ಉಡುಪಿ: ರಂಗೋಲಿಯು ಏಕಾಗ್ರತೆಯ ಅದ್ಭುತ ಕಲೆಯಾಗಿದೆ. ಭಾರತೀಯ ಸಂಸ್ಕ್ರತಿಯ ಸ್ವರೂಪದ ಈ ವಿಶೇಷ ಕಲಾ ಪ್ರಕಾರವನ್ನು ಎಲ್ಲರೂ ಮೈಗೂಡಿಸಬೇಕೆಂದು ಡಾ.ಟಿ.ಎಂ.ಪೈ ಪಾಲಿಟೆಕ್ನಿಕ್ ಕಾಲೇಜಿನ ಪ್ರಬಂಧಕ ರಾಧಾಕೃಷ್ಣ ಸಾಮಂತ್ ಹೇಳಿದರು.
ಅವರು ಜ.26ರಂದು ಮಣಿಪಾಲ ಶಾಂತಿ ನಗರದ ಗಣಿೀಶ ಸಭಾಭವನದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಬೆಂಗಳೂರು ಉಡುಪಿ ಜಿಲ್ಲಾ ಘಟಕ ಕಜಾಪ ಉಡುಪಿ ತಾಲೂಕು ಘಟಕ ಮತ್ತು ಗಣಿೀಶ ಭಜನಾ ಮಂಡಳಿ ವತಿಯಿಂದ ಉಡುಪಿ ತಾಲೂಕು ಮಟ್ಟದ ರಂಗೋಲಿ ಸ್ಪಧಾ೯ ಸಂಭ್ರಮದಲ್ಲಿ ಮಾತನಾಡಿದರು.
ರಂಗೋಲಿಯ ಮೇಲೆ ಇತ್ತೀಚೆಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಸರಿಯಲ್ಲ ಎಂದರು. ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ ಕಜಾಪ ಜಿಲ್ಲಾಧ್ಯಕ್ಷ ಡಾ.ಗಣಿೀಶ ಗಂಗೊಳ್ಳಿ ಮಾತನಾಡಿ, ರಂಗೋಲಿಯು ರಂಗ (ಭಗವಂತ) ನನ್ನು ಒಲಿಸುವ ಪವಿತ್ರವಾದ ಕಲೆಯಾಗಿದೆ. ನಮ್ಮ ಮನಸ್ಸುಗಟ್ಟಿಗೊಳಿಸುವ ಈ ಕಲೆಯನ್ನು ಬೆಳೆಸುವ ದೃಷ್ಟಿಯಿಂದ ಈ ರೀತಿಯ ಕಾಯ೯ಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವೇದಿಯಲ್ಲಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಗುರುಶ್ರೀ ಸಹಕಾರಿಯ ನಿದೇ೯ಶಕಿ ಭಾರತಿ ಇಂದು ಶೇಖರ, ಉದ್ಯಮಿ ವಿದ್ಯಾ ಎಸ್ ನಾಯಕ್, ಸುಮತಿ ಪೂಜಾರಿ ಮುಂತಾದವರಿದ್ದರು.
ಈ ಸಂದಭ೯ದಲ್ಲಿ ಸ್ಪಧಾ೯ ಕಾಯ೯ಕ್ರಮದಲ್ಲಿ ವಿಜೇತರಿಗೆ ನಗದು ಸಹಿತ ಬಹುಮಾನ ನೀಡಲಾಯಿತು. ತೀಪು೯ಗಾರರಾಗಿ ಶ್ರೀಲತಾ ಮತ್ತು ಪ್ರಭಾವತಿ ಆಗಮಿಸಿದ್ದರು. ಜಿಲ್ಲಾ ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು ಸ್ವಾಗತಿಸಿದರು. ಕಮಲಾಕ್ಷಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ