ನಿಟ್ಟೆ: "ಸ್ವಯಂಪ್ರೇರಿತ ಅಥವಾ ಕಡ್ಡಾಯ: ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕುರಿತ ಸಾರ್ವಜನಿಕ ಧೋರಣೆ ಹೇಗಿರಬೇಕು?” ಅನ್ನುವ ವಿಷಯದ ಮೇಲೆ ಸ್ಪಾರ್ಕ್ ಪ್ರಾಯೋಜಿತ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ನಿಟ್ಟೆ (ಪರಿಗಣಿತ) ವಿಶ್ವವಿದ್ಯಾನಿಲಯವು 9ನೇ ನಿಟ್ಟೆ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ನಿಟ್ಟೆಯ ಜಸ್ಟಿಸ್ ಕೆ ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯಲ್ಲಿ ದಿನಾಂಕ 10ನೇ ಜನವರಿ 2025ರಂದು ಆಯೋಜಿಸಲಾಗಿತ್ತು.
ಈ ವಿಚಾರಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞರುಗಳಾದ ಅಮೆರಿಕಾದ ಪೆನ್ಸೆಲ್ವೇನಿಯ ವಿಶ್ವವಿದ್ಯಾನಿಲಯದ ಸಾಮಾಜಿಕ ಧೋರಣೆ ಸ್ಕೂಲ್ ಓಫ್ ಸೋಶಿಯಲ್ ಪಾಲಿಸಿ ಮತ್ತು ಪ್ರಾಕ್ಟೀಸ್ ಡಾ. ಫೇಮಿದಾ ಹ್ಯಾಂಡಿ, ಪೆನ್ಸೆಲ್ವೇನಿಯಾ ವಿವಿಯ ಪ್ರೊಗ್ರಾಮ್ ಫಾರ್ ರಿಲಿಜನ್ ಮತ್ತು ಸಾಮಾಜಿಕ ಸಂಶೋದನೆಯ ನಿರ್ದೇಶಕರಾದ ಡಾ ರಾಮ್ ನ್ಯಾನ್, ಅದಾನಿ ಗ್ರೂಪ್ ನ ಅಧ್ಯಕ್ಷರು ಎಕ್ಸಿಕ್ಯೂಟಿವ್ ನಿರ್ದೇಶಕರಾದ ಕಿಶೋರ್ ಆಳ್ವ ಹಾಗೂ ಇನ್ಪೋಸಿಸ್ ಸಂಸ್ಥೆಯ ಗ್ರೂಪ್ ಪ್ರಾಜೆಕ್ಟ್ ಮ್ಯಾನೇಜರ್ ರವಿರಾಜ್ ಬೆಲ್ಮ ಪಾಲ್ಗೊಂಡಿದ್ದರು.
ನಿಟ್ಟೆ (ಪರಿಗಣಿತ) ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಾ| ಎಂ ಎಸ್ ಮೂಡಿತ್ತಾಯ ಅವರು ಗೋಷ್ಠಿಯನ್ನು ಸಂಯೋಜಿಸಿದರು. ಗೋಷ್ಠಿಯ ಸಂಯೋಜಕರು ನಮ್ಮ ದೇಶದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದರಿಯ ಹಿನ್ನಲೆಯನ್ನು ವಿವರಿಸಿ ಅದು 1ನೇ ಏಪ್ರಿಲ್ 2014ರಿಂದ ಕಡ್ಡಾಯಗೊಳಿಸಿದ ವಿಚಾರಗಳನ್ನು ಮಂಡಿಸಿದರು.
ಡಾ| ಫೇಮಿದಾ ಹ್ಯಾಂಡಿ ಅವರು ಮಾತನಾಡುತ್ತಾ, ಸಿಎಸ್‌ಆರ್ ಒಂದು ಜಾಗತಿಕ ಪರಿಕಲ್ಪನೆಯಾಗಿದೆ. ಕಂಪೆನಿಗಳು ತಮ್ಮ ಯಶಸ್ವಿ ಕಾರ್ಯಾಚರಣೆಗಳಿಗೆ ಸಂಬಂಧಿಸಿ, ಮುಖ್ಯವಾಗಿ ಪಾಲುದಾರರ ಮೌಲ್ಯವರ್ಧನೆ ಮತ್ತು ಗಂಡಾಂತರಗಳನ್ನು ನಿಭಾಹಿಸುವಲ್ಲಿ ಆರ್ಥಿಕ ದೃಷ್ಟಿಕೋನದಿಂದ ಚಿಂತಿಸುವುದು ತೀರಾ ಅನಿವಾರ್ಯ ಎಂದರು.
ಆದರೆ ಕಂಪೆನಿಯ ಸಿಎಸ್ಆರ್ ಚಟುವಟಿಕೆಗಳನ್ನು ಕಡ್ಡಾಯಗೊಳಿಸಿದ ನಿಟ್ಟಿನಲ್ಲಿ ಕೆಲವೊಂದು ಮೂಲಭೂತ ಪ್ರಶ್ನೆಗಳು ಉದ್ಭವಿಸಿವೆ: ಕಂಪೆನಿಯ ನೂತನ ಸಿ ಸ್ ಆರ್ ಗೆ ಸಂಬಂದಿಸಿದ ರೂಪ ರೇಷೆಗಳು ಹೇಗಿರಬೇಕು? ಯಾವ ರೀತಿಯ ಪ್ರೇರಣೆ ಕಂಪೆನಿಗೆ ನೂತನ ಸಿ ಎಸ್ ಆರ್ ನ ಅನುಷ್ಠಾನದಿಂದ ಹೇಗೆ ಲಭ್ಯವಿದೆ? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಶೋಧನೆಯಿಂದ ಕಂಡುಕೊಳ್ಳಬೇಕು ಎಂದರು.
ಸಿ ಎಸ್ ಆರ್ ಕೇವಲ ಅಂಕಿ ಅಂಶಗಳಿಗೆ ಸಂಬಂದಿಸಿದ ವಿಚಾರವಲ್ಲ. ಅದು ಮಾನವ ಮನೋಧರ್ಮ ಮತ್ತು ವರ್ತನೆಗೆ ಸಂಬಂದಿಸಿದ್ದು ಎಂದು ಪ್ರತಿಪಾದಿಸಿದರು.
ಡಾ| ರಾಮ್ ನ್ಯಾನ್ ಅವರು ಮಾತನಾಡುತ್ತಾ, ಕಂಪೆನಿಗಳ ಸಿ ಎಸ್ ಆರ್ ಬಹಳ 'ಭಾರವಾದ' ಶಬ್ದ. ಅದು ತೀರಾ ಸಂಕೀರ್ಣ ಮತ್ತು ಸಾಕಷ್ಟು ಬಹುಶಿಸ್ತಿನ ದೃಷ್ಟಿಕೋನದಿಂದ ಅದನ್ನು ಅವಲೋಕಿಸಬೇಕು ಎಂದರು. ಸಿ ಎಸ್ ಆರ್ ಮತ್ತು ಸಹ್ಯಅಭಿವೃದ್ಧಿ ಪರಿಕಲ್ಪನೆಯನ್ನು ವಿವಿದ ಆಯಾಮಗಳಲ್ಲಿ ಸಂಶೋಧಿಸಿದಾಗ ಮಾತ್ರ ಅದರ ನೈಜ ಅರ್ಥ ಮತ್ತು ಸೂಕ್ತ ಅನುಷ್ಠಾನ ಸಾಧ್ಯ ಎಂದು ಉದಾಹರಣೆಗಳ ಮೂಲಕ ವಿವರಿಸಿದರು.
ಕಿಶೋರ್ ಆಳ್ವ ಅವರು ಮಾತನಾಡುತ್ತಾ, ಸಿ ಎಸ್ ಆರ್ ನ ಯಶಸ್ಸು ಸ್ಥಳೀಯ ಜನತೆಯ ಸಹಕಾರ, ಅವರ ಸಂಸ್ಕೃತಿ, ಆತ್ಮೀಯತೆ, ಒಡನಾಟದಿಂದ ಸಾಧ್ಯ ಎಂದರಲ್ಲದೆ ಅದಾನಿ ಗ್ರೂಪ್ ನ ಸಿ ಎಸ್ ಆರ್ ಆಶಯ ಮತ್ತು ಅದರ ಯಶಸ್ಸಿನ ಚಿತ್ರಣವನ್ನು ನೀಡಿದರು.
ರವಿರಾಜ್ ಬೆಲ್ಮ ಅವರು ಮಾತನಾಡುತ್ತಾ, ಇನ್ಫೋಸಿಸ್ ತನ್ನ ನಸಿ ಎಸ್ ಆರ್ ಚಟುವಟಿಕೆಗಳನ್ನು ಇನ್ಫೋಸಿಸ್ ಪ್ರತಿಷ್ಠಾನದ 'ಪ್ರೇರಣ'ದ ಮೂಲಕ ವಸ್ತುನಿಷ್ಠವಾಗಿ ಅನುಷ್ಠಾನಗೊಳಿಸುತ್ತದೆ. ಈ ಸಂಸ್ಥೆಗೆ ಅದರದ್ದೇ ಆದ ರೂಪರೇಷೆಗಳು, ವ್ಯವಸ್ಥೆ, ಕಾನೂನಾತ್ಮಕ ತಾಳಹದಿ ಇದೆ ಎಂದರು.
ತಜ್ಞರ ಬೇರೆ, ಬೇರೆ ಚಿಂತನಗಳ ವಿವರಗಳನ್ನು ಕಲೆಹಾಕಿ ದೇಶಕ್ಕೆ ಸಂಬಂಧಿಸಿ ಸೇರ್ಪಡೆ, ಸಹ್ಯ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಕಂಪೆನಿಗಳು ಸಿ ಎಸ್ ಆರ್ ಗೆ ಸಂಬಂಧಿಸಿದ ಸಾರ್ವಜನಿಕ ಧೋರಣೆಯನ್ನು ರೂಪುಗೊಳಿಸುವ ಅನಿವಾರ್ಯತೆ ಇದೆ ಎಂದು ಡಾ ಮೂಡಿತ್ತಾಯ ಅಭಿಪ್ರಾಯಪಟ್ಟರು.
ಹೃದಯ ವೈಶಾಲ್ಯತೆ ಜೊತೆ ಉತ್ತಮ ಜ್ಞಾನ ಮತ್ತು ಬುದ್ಧಿವಂತಿಕೆಯ ಸಿ ಎಸ್ ಆರ್ ಹೆಚ್ಚು ಜಾಗೃತಿ ಪಡೆಯಬಹುದು ಎಂದು ಗೋಷ್ಠಿಯ ಬಳಿಕ ಚರ್ಚೆಯಲ್ಲಿ ಅಮೇರಿಕಾದ ಪೆನ್ಸೆಲ್ವೇನಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಎಂಬಿಎ ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧಕರು ಪಾಲ್ಗೊಂಡರು. ಡಾ| ಸುಧೀರ್ ರಾಜ್ ಕೆ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ