ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ 3ನೇ ವರ್ಷದ ವಾರ್ಷಿಕೋತ್ಸವ, ಕವನ ರಚನಾ ಕಮ್ಮಟ
ದಾವಣಗೆರೆ: ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಗೆ ಸೀಮಿತವಾಗದೇ ವಿದ್ಯಾಭ್ಯಾಸದ ಜತೆಯಲ್ಲಿ ನಮ್ಮ ನಾಡು-ನುಡಿಯ ಬಗ್ಗೆ ಕಾಳಜಿ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಂಡರೆ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ.
ಈ ಕೇರಳ ಗಡಿನಾಡಲ್ಲಿ ಹಳೆಗನ್ನಡ, ಕವನ ರಚನೆಯ ಕಮ್ಮಟ ಹಮ್ಮಿಕೊಂಡ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಮಕ್ಕಳಲ್ಲಿ ಸಾಹಿತ್ಯದ ಪರಿಜ್ಞಾನ ಕನ್ನಡ ಭಾಷೆ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಕೇರಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಯಪ್ರಕಾಶ್ ನಾರಾಯಣ ತಮ್ಮ ಮನದಾಳದ ಮಾತು ಹಂಚಿಕೊಂಡರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ಮೀಯಪದವು ವಿ.ಎ.ಯು.ಪಿ.ಎಸ್. ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಕವನ ರಚನಾ ಕಮ್ಮಟ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ವಿ.ಎ.ಯು.ಪಿ.ಎಸ್. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಶ್ರೀಧರ್ ರಾವ್ ಮಾತನಾಡಿ, ಕೇರಳ ಗಡಿನಾಡಿನಲ್ಲಿ ಕಲಾಕುಂಚ ಸಂಸ್ಥೆಯು ಕನ್ನಡ ಭಾಷೆಯನ್ನು ವೈಭವೀಕರಿಸುತ್ತಿರುವುದು ಹೆಮ್ಮೆ ಹಾಗೂ ಮೆಚ್ಚುಗೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ್ ಮಾತನಾಡಿ, ಎಲ್ಲರ ಸಹಕಾರ, ಸಹಯೋಗದೊಂದಿಗೆ ಕಲಾಕುಂಚ ಸಂಸ್ಥೆಯು ಮುಂದುವರೆಯುತ್ತಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ನಿವೃತ್ತ ಪ್ರಾಚಾರ್ಯ ಪಿ.ಎನ್.ಮೂಡಿತ್ತಾಯ, ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷ ವಿ.ಬಿ.ಕುಳಮರ್ವ, ಕವಿಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಲಕ್ಷ್ಮಿ ವಿ.ಭಟ್ ಮುಂತಾದವರು ಮಾತನಾಡಿದರು.
ಮಕ್ಕಳ ಈ ಸಾಹಿತ್ಯದ ಉತ್ಸಾಹ ಸ್ಥಳದಲ್ಲೇ `ಕವಿ-ಕಿವಿ’ ಕವನ ರಚನೆ ಮಾಡಿದ್ದು ನಿಜಕ್ಕೂ ಎಲ್ಲರಿಗೂ ಖುಷಿ ತಂದಿದೆ ಎಂದರು. “ಕವಿಯಾಗುವ ಸುಯೋಗ” ಶಿಬಿರಾರ್ಥಿಗಳಿಂದ ಕವಿಗೋಷ್ಠಿ ಹಾಗೂ ವಿಮರ್ಶೆ, ಹಿರಿಯರಿಂದ ಕವಿಗೋಷ್ಠಿ ವಿಮರ್ಶೆ, ಸಾಹಿತ್ಯ ಕವನ ಕಮ್ಮಟ ಅತ್ಯದ್ಭುತವಾಗಿ ಯಶಸ್ವಿಯಾಗಿ ಸುಸಂಪನ್ನಗೊಂಡಿತು ಎಂದು ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.
ಕುಮಾರಿಯರಾದ ಸಾನಿಧ್ಯ ಮತ್ತು ಸಿಂಚನರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಾಹಿತ್ಯ ವಿಜೃಂಭಣೆಯ ಸಮಾರಂಭಕ್ಕೆ ಜಯಲಕ್ಷ್ಮಿ ಕಾರಂತ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ ಹಿರಿಯ ಸಾಹಿತಿ, ಕವಿಯತ್ರಿ ಜಯಲಕ್ಷ್ಮಿ ರಾಮಚಂದ್ರ ಹೊಳ್ಳ ಕೊನೆಯಲ್ಲಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ