ್ಯವಾಗಿ 9 ಗಜಗಳಷ್ಟು ಉದ್ದವಿರುತ್ತದೆ. ಕೈಮಗ್ಗದ ಸಹಾಯದಿಂದ ಒಂದು ಸೀರೆಯನ್ನು ನೇಯಲು ಸುಮಾರು 7 ದಿನಗಳು ಬೇಕಾಗುತ್ತದೆ. ಹಬ್ಬಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತದೆ.
ವಿದ್ಯುತ್ತನ್ನು ಬಳಸದೆ ಒಬ್ಬನೇ ನೇಕಾರ ಮಗ್ಗದ ಮುಂದೆ ಕುಳಿತು ಕೈಕಾಲುಗಳ ಬಲವನ್ನಷ್ಟೇ ಪ್ರಯೋಗಿಸಿ ನೇಯಬಹುದು. ಸೀರೆ ಅಂಚು ವಿಶಾಲವಾಗಿದೆ. ಹಲವು ವಿನ್ಯಾಸಗಳಲ್ಲಿ ಆಕರ್ಷಕವಾಗಿರುವ ಈ ಸೀರೆಯು ಕರ್ನಾಟಕದ ಬಾಗಲಕೋಟೆ ಬಳಿ ಇರುವ ಇಳಕಲ್ಲ ಊರಿನಲ್ಲಿ ತಯಾರಾಗುತ್ತವೆ. ನೇಕಾರಿಕೆ ವೃತ್ತಿಯ ವಿಶೇಷತೆ ಎಂದರೆ ಎಲ್ಲ ವಯೋಮಾನದವರಿಗೆ ಇದು ಕೆಲಸ ಕೊಡುತ್ತದೆ. ಇದು ಕೌಂಟುಬಿಕ ವೃತ್ತಿಯಾಗಿದೆ.
ಇಳಕಲ್ ಸೀರೆಯ ವಿಶೇಷತೆಯಿರುವುದೇ ಅದರ ಬಣ್ಣ ಹಾಗೂ ವಿನ್ಯಾಸದಲ್ಲಿ ಹಬ್ಬ-ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು. ಸೆರಗಿನ ತುದಿಯಲ್ಲಿ ಹೆಣಿಗೆ, ಕೋಟಿಕಂಬ್ಳಿ (ಕೋಟೆ ರಕ್ಷಕ), ಟೋಪಿ ತೆನೆ, ಜೋಳದ ತೆನೆ, ರಂಪ, (ಗಿರಿಶ್ರೇಣಿ) ಇತ್ಯಾದಿಗಳ ಹೆಣಿಗೆ ವಿನ್ಯಾಸಗಳಿತ್ತವೆ. ಸೀರೆಯ ಅಂಚು ವಿಶಾಲವಾಗಿ 4 ರಿಂದ 6 ಇಂಚಿನಷ್ಟು ಅಗಲವಿರುತ್ತದೆ. ಸಾಂಪ್ರದಾಯಿಕ ಸೀರೆಗಳ ಬಣ್ಣ ಸಾಮಾನ್ಯವಾಗಿ ಕೆಂಪು ಇಲ್ಲವೇ ಮರೂನ್ ಬಣ್ಣದ್ದಾಗಿರುತ್ತದೆ. ಗ್ರಾಹಕರು ದಾಳಿಂಬೆ ಕೆಂಪು, ಉಜ್ವಲ ನವಿಲು ಹಸಿರು ಬಣ್ಣ ಇಲ್ಲವೇ ಗಿಳಿ ಹಸುರಿನ ಸೀರೆಗಳನ್ನು ಸೂಚಿಸಿ ಪಡೆಯಬಹುದು. ಹತ್ತಿಯ ಸೀರೆಗಳೂ ಲಭ್ಯ. ಹತ್ತಿ-ರೇಷ್ಮೆ ಮಿಶ್ರದ ಸೀರೆಗಳೂ ದೊರೆಯುತ್ತವೆ. ಶುದ್ಧ ರೇಷ್ಮೆಯ ಸೀರೆಗಳನ್ನು ಗ್ರಾಹಕರು ಕೇಳಿ ಪಡೆಯಬಹುದು.
- ಮಂಜುಳಾ ಪ್ರಕಾಶ್,
ಎಂಸಿಜೆ, ಆಳ್ವಾಸ್ ಕಾಲೇಜು, ಮೂಡುಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ