"ಸ್ಟ್ರಾಂಗ್ ಫಾದರ್ ಸ್ಟ್ರಾಂಗ್ ಡಾಟರ್ಸ್" ಎಂಬ ಕೃತಿ ಮತ್ತು ಅಪ್ಪಂದಿರು ಕಲಿಯಬಹುದಾದ ಪಾಠಗಳು

Upayuktha
0




ತ್ತೀಚಿಗೆ ಓದಿದ ಪುಸ್ತಕ ಮೆಗ್ ಮೀಕರ್ ರವರ ಸ್ಟ್ರಾಂಗ್ ಫಾದರ್ಸ್ ಸ್ಟ್ರಾಂಗ್ ಡಾಟರ್ಸ್ ಎಂಬ ಪುಸ್ತಕ ಹೆಣ್ಣು ಮಕ್ಕಳನ್ನು ಬದುಕಿನ ಸವಾಲುಗಳನ್ನು ಎದುರಿಸಿ ಹೇಗೆ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ತಂದೆಯ ಪಾತ್ರ ಎಷ್ಟು ಮಹತ್ವದ್ದು ಎಂಬುದಕ್ಕೆ  ಎಂಬುದಕ್ಕೆ ಒತ್ತು ನೀಡುವ ಕೃತಿಯಾಗಿದೆ.


ಚಿಕ್ಕ ಮಕ್ಕಳ ತಜ್ಞೆಯಾಗಿರುವ ಆಕೆ ತನ್ನ ಕಾರ್ಯಕ್ಷೇತ್ರದ ಅನುಭವಗಳಿಂದ ಯಾವ ರೀತಿ ತಂದೆ ತಮ್ಮ ಮಕ್ಕಳ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ  ಸ್ವಾಭಿಮಾನ, ನಡತೆ ಮತ್ತು ಭವಿಷ್ಯದ ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು ಎಂಬ ಪ್ರಭಾವಗಳ ಕುರಿತು ಬರೆದಿದ್ದಾರೆ.


ನಿಜ ಜೀವನದ ಘಟನೆಗಳನ್ನು ಉಲ್ಲೇಖಿಸುತ್ತಾ ಪ್ರಾಯೋಗಿಕ ಸಲಹೆಗಳನ್ನು ಈ ಪುಸ್ತಕದಲ್ಲಿ ನೀಡಿದ್ದು ಅಪ್ಪಂದಿರು ತಮ್ಮ ಹೆಣ್ಣು ಮಕ್ಕಳ ಬದುಕಿನಲ್ಲಿ ಆತ್ಮವಿಶ್ವಾಸ, ಧೈರ್ಯ ಸ್ಥೈರ್ಯಗಳನ್ನು ತುಂಬಲು  ಉದ್ದೇಶಪೂರ್ವಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ವಿವರಿಸಿದ್ದಾರೆ.


ಈ ಕೃತಿಯ ಕೆಲ ಮಹತ್ವದ ಸಂಗತಿಗಳು ಹೀಗಿವೆ

*ಅಪ್ಪಂದಿರು ಹೆಣ್ಣು ಮಕ್ಕಳ ಮೊದಲ ರೋಲ್ ಮಾಡೆಲ್... ಗೌರವ, ದಯೆ, ಭಾವೈಕ್ಯತೆ, ಪ್ರೀತಿ ವಿಶ್ವಾಸಗಳಿಂದ ವರ್ತಿಸುವ ತಂದೆ ತನ್ನ ಹೆಣ್ಣು ಮಗು ಇತರ ಗಂಡಸರ ಕುರಿತು ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಪ್ರಭಾವ ಬೀರುತ್ತಾನೆ. 


ಮನೆಯಲ್ಲಿ ತಂದೆಯ ನಡತೆ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ತಂದೆ ಹೆಣ್ಣು ಮಕ್ಕಳಿಗೆ ಫ್ರೆಂಡ್, ಫಿಲಾಸಫರ್, ಗೈಡ್ ಆಗಿರಬೇಕು. ಒಳ್ಳೆಯ ತಂದೆಯ ಪ್ರಭಾವದಿಂದ ಮುಂದೆ ತನ್ನ ಬದುಕಿನಲ್ಲಿ ಬರುವ ಸಂಗಾತಿಯಲ್ಲೂ ತನ್ನ ತಂದೆಯ ಗುಣಗಳನ್ನೇ  ಹೆಣ್ಣುಮಗಳು ಅಪೇಕ್ಷಿಸುವಳು.


*ಹೆಣ್ಣು ಮಕ್ಕಳು ತಮ್ಮ ವೈಯುಕ್ತಿಕ ಮೌಲ್ಯವನ್ನು ಅರಿಯುವುದು ತಂದೆಯ ಪ್ರೀತಿಯಿಂದ... ತಂದೆಯ ಅಮಿತ ಪ್ರೀತಿ ಹೆಣ್ಣುಮಕ್ಕಳ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಕಾರಿ. ತನ್ನ ಹೆಣ್ಣು ಮಗಳ ಬದುಕನ್ನು ರೂಪಿಸುವಲ್ಲಿ ಸಹಕಾರ ಮತ್ತು ಮೌಲ್ಯಯುತ ಸಲಹೆಗಳನ್ನು ನೀಡುವ ತಂದೆ ಆಕೆ ತನ್ನ ಬದುಕಿನಲ್ಲಿ ಬೇರೆಯವರಿಂದಲೂ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಬದುಕಲು ಸಹಕಾರಿ.


* ತಂದೆ ತನ್ನ ಹೆಣ್ಣು ಮಕ್ಕಳಲ್ಲಿ ಉನ್ನತ ಗುಣಮಟ್ಟ ಮತ್ತು ಮಿತಿಗಳನ್ನು ಹೊಂದಲು ಸಹಕಾರಿಯಾಗಿರುತ್ತಾನೆ.... ಇದು ಮಕ್ಕಳು ತಮ್ಮ ಜೀವನದ ನಿರ್ಣಾಯಕ ಘಟ್ಟಗಳಲ್ಲಿ ತಪ್ಪು ಸರಿಗಳ ಚಿಂತನೆ ಮಾಡಲು,ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯಕ. ತಂದೆ ಮಕ್ಕಳ ಪಾಲಿನ ನೈತಿಕ ದಿಕ್ಸೂಚಿಯಾಗಿರುತ್ತಾನೆ.


* ಯಾವಾಗಲೂ ನಿಮ್ಮ ಹೆಣ್ಣು ಮಕ್ಕಳಿಗೆ ಲಭ್ಯ ಸ್ಥಿತಿಯಲ್ಲಿರಿ.... ಮೊಬೈಲ್ ನೆಟ್ವರ್ಕ್ ಗೆ ಕವರೇಜ್ ತೊಂದರೆ ಇರಬಹುದು ಆದರೆ ಮಕ್ಕಳ ನೆಟ್ವರ್ಕ್ ಗೆ ಪಾಲಕರು ಯಾವತ್ತೂ ಲಭ್ಯರಾಗಿರಬೇಕು. ನಿಮ್ಮ ಸಮಯ ಮತ್ತು ಗಮನ ನೀವು ನಿಮ್ಮ ಹೆಣ್ಣು ಮಕ್ಕಳಿಗೆ ಕೊಡಬಹುದಾದ ಅತಿ ದೊಡ್ಡ ಗಿಫ್ಟ್ ಆಗಿದ್ದು ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ನಿಮ್ಮ ಹೆಣ್ಣು ಮಕ್ಕಳ ಜೊತೆಗಿರಬೇಕಾದ್ದು ಅತ್ಯವಶ್ಯಕ.


ಅಪ್ಪಂದಿರ ಉಪಸ್ಥಿತಿ ಹೆಣ್ಣು ಮಕ್ಕಳಿಗೆ ತಾವು ತಮ್ಮ ಅಪ್ಪನ ಮೊದಲ ಆದ್ಯತೆ ಎಂಬ ಬಲವಾದ ನಂಬಿಕೆಯನ್ನು, ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಅವರಿಬ್ಬರ ಮಧ್ಯದಲ್ಲಿ ಬಲವಾದ ಬಂಧ ಏರ್ಪಡಲು ನೆರವಾಗುತ್ತದೆ.


ನಿಮ್ಮ ಹೆಣ್ಣುಮಗಳಿಗೆ ಆಕೆಯ ದೇಹ ಮತ್ತು ಮನಸ್ಸಿನ ಮೌಲ್ಯದ ಅರಿವನ್ನು ಮೂಡಿಸಿ.....   ಪವಿತ್ರವಾದ ಗರ್ಭಗುಡಿಯಲ್ಲಿ ಅಂತಿಂಥವರಿಗೆ ಪ್ರವೇಶ ಇರುವುದಿಲ್ಲ ಅಲ್ಲವೇ.... ಅಂತೆಯೇ ತಮ್ಮ ದೇಹವೆಂಬ ಪವಿತ್ರವಾದ ಗರ್ಭಗುಡಿಯಲ್ಲಿ ಮನವೆಂಬ ವಿಗ್ರಹದಲ್ಲಿ ಅಪಾತ್ರರಿಗೆ ಪ್ರವೇಶ ನೀಡಕೂಡದು ಎಂಬ ತಿಳುವಳಿಕೆಯನ್ನು ನಿಮ್ಮ ಹೆಣ್ಣು ಮಕ್ಕಳಿಗೆ ನೀವೇ ಕಲಿಸಿ. 


ತನ್ನ ಸ್ವಯಂ ಬಿಂಬವನ್ನು ಅತ್ಯಂತ ಅಭಿಮಾನದಿಂದ ಕಾಯ್ದುಕೊಳ್ಳುವಲ್ಲಿ ಅಪ್ಪಂದಿರ ಪಾತ್ರ ಬಹಳ ಮುಖ್ಯವಾದದ್ದು. ಸಮಾಜದಲ್ಲಿ ತನ್ನ ಘನತೆಯನ್ನು ಕಾಯ್ದುಕೊಳ್ಳಲು ಹೆಣ್ಣು ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ತಂದೆಯ ಪಾತ್ರ ಹಿರಿದಾದದ್ದು.  ಆಕೆಯ ಕೌಶಲ್ಯಗಳನ್ನು ಉತ್ತೇಜಿಸುವಲ್ಲಿ, ಆಕೆಯ ಸ್ವಾಭಿಮಾನವನ್ನು ಉಳಿಸಿಕೊಳ್ಳುವಲ್ಲಿ ಅಪ್ಪಂದಿರು ಮಕ್ಕಳಿಗೆ ಬೆನ್ನೆಲುಬಾಗಿ ನಿಲ್ಲಬೇಕು.


* ಅಪಾಯಕರ ಮತ್ತು ದುರ್ಬರ ಸನ್ನಿವೇಶಗಳನ್ನು ಎದುರಿಸಲು ಆಕೆಗೆ ಸಜ್ಜುಗೊಳಿಸಿ... ಇಂದಿನ ಆಧುನಿಕ ದಿನಮಾನಗಳಲ್ಲಿ ಹದಿಹರೆಯದ ಸಮಸ್ಯೆಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಹೆಣ್ಣು ಮಕ್ಕಳು ಬಹಳಷ್ಟು ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಾರೆ. ಅಂತಹ ಸಂದರ್ಭಗಳನ್ನು ಎದುರಿಸುವ ಜಾಣ್ಮೆ ಮತ್ತು ರಕ್ಷಣಾತ್ಮಕತೆಯನ್ನು ತಂದೆಯಾದವನು ಕಲಿಸಬೇಕು. ಸುರಕ್ಷಿತತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಿಳುವಳಿಕೆಯನ್ನು ಮೂಡಿಸಬೇಕು.


*ಬದಲಾಗುತ್ತಿರುವ ಜಗತ್ತಿನಲ್ಲಿ ಆಕೆಗೆ ದಿಕ್ಸೂಚಿ ತಂದೆಯಾಗಬೇಕು... ಮಕ್ಕಳು ಬೆಳೆಯುತ್ತಾ ಇದ್ದಂತೆ ಅವರಲ್ಲಿ ವಯೋ ಸಹಜ ತುಡಿತಗಳು, ಮಿಡಿತಗಳು ಮತ್ತು ಅಸ್ಥಿರತೆಗಳು ಉಂಟಾಗುತ್ತವೆ... ಈ ಸಮಯದಲ್ಲಿಯೇ ಹೆಣ್ಣು ಮಕ್ಕಳಿಗೆ ಪಾಲಕರ ದೃಢ ವಿಶ್ವಾಸ ಮತ್ತು ಬೆಂಬಲದ ಅವಶ್ಯಕತೆ ಹದಿಹರೆಯದಲ್ಲಿ ಹೆಚ್ಚಾಗಿರುತ್ತದೆ... ಆದ್ದರಿಂದ ಅಪ್ಪಂದಿರೇ ನಿಮ್ಮ ಹೆಣ್ಣು ಮಕ್ಕಳ ತಾಕತ್ತು ನೀವಾಗಿ ಎಂದು ಮೆಗ್ ಮೀಕರ್ ಒತ್ತಿ ಹೇಳುತ್ತಾರೆ.


*ಆಕೆಯ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರೋತ್ಸಾಹಿಸಿ. ತಂದೆ ತನ್ನ ಮೇಲಿಟ್ಟಿರುವ ಭರವಸೆಯು ಹೆಣ್ಣುಮಕ್ಕಳಲ್ಲಿ ಬಲವನ್ನು ತುಂಬಿ ಆಕೆ ತನ್ನ ಬದುಕಿನ ಗುರಿಯನ್ನು ಮುಟ್ಟಲು ಸಹಾಯಕವಾಗುತ್ತದೆ. ತಮ್ಮ ಮನದಲ್ಲಿ ಮೂಡುವ ಅನವಶ್ಯಕ ಸಂಶಯಗಳನ್ನು ಹಿಮ್ಮೆಟ್ಟಿಸಿ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ತಂದೆಯ ಅಪಾರ ವಿಶ್ವಾಸದ ಬಲವನ್ನು ತನ್ನ ಮಗಳಿಗೆ ತಂದೆಯಾದವರು ನೀಡಲೇಬೇಕು. 


* ಮಾತುಗಳಿಗಿಂತ ಕೃತಿಗಳು ಹೆಚ್ಚು ಶಬ್ದ ಮಾಡುತ್ತವೆ, ಒಳ್ಳೆಯ ಶ್ರಮಜೀವಿ, ಪ್ರೀತಿಸುವ, ಕಾಳಜಿ ಮಾಡುವ, ಇತರರನ್ನು ಗೌರವಿಸುವ ತನ್ನ ತಂದೆಯನ್ನು ಹೆಣ್ಣು ಮಕ್ಕಳು ಅತ್ಯಂತ ಪ್ರೀತಿಯಿಂದ ಆದರಿಸುತ್ತಾರೆ... ಅಂತಹ ಶಕ್ತಿಶಾಲಿ ತಂದೆಯ ಮಾದರಿ ನೀವಾಗಿ. ನಿಮ್ಮ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಿಸುತ್ತಲೇ ಅವರ ಮಿತಿಗಳನ್ನು ಮನದಟ್ಟು ಮಾಡಿಸಿದಾಗ ಅವರ ಮೇಲೆ ಅದು ಹೆಚ್ಚು ಪ್ರಭಾವವನ್ನು ಬೀರಿ ಮುಂದಿನ ಬದುಕಿನಲ್ಲಿ ಒಳ್ಳೆಯ ನಿರ್ಣಯಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ.


* ನಿಮ್ಮ ಪ್ರಭಾವವನ್ನು ಎಂದೂ ಕಡಿಮೆ ಎಂದು ಭಾವಿಸದಿರಿ... ತಮ್ಮ ಮಾತು ಮತ್ತು ಕೃತಿಗಳು ತಮ್ಮ ಹೆಣ್ಣು ಮಕ್ಕಳ ಮೇಲೆ ಅದೆಷ್ಟು ಪ್ರಭಾವವನ್ನು ಬೀರುತ್ತವೆ ಎಂಬುದರ ಅರಿವು ಬಹಳಷ್ಟು ಅಪ್ಪಂದಿರಿಗೆ ಇರುವುದಿಲ್ಲ. ಅಪ್ಪಂದಿರ ಆತ್ಮವಿಶ್ವಾಸ, ಧೈರ್ಯ ಸ್ಥೈರ್ಯ, ಕ್ಷಮತೆ ಮತ್ತು ಜೀವನದ ಸವಾಲುಗಳನ್ನು ಎದುರಿಸುವಲ್ಲಿ ತೋರುವ ದಿಟ್ಟತನಗಳು ಹೆಣ್ಣು ಮಕ್ಕಳ ಬದುಕಿನ ಮೇಲೆ ಬಹಳಷ್ಟು ಕಾಲ ತನ್ನ ಪ್ರಭಾವವನ್ನು ಉಳಿಸಿಕೊಂಡಿರುತ್ತವೆ ಎಂದು ಮೆಗ್ ಮೀಕರ್ ಅಭಿಪ್ರಾಯ ಪಡುತ್ತಾರೆ.


ಸ್ಟ್ರಾಂಗ್ ಗ್ ಫಾದರ್ಸ್ ಸ್ಟ್ರಾಂಗ್ ಡಾಟರ್ಸ್ ಎಂಬ ಈ ಕೃತಿಯು ತಮ್ಮ ಮಕ್ಕಳ ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಂದೆಯ ಪಾತ್ರ ಹೇಗೆ ಚಿರಕಾಲ ತನ್ನ ಪ್ರಭಾವವನ್ನು ಬೀರುತ್ತದೆ ಎಂಬ ನಿಷ್ಠುರ ಸತ್ಯವನ್ನು


ಕಟುವಾಗಿ ಜ್ಞಾಪಿಸುತ್ತದೆ. ಕೃತಿಯ ಕರ್ತೃ ಮೆಗ್ ಮೀಕರ್ ಎಲ್ಲ ತಂದೆಯರಿಗೂ ಪ್ರೀತಿ, ವಿಶ್ವಾಸ ನಂಬಿಕೆ ಆತ್ಮವಿಶ್ವಾಸ ಮತ್ತು ಶಕ್ತಿಯ ಮೂಲಕ ತನ್ನ  ಹೆಣ್ಣು ಮಕ್ಕಳ ಜೀವನಕ್ಕೆ ಬಲವನ್ನು ತುಂಬುವ ಕುರಿತ ಕೃತಿಯಾಗಿದ್ದು ಒಂದು ಬಾರಿ ಓದಲೇಬೇಕು ಎಂಬಷ್ಟು ಅಂತಸ್ಸತ್ವವನ್ನು ಹೊಂದಿದೆ.


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top