ಪ್ರಣವ ಭಟ್ ಅವರಿಗೆ ಪುತ್ತೂರು ತಾಲೂಕು ಯುವ ಪ್ರಶಸ್ತಿ

Upayuktha
0


ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಕೊಡಮಾಡುವ ಪುತ್ತೂರು ತಾಲೂಕು ಯುವ ಪ್ರಶಸ್ತಿಗೆ ಪ್ರಣವ ಭಟ್ ಆಯ್ಕೆಯಾಗಿದ್ದಾರೆ.


ಪರಿಚಯ 

ಪುತ್ತೂರಿನ ಮುರ ಎಂಬಲ್ಲಿ ವಾಸವಿದ್ದು, ವಿ.ಜಿ ಭಟ್ ಹಾಗೂ ಲಕ್ಷ್ಮೀ ವಿ.ಜಿ ಭಟ್ ಅವರ ಸುಪುತ್ರ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದು, ಆಳ್ವಾಸ್ ಕಾಲೇಜಿನಲ್ಲಿ ಯಕ್ಷಗಾನದ ಮೂಲಕ ಉಚಿತ ಪದವಿಪೂರ್ವ ಶಿಕ್ಷಣ ಪಡೆದು ಆಳ್ವಾಸ್ ಸಾಂಸ್ಕೃತಿಕ ತಂಡದ ಜೊತೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ. ಉನ್ನತ ವ್ಯಾಸಂಗವನ್ನು ಪ್ರತಿಷ್ಠಿತ ನಿಟ್ಟೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಮುಗಿಸಿದ್ದು,  ಬಾಲ್ಯದಿಂದಲೇ ಭಾಷಣ, ಸಾಹಿತ್ಯ ನಾಟಕ, ಚಿತ್ರಕಲೆ, ಸಿನಿಮಾ, ಯಕ್ಷಗಾನ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿ ಹಲವಾರು ವೇದಿಕೆಗಳಲ್ಲಿ  ಕಲಾಪ್ರದರ್ಶನವನ್ನು ನೀಡಿರುತ್ತಾರೆ.


ಶಾಲಾ ದಿನಗಳಲ್ಲಿ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾರೆ. ಹಲವಾರು ಕಾರ್ಯಕ್ರಮಗಳಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ತೀರ್ಪುಗಾರನಾಗಿ ಭಾಗವಹಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗ್ರಾಮ ಸಾಹಿತ್ಯ ಸಂಭ್ರಮಗಳಲ್ಲಿ ವಿದ್ಯಾರ್ಥಿಗಳಲ್ಲಿ ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳನ್ನು ಯಾವ ರೀತಿ ಬರೆಯಬಹುದು ಮತ್ತು ಇದರ ಪೂರ್ವ ತಯಾರಿಯ ಕುರಿತು ಜಾಗೃತಿ ಮೂಡಿಸಲು ಸುಮಾರು 70 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿರುತ್ತಾರೆ. ಹಾಗೂ ನಮ್ಮ ದೇಶದಲ್ಲಿ ಸಣ್ಣಪುಟ್ಟ ಹಳ್ಳಿ ಹಳ್ಳಿಗಳಲ್ಲಿಯೂ ತಯಾರುಗೊಳಿಸುವ ಕರಕುಶಲ ವಸ್ತುಗಳಿಗೆ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಸ್ವದೇಶಿ ಮಾರ್ಟ್ ಎಂಬ ಸಾಮಾಜಿಕ ಜಾಲತಾಣದ ವೇದಿಕೆ ಮೂಲಕ ಕೊಡುಕೊಳ್ಳುವಿಕೆಯ ಹೊಸ ಯೋಜನೆಯನ್ನು ಪ್ರಾರಂಭಿಸಿ ಮನೆಯಲ್ಲೇ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ನೀಡಿ ದೇಶಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಕಾರ ನೀಡಿರುತ್ತಾರೆ


ಧನಾತ್ಮಕ ಸುದ್ದಿಗಳನ್ನು ನೀಡಲು ಭಾರತವಾಣಿ ವೆಬ್ಸೈಟ್, ಯೂಟ್ಯೂಬ್ ವಾಹಿನಿಯ ಮೂಲಕ ಸಣ್ಣಪುಟ್ಟ ಸಾಧಕರನ್ನು ಗುರುತಿಸಿ ವೀಕ್ಷಕರಿಗೆ ಪರಿಚಯಿಸುವುದಲ್ಲದೆ ಉಪಯುಕ್ತ ಮಾಹಿತಿ ಹಾಗೂ ಹಲವು ವಿಭಿನ್ನ ವಿಚಾರಗಳನ್ನು ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದಾನೆ. ಸುಮಾರು 150 ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದು, ಸೆಂಟರ್ ಫಾರ್ ವೈಲ್ಡ್ ಲೈಫ್ ಎಂಬ ಭಾರತದ ಪ್ರತಿಷ್ಠಿತ NGO ಮೂಲಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕಾಡು ಪ್ರಾಣಿಗಳು, ಪರಿಸರದ ಕುರಿತು ಜಾಗೃತಿ ಮೂಡಿಸಿದ್ದಾನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಹಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಈಗಾಗಲೇ ಭಾವಯಾನ ಎನ್ನುವ ಕವನ ಸಂಕಲನ ಪುಸ್ತಕ ಬರೆದಿರುತ್ತೇನೆ. ಎನ್ನ ತುಳು ಸಿನಿಮಾದಲ್ಲಿ ನಟನೆ ಕೂಡ ಮಾಡಿದ್ದಾರೆ. ಸಾಮಾಜಿಕವಾಗಿ ಕೆಲಸ ಮಾಡುವ ಛಲದೊಂದಿಗೆ ಹೊಸ ಹೊಸ ಯೋಜನೆಗಳ ಮೂಲಕ ಮುಂದುವರಿಯುತ್ತಿದ್ದಾರೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top