ಸಾಗರ: ಕುಡಿಯುವ ನೀರು, ಇ-ಖಾತಾ, ಒಳಚರಂಡಿ ದುರಸ್ತಿ ಸೇರಿದಂತೆ ವಿವಿಧ ನಾಗರಿಕ ಸೌಲಭ್ಯಗಳು ಮತ್ತು ಸಮಸ್ಯೆಗಳ ಕುರಿತು ಸಾಗರದ ಸಹಾಯಕ ಆಯುಕ್ತರಿಗೆ (ಎ.ಸಿ) ಇಂದು ಸಾಗರದ ದೇಶಿ ಸೇವಾ ಬ್ರಿಗೇಡ್ ವತಿಯಿಂದ ಲಿಖಿತ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕರಿಂದ ಸಂಘಟನೆಗೆ ಬಂದಂತಹ ಅಳಲು ಹಾಗೂ ಸಮಸ್ಯೆಗಳನ್ನು ಆಧರಿಸಿ ಈ ಲಿಖಿತ ಮನವಿ ನೀಡಲಾಗಿದೆ.
ಕುದುರೂರು ಗ್ರಾ.ಪಂ. ಬಿಚುಗೋಡು ಗ್ರಾಮದ ಗ್ರಾಮಸ್ಥರ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ನಗರಸಭೆಯಲ್ಲಿ ಇ-ಖಾತಾ ಮಾಡಿಕೊಡಲು, ವಿಪರೀತ ಸಮಸ್ಯೆಗಳನ್ನು ಮಾಡಿ ಲಂಚ ಪಡೆದು ಕೆಲಸ ಮಾಡಿಕೊಡುವ ವ್ಯವಸ್ಥೆಯ ಬಗ್ಗೆ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಂಡು ಸಾರ್ವಜನಿಕರ ಹಿತ ಕಾಪಾಡಬೇಕೆಂದು, ಹಾಗೂ ಸಾಗರದ ಮೈಸೂರ್ ಕೆಫೆ ಹೋಟೆಲಿನಿಂದ ಎಸ್‌ಪಿಎಂ ರಸ್ತೆಯ ಕೊನೆವರೆಗೂ ಆಗಿರುವ ಚರಂಡಿ ದುರವಸ್ಥೆ ಮತ್ತು ದುರ್ನಾತ ಬಗ್ಗೆ ಶೀಘ್ರವಾಗಿ ಸರಿಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘಟನೆಯು ನೀಡಿದ ದೂರಿನ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಎ.ಸಿಯವರು, ಪುರಸಭೆಯ ಪ್ರಭಾರ ಕಮಿಷನರ್ ನಾಗಪ್ಪರವರಿಗೂ ಹಾಗೂ ವಾಟರ್ ಸಪ್ಲೈಯ AEE ಗುರುಕೃಷ್ಣ ಶೆಣೈ ಅವರಿಗೆ ಒಂದು ವಾರದೊಳಗೆ ಸಮಸ್ಯೆ ಸಂಪೂರ್ಣ ಸರಿಪಡಿಸಬೇಕೆಂದು ತಾಕೀತು ಮಾಡಿದ್ದಾರೆ. ಎಸ್‌ಪಿಎಂ ರಸ್ತೆಯ ನಿವಾಸಿಗಳು ಮತ್ತು ಸಂಘಟನೆಯ ಸಂಚಾಲಕ ಕಾಂತ್‌ರಾಜ್ ಹಾಗೂ ಸದಸ್ಯರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ