ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

Upayuktha
0

 


ಶಿವಮೊಗ್ಗ:
ಮಾನಸ ಟ್ರಸ್ಟ್‌ನ  ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿ ಕು. ಆಲಿಯಾ ಸಾಜಿದ್ ಖಾತಿಬ್ ಇವರು 2024ರ ಸಾಲಿನ ಬಿ ಎ ಪದವಿಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಹಾಗೆಯೇ ಇಂಗ್ಲೀಷ್ ಐಚ್ಛಿಕ ವಿಷಯದಲ್ಲಿ ಪ್ರಥಮ ಸ್ಥಾನ, ಅತಿ ಹೆಚ್ಚು ಅಂಕಗಳಿಕೆಯ ಸಾಧನೆಯನ್ನು ಮಾಡಿದ್ದಾರೆ. 


ಇಂದು (ಜ. 22) ಏರ್ಪಡಿಸಲಾಗಿದ್ದ ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಈ ಸಾಧನೆಗಾಗಿ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಚಿನ್ನದ ಪದಕ ಹಾಗೂ ಎಸ್. ಕುಕ್ಕೆ ಸೀತಾರಾಮಶಾಸ್ತ್ರಿ ಫೌಂಡೇಷನ್ ನಗದು ಬಹುಮಾನವನ್ನು ಸನ್ಮಾನ್ಯ ಕುಲಾಧಿಪತಿಗಳಿಂದ ಪಡೆದಿದ್ದಾರೆ.



ಹಾಗೆಯೇ ಇದೇ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ರಕ್ಷಿತ್ ಹೆಚ್.ಆರ್. ಬಿ ಎ ಪದವಿಯ ಪತ್ರಿಕೋದ್ಯಮ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಅತಿ ಹೆಚ್ಚು ಅಂಕಗಳಿಸಿ ನಾವಿಕ ಪತ್ರಿಕೆ ಸಿಲ್ವರ್ ಜುಬಲಿ ಮೆಮೊರಿಯಲ್ ಚಿನ್ನದ ಪದಕ ಮತ್ತು ಪ್ರಶಸ್ತಿ ಪಡೆದಿದ್ದಾನೆ.


ಈ ಸಾಧನೆಗಳಿಗಾಗಿ ಮಾನಸ ಟ್ರಸ್ಟ್‌ನ ಡಾ. ರಜನಿ ಎ ಪೈ, ಡಾ. ಪ್ರೀತಿ ವಿ. ಶಾನಭಾಗ್ ಮತ್ತು ಡಾ. ವಾಮನ್ ಶಾನಭಾಗ್ ಅವರು, ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಧ್ಯಾ ಕಾವೇರಿ ಕೆ, ಡಾ. ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿ, ಪ್ರೊ. ರಾಮಚಂದ್ರ ಬಾಳಿಗ, ಕಾಲೇಜಿನ ಶಿಕ್ಷಕರು, ಸಿಬ್ಬಂದಿ ವರ್ಗದವರು ಈ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

                                   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top