ಮಣಿಪಾಲ್ ಗ್ರೂಪ್‌ ಗೆ ರೂ.76 ಕೋಟಿ ವಂಚನೆ: ಆರೋಪಿಯ ವೃತ್ತಿಪರ ದುರ್ನಡತೆ ಸಾಬೀತು

Upayuktha
0

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಪ್ರಕಟಣೆ




ಬೆಂಗಳೂರು: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ಐಸಿಎಐ) ಶಿಸ್ತು ಸಮಿತಿಯು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಪ್ರಸ್ತುತ ಮೂರು ಕ್ರಿಮಿನಲ್ ಪ್ರಕಣಗಳನ್ನು ಎದುರಿಸುತ್ತಿರುವ ಸಂದೀಪ್ ಗುರುರಾಜ್ ಅವರನ್ನು ಚಾರ್ಟರ್ಡ್ ಅಕೌಂಟೆಂಟ್ಸ್ ಆಕ್ಟ್ 1949ರ ಪ್ರಕಾರ ವೃತ್ತಿಪರ ದುರ್ನಡತೆ ವಿಚಾರದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.


ಮಣಿಪಾಲ್ ಗ್ರೂಪ್‌ ನ ಮಾಜಿ ಜನರಲ್ ಮ್ಯಾನೇಜರ್ ಆಗಿರುವ ಸಂದೀಪ್ ಗುರುರಾಜ್ ಅವರು ಕಂಪನಿಗೆ ಸುಮಾರು ರೂ. 76 ಕೋಟಿ ಹಣ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಶಿಸ್ತು ಸಮಿತಿಯು ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ಪರಿಗಣಿಸಿ ತನಿಖೆ ನಡೆಸಿದ್ದು, ಆ ತನಿಖೆಯಲ್ಲಿ ಅವರು ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಸಮಯದಲ್ಲಿ ಕಂಪನಿ, ಪ್ರಮೋಟರ್ ಗಳು ಮತ್ತು ಅಸೋಸಿಯೇಟ್ ಗಳ ಭಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಬೇರೆಡೆಗೆ ಬಳಸಿಕೊಂಡಿದ್ದಾರೆ ಎಂಬ ಅಂಶವನ್ನು ಕಂಡುಕೊಂಡಿದೆ.


ಸಂದೀಪ್ ಗುರುರಾಜ್ ಅವರು ಹೂಡಿಕೆ ವಂಚನೆ ಯೋಜನೆಗಳನ್ನು ನಡೆಸುತ್ತಿದ್ದ ವ್ಯಕ್ತಿ ಜೊತೆಗೆ ಕೆಲಸ ಮಾಡುವ ಮೂಲಕ ಈ ದೊಡ್ಡ ಪ್ರಮಾಣದ ಆರ್ಥಿಕ ವಂಚನೆಯನ್ನು ನಡೆಸಿದ್ದಾರೆ, ಅದಕ್ಕಾಗಿ ಅವರು ದುಬೈ ನ್ಯಾಯಾಲಯಗಳಿಂದ 518 ವರ್ಷಗಳ ಜೈಲು ಶಿಕ್ಷೆಗೂ ಗುರಿಯಾಗಿದ್ದಾರೆ.


ಕಂಪನಿಯು ಸಂದೀಪ್ ಗುರುರಾಜ್ ಮತ್ತು ಇತರ ಆರೋಪಿಗಳ ವಿರುದ್ಧ 26.12.2018ರಂದು ಬೆಂಗಳೂರಿನಲ್ಲಿ ಅವರ ಅಪರಾಧಗಳಿಗಾಗಿ 120-ಬಿ, 406, 408, 409, 420,465,467, 468, 4771-ಎ, 506,201 ಆರ್/ಡಬ್ಲ್ಯೂ 34 ಐಪಿಸಿ ಅಡಿಯಲ್ಲಿ ಕ್ರಿಮಿನಲ್ ದೂರು (ಎಫ್‌ಐಆರ್ ಅಪರಾಧ ಸಂಖ್ಯೆ 257/2018) ದಾಖಲಿಸಿದೆ. ಈತನ ವಿರುದ್ಧ ಇತರ ದೂರುದಾರರು ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಂದೀಪ್ ಗುರುರಾಜ್ ಎಫ್‌ಐಆರ್ 257/2018 ಕಾರಣಕ್ಕೆ ಸುಮಾರು 25 ತಿಂಗಳು ಮತ್ತು ಇತರ ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ 22 ತಿಂಗಳು ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.


ದೂರುದಾರ ಕಂಪನಿಯ ಪ್ರಕಾರ ಆಂತರಿಕ ವಿಚಾರಣೆಯ ಸಮಯದಲ್ಲಿ ಸಂದೀಪ್ ಗುರುರಾಜ್ ಅವರು ಹಣ ದುರುಪಯೋಗದ ಕುರಿತು ಒಪ್ಪಿಕೊಂಡಿದ್ದಾರೆ ಮತ್ತು ಅವರು, ಅವರ ಪತ್ನಿ ಮತ್ತು ಅಂಗಸಂಸ್ಥೆಗಳ ಖಾತೆಗಳಿಂದ 8.58 ಕೋಟಿ ರೂಗಳನ್ನು ವಶಕ್ಕೆ ಪಡೆಯಲಾಗಿದೆ. 


ದೊಡ್ಡ ಪ್ರಮಾಣದ ಹಣಕಾಸಿನ ವಂಚನೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ತನಿಖೆ ಮತ್ತು ಚಾರ್ಜ್ ಶೀಟ್‌ಗಳು ಆರೋಪಿಯು ದುಷ್ಕೃತ್ಯದಲ್ಲಿ ಪಾಲ್ಗೊಂಡಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಈ ಕುರಿತು ಶಿಸ್ತು ಸಮಿತಿಯು, "ಕೋಟಿಗಟ್ಟಲೆ ಮೊತ್ತದ ಹಣಕಾಸು ವಂಚನೆ ನಡೆದಿದೆ. ಪ್ರತಿವಾದಿಯು ನ್ಯಾಯಯುತ ಮಾರ್ಗದಿಂದ ದೂರ ಸರಿದಿದ್ದಾರೆ ಮತ್ತು ಹಣಕಾಸು ದುರ್ಬಳಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಿದೆ" ಎಂದು ದಾಖಲಿಸಿದೆ. 


ಈ ನಿಟ್ಟಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ ಒಬ್ಬರಿಂದ ನಿರೀಕ್ಷಿಸಬಹುದಾದ ವೃತ್ತಿಪರ ಮತ್ತು ನೈತಿಕ ಮಾನದಂಡಗಳ ಮೂಲಭೂತ ಉಲ್ಲಂಘನೆ ಆಗಿರುವುದರಿಂದ ಮತ್ತು ಹಣದ ದುರುಪಯೋಗಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ಸ್ ಆಕ್ಟ್, 1949ರ ಎರಡನೇ ಶೆಡ್ಯೂಲ್‌ ನ ಭಾಗ II ರ ಐಟಂ (1) ಮತ್ತು (4) ಅಡಿಯಲ್ಲಿ ಸಂದೀಪ್ ಗುರುರಾಜ್ ಅವರನ್ನು ವೃತ್ತಿಪರ ದುರ್ನಡತೆ ವಿಚಾರದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.


ಚಾರ್ಟರ್ಡ್ ಅಕೌಂಟೆಂಟ್‌ ಗಳು ನಿಷ್ಠೆ ಉಳಿಸಿಕೊಂಡು ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಐಸಿಎಐ ಸಮಿತಿಯ ತೀರ್ಪು ತಿಳಿಸಿಕೊಟ್ಟಿದೆ. ಐಸಿಎಐ ವೃತ್ತಿಪರ ದುರ್ನಡತೆಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ವೃತ್ತಿಪರ ನೈತಿಕತೆ ಮತ್ತು ಪ್ರಾಮಾಣಿಕತೆ ಕಾಪಾಡಿಕೊಳ್ಳಲು ವಿಫಲರಾದ ಸದಸ್ಯರ ವಿರುದ್ಧ ಇನ್ನು ಮುಂದೆಯೂ ಕ್ರಮ ಕೈಗೊಳ್ಳುತ್ತದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top