ಮುಜುಂಗಾವು ವಿದ್ಯಾಪೀಠದಲ್ಲಿ ಪ್ರತಿಭಾ ಭಾರತೀ

Upayuktha
0


ಕುಂಬಳೆ: ಮುಜುಂಗಾವು ಶ್ರೀ ಭಾರತಿ ವಿದ್ಯಾಪೀಠದಲ್ಲಿ ಪ್ರತಿಭಾ ಭಾರತೀ ಕಾರ್ಯಕ್ರಮವನ್ನು ಇಂದು (ಜ.14) ಮಕರ ಸಂಕ್ರಾಂತಿಯ ಆಚರಣೆಯೊಂದಿಗೆ ನಡೆಸಲಾಯಿತು. ವಿಶೇಷ ಅತಿಥಿಗಳಾಗಿ ಆಗಮಿಸಿದ ವಿದ್ಯಾಲಯದ ನೂತನ ಆಡಳಿತ ಸಮಿತಿಯ ಕಾರ್ಯದರ್ಶಿ ಹಿಳ್ಳೆಮನೆ ಸುಬ್ರಹ್ಮಣ್ಯ ಪ್ರಸಾದ್ ಇವರು ಮಾತನಾಡುತ್ತಾ 'ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ದಾಸರಾಗದೇ, ಪರೀಕ್ಷಾ ದೃಷ್ಟಿಯಿಂದಲೂ ಓದಬೇಕಾದ ಅನಿವಾರ್ಯತೆಯನ್ನು ತಮ್ಮ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದರು.


ಈ ಸಂದರ್ಭದಲ್ಲಿ ಮಕರಸಂಕ್ರಾಂತಿಯ ವಿಶೇಷವಾಗಿ ಎಳ್ಳು ಬೆಲ್ಲವನ್ನು ಹಂಚಿ, ವಿದ್ಯಾರ್ಥಿಗಳಿಗೆ ಈ ಆಚರಣೆಯ ವಿಶೇಷತೆಯನ್ನು ವಿವರಿಸಲಾಯಿತು.


ವಿದ್ಯಾಲಯದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದಲೂ ಪ್ರತಿಭಾ ಪ್ರದರ್ಶನ ನಡೆಯಿತು. ಹತ್ತನೇ ತರಗತಿಯ ವರುಣ್ ಶೌರಿ ಸಭಾಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ದರ್ಭೆ ಮಾರ್ಗ ಹಾಗೂ ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರ ಸರಸ್ವತಿ ಹಾಗೂ ಸಂಸ್ಕೃತ ಅಧ್ಯಾಪಕರಾದ ಬಾಲಕೃಷ್ಣ ಶರ್ಮ, ಅನಂತಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಐದನೇ ತರಗತಿಯ ಕು| ಆರಾಧ್ಯ ಕೆ ಎನ್ ಸ್ವಾಗತಿಸಿ, ಒಂಬತ್ತನೇ ತರಗತಿಯ ಕು| ಅಕ್ಷರಾ ಎಂ ಬಲ್ಲಾಳ್ ವಂದಿಸಿದಳು. ಎಂಟನೇ ತರಗತಿಯ ಮಾ| ಶಾಶ್ವತ್ ಹಾಗೂ ಕು| ಚಿತ್ತಾರ ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top