ಮಂಗಳೂರು: ಯತಿಶ್ರೇಷ್ಠ, ಪದ್ಮವಿಭೂಷಣ, ವೃಂದಾವನಸ್ಥ ಪೇಜಾವರ ಶ್ರೀ ಶ್ರೀ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರ ಐದನೇ ವರ್ಷದ ಸಂಸ್ಮರಣೆಯ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಸಂಸ್ಮರಣಾ ಕಾರ್ಯಕ್ರಮವನ್ನು ಜ.5ರಂದು ಭಾನುವಾರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು ಇಲ್ಲಿ ನಡೆಯಿತು.
ಈ ಕಾರ್ಯಕ್ರಮವು ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಸಂಸ್ಮರಣಾ ಬಳಗ ಮತ್ತು ಕೃಷ್ಣಾರ್ಪಣಮ್ ಟ್ರಸ್ಟ್ (ರಿ) ಇದರ ನೇತೃತ್ವದಲ್ಲಿ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ತುಳು ಶಿವಳ್ಳಿ ಬ್ರಾಹ್ಮಣ ಸಂಘ ದ.ಕ., ಹವ್ಯಕ ಮಹಾಮಂಡಲ ಮಂಗಳೂರು, ಕೂಟ ಮಹಾಜಗತ್ತು ಮಂಗಳೂರು, ಸುಬ್ರಹ್ಮಣ್ಯ ಸಭಾ ಮಂಗಳೂರು, ಕರ್ಹಾಡ ಬ್ರಾಹ್ಮಣ ಸಮಾಜ ( ರಿ), SKDB ಅಸೋಸಿಯೇಷನ್ ಕೊಡಿಯಾಲ್ ಬೈಲ್, ವಿಪ್ರವೇದಿಕೆ (ರಿ) ಕೋಡಿಕಲ್, ವಿಪ್ರ ಸಮಾಗಮ ವೇದಿಕೆ ಮಂಗಳೂರು, ಚಿತ್ಪಾವನ ಬ್ರಾಹ್ಮಣ ಸಂಘ ಮತ್ತು ವಿಪ್ರ ಸಮೂಹ ಕೊಂಚಾಡಿ ಇದರ ಸಹಭಾಗಿತ್ವದಲ್ಲಿ ನಡೆದಿದ್ದು ಬೆಳಿಗ್ಗೆ 8.30ಕ್ಕೆ ರೆಡ್ ಕ್ರಾಸ್ ವೈದ್ಯಾಧಿಕಾರಿ ಡಾ. ಜೆ ಎನ್ ಭಟ್‌ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾವೂರಿನ ಅನಿತಾ ಭಟ್ ಮತ್ತು ಬಳಗ ಹಾಗೂ ಕದ್ರಿಯ ಮಂಜೂಷಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.
ಬೆಳಿಗ್ಗೆ 8.30ರಿಂದ ನಡೆದ ಈ ಬೃಹತ್ ರಕ್ತದಾನ ಶಿಬಿರದಲ್ಲಿ 101 ಜನ ರಕ್ತದಾನ ಮಾಡಿ ತಮ್ಮ ಸಾಮಾಜಿಕ ಕಳಕಳಿಯನ್ನು ಪ್ರಚುರಪಡಿಸಿದರು.
ಪೂರ್ವಾಹ್ನ 10:30ಗೆ ನಡೆದ ಪೇಜಾವರ ಶ್ರೀ ಶ್ರೀ ವಿಶ್ವತೀರ್ಥ ಸ್ವಾಮೀಜಿಯವರ ಐದನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯದ ಗಣ್ಯರು ಭಾಗವಹಿಸಿ ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಕಾರ್ಯಾಧ್ಯಕ್ಷರಾದ ಡಾ. ಎಂ ಬಿ ಪುರಾಣಿಕ್ ರವರು ಪೂಜ್ಯ ಸ್ವಾಮೀಜಿಯವರನ್ನು ಸಂಸ್ಮರಿಸಿದರು. ತುಳು ಶಿವಳ್ಳಿ ಬ್ರಾಹ್ಮಣ ಸಂಘ, ದಕ ಇದರ ಜಿಲ್ಲಾಧ್ಯಕ್ಷರಾದ ಡಾ. ಎಂ ಎಂ ದಯಾಕರ್ ಮಾತನಾಡಿ, ಬ್ರಾಹ್ಮಣ ಸಮುದಾಯದ ಜವಾಬ್ದಾರಿಗಳ ಕುರಿತು ಮಾತನಾಡಿದರು. ಪೂಜ್ಯ ಸ್ವಾಮೀಜಿಯವರ ಒಡನಾಡಿಯಾಗಿದ್ದ ಹಾಗೂ ಅವರ ಸಮಾಜಮುಖಿ ಕಾರ್ಯಗಳ ಉಸ್ತುವಾರಿಯಾಗಿದ್ದ ಶ್ರೀ ವಾಸುದೇವ ಭಟ್ ಪೆರಂಪಳ್ಳಿ ಅವರು ಸ್ವಾಮೀಜಿಯವರ ಸರಳತೆ, ಜೀವನೋತ್ಸಾಹ ಹಾಗೂ ಅಧ್ಯಯನಗಳ ಕುರಿತು ವಿಷದವಾಗಿ ವಿವರಿಸಿ ಇಂದಿನ ಯುವ ಜನಾಂಗಕ್ಕೆ ಇವುಗಳು ಮಾರ್ಗದರ್ಶಕವೆಂದು ಹೇಳಿದರು. ಹವ್ಯಕ ಮಂಡಲದ ಉಪಾಧ್ಯಕ್ಷರಾದ ರಾಜಶೇಖರ ಭಟ್ ಹಾಗೂ ಎಸ್‌ಕೆಡಿಬಿ ಅಸೋಸಿಯೇಷನ್ ಪ್ರತಿನಿಧಿ ಶ್ರೀ ಸುಧಾಕರ ರಾವ್ ಪೇಜಾವರ ಪುಣ್ಯ ಸ್ಮರಣೆಗೈದರು. ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸುಬ್ರಹ್ಮಣ್ಯ ಸಭಾ ವತಿಯಿಂದ ಶ್ರೀ ಹರ್ಷಕುಮಾರ್ ಕರ್ಹಾಡ ಬ್ರಾಹ್ಮಣ ಸಂಘದ ಪುರುಷೋತ್ತಮ್ ಭಟ್, ಕೂಟ ಮಹಾ ಜಗತ್ತಿನ ಶ್ರೀಧರ ಹೊಳ್ಳ, ಚಿತ್ಪಾವನ ಬ್ರಾಹ್ಮಣ ಸಂಘದ ಉಪಾಧ್ಯಕ್ಷರಾದ ಜಯಪ್ರಕಾಶ್ ಹೆಬ್ಬಾರ್, ವಿಪ್ರ ಸಮೂಹ ಕೊಂಚಾಡಿ ಇದರ ಸದಸ್ಯರು ಉಪಸ್ಥಿತರಿದ್ದರು.
ಕೃಷ್ಣಾರ್ಪಣಮ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಟ್ರಸ್ಟ್ ನ ಉಪಾಧ್ಯಕ್ಷ ರಂಗನಾಥ ಅಂಗಿಂತಾಯ ಧನ್ಯವಾದ ಸಮರ್ಪಿಸಿದರು. ಅನಿಕೇತ್ ಹೆಬ್ಬಾರ್ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮವನ್ನು ಕೃಷ್ಣಾರ್ಪಣಮ್ ಟ್ರಸ್ಟ್ ನ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ