ವೇಷ ಬೇರೆ
ಭಾಷೆ ಬೇರೆ
ದೇಶ ಒಂದೇ ಅಲ್ಲವೇನು?
ವೃತ್ತಿ ಬೇರೆ
ಧರ್ಮ ಬೇರೆ
ಮಾತೃಭೂಮಿ ಒಂದೇ ಅಲ್ಲವೇನು?
ರಾಜ್ಯ ಬೇರೆ
ಮಾತು ಬೇರೆ
ರಾಷ್ಟ್ರ ಒಂದೇ ಅಲ್ಲವೇನು?
ನಾನು ಬೇರೆ
ನೀನು ಬೇರೆ
ಎಲ್ಲರೂ ಭಾರತಾಂಬೆಯ ಮಕ್ಕಳಲ್ಲವೇನು
ನಾನು ಬೇರೆ
ನೀನು ಬೇರೆ ಎಂದು
ಬಡಿದಾಡಿ ಪ್ರಯೋಜನವೇನು?
ಬೇರೆಯವರ ದ್ವೇಷ ಅಸೂಯೆಗೆ
ಬಲಿಯಾಗದಿರೋಣವೇನು
ನಾವೆಲ್ಲ ಒಂದೇ ಎಂದು ಕೂಗಿ ಹೇಳಿಬಿಡೋಣ ಇನ್ನು !
- ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ