ಗೋವಿಂದ ದಾಸ ಕಾಲೇಜ್, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Upayuktha
0




ಸುರತ್ಕಲ್‌: ವಿದ್ಯಾರ್ಥಿಗಳು ಜೀವನದಲ್ಲಿ ನಿಖರವಾದ ಗುರಿಯನ್ನು ಹೊಂದಿರಬೇಕು. ಆತ್ಮವಿಶ್ವಾಸದಿಂದ ಮುನ್ನುಗಿದರೆ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿ ವೇತನಗಳು ಶೈಕ್ಷಣಿಕ ಬದುಕಿನ ದಾರಿ ದೀಪವಾಗಬೇಕು ಎಂದು ಡಾ. ದಯಾನಂದ ಪೈ - ಸತೀಶ್ ಪೈ ಸರಕಾರಿ ಪ್ರಥಮದರ್ಜೆ ಕಾಲೇಜು,  ಕಾರ್‌ಸ್ಟ್ರೀಟ್, ಮಂಗಳೂರಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಅಭಿಪ್ರಾಯ ಪಟ್ಟರು. 


ಅವರು  ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದೊಂದಿಗೆ  ರಾಧಾ ದಯಾನಂದ ರಾವ್ ಟ್ರಸ್ಟ್ನವರು ದಿ.ಪೇಜಾವರ ದಯಾನಂದ ರಾವ್ ಅವರ ಸವಿನೆನಪಿಗಾಗಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಪೇಜಾವರ ರಾಧಾ ದಯಾನಂದ ರಾವ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ರಾಧಾ ರಾವ್ ವಿದ್ಯಾರ್ಥಿ ವೇತನಗಳನ್ನು ವಿತರಿಸಿದರು. 


ರಾಧಾ ದಯಾನಂದ ರಾವ್ ಟ್ರಸ್ಟ್ನ ಟ್ರಸ್ಟಿ ಪ್ರವೀಣ್ ರಾವ್ ಮಾತನಾಡಿ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಟ್ರಸ್ಟ್ ನಿರಂತರವಾಗಿ ವಿದ್ಯಾರ್ಥಿ ವೇತನ ನೀಡುತ್ತಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ಮಾತನಾಡಿ ಆರ್ಥಿಕ ಕೊರತೆಯಿಂದ  ವಿದ್ಯಾರ್ಥಿಗಳು ವ್ಯಾಸಂಗವನ್ನು ತೊರೆಯಬಾರದು ಎಂಬ ಸದುದ್ದೇಶದಿಂದ ರಾಧಾ ದಯಾನಂದ ರಾವ್ ಟ್ರಸ್ಟ್ನವರು ನೀಡುತ್ತಿರುವ ವಿದ್ಯಾರ್ಥಿ ವೇತನವು ಶ್ಲಾಘನೀಯವಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ ವಿದ್ಯಾರ್ಥಿವೇತನಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ  ಸಾಧನೆಗಳು ಮಾನದಂಡವಾಗಿದ್ದು ಅರ್ಹ ವಿದ್ಯಾರ್ಥಿಗಳಿಗೆ ಹಲವು ದಾನಿಗಳಿಂದ ವಿದ್ಯಾರ್ಥಿವೇತನಗಳು ದೊರೆಯುವಂತೆ ಕಾಲೇಜು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.


ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಮುರಳೀಧರ ರಾವ್, ರಾಧಾ ದಯಾನಂದ ರಾವ್ ಟ್ರಸ್ಟ್ನ ಮಲ್ಲಿಕಾ ಪ್ರವೀಣ್ ರಾವ್, ರಾಧಿಕಾ ರಾವ್, ವಿಜಯ ಕಾಲೇಜು ಮುಲ್ಕಿಯ ಪ್ರಾಂಶುಪಾಲ ಪ್ರೊ. ವೆಂಕಟೇಶ ಭಟ್ ಮುಖು  ಅತಿಥಿಗಳಾಗಿದ್ದರು.


ಗೋವಿಂದ ದಾಸ ಕಾಲೇಜಿನ ಮಾಜಿ ಆಡಳಿತಾತ್ಮಕ ನಿರ್ದೇಶಕ ಮಧುಸೂಧನ ರಾವ್, ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ., ಮಂಗಳೂರು ಡಾ. ದಯಾನಂದ ಪೈ - ಸತೀಶ್ ಪೈ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಮಾಲಿನಿ, ಗೋವಿಂದ ದಾಸ ಕಾಲೇಜಿನ ಗ್ರಂಥ ಪಾಲಕಿ ಡಾ. ಸುಜಾತ ಬಿ., ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಗಣೇಶ ಆಚಾರ್ಯ ಬಿ., ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥೆ ಗೀತಾ ಕೆ. ವ್ಯವಹಾರ ಅಧ್ಯಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀದೇವಿ ಉಪಸ್ಥಿತರಿದ್ದರು.


ಉಪ ಪ್ರಾಂಶುಪಾಲ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ನೀಲಪ್ಪ ವಿ. ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. 


ರಾಧಾ ದಯಾನಂದ ರಾವ್ ಟ್ರಸ್ಟ್ನ ವತಿಯಿಂದ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ನಲ್ವತ್ತ ನಾಲ್ಕು, ಡಾ. ದಯಾನಂದ ಪೈ - ಸತೀಶ್ ಪೈ ಸರಕಾರಿ ಪ್ರಥಮದರ್ಜೆ ಕಾಲೇಜು, ಕಾರ್‌ಸ್ಟ್ರೀಟ್, ಮಂಗಳೂರಿನ ಹದಿನಾರು ವಿಜಯ ಕಾಲೇಜು, ಮುಲ್ಕಿಯ ಐದು ವಿದ್ಯಾರ್ಥಿಗಳಿಗೆ ಮತ್ತು ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರಿನ ಒರ್ವ  ವಿದ್ಯಾರ್ಥಿಗೆ ಒಟ್ಟು ನಾಲ್ಕು ಲಕ್ಷ ಐದು ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಯಿತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top